ಅಯ್ಯಯ್ಯೋ.. ಮಳೆ ನೀರಿನಲ್ಲಿ ಮುಳುಗಿಯೇ ಹೋಯ್ತು ಅಗ್ನಿಶಾಮಕ ಠಾಣೆ: ವಿಡಿಯೋ ನೋಡಿ
ಶಿರಹಟ್ಟಿ ಸೇರಿದಂತೆ ಗದಗ ಜಿಲ್ಲೆಯ ಹಲವೆಡೆ ಭಾರಿ ಮಳೆ ಆಗಿದ್ದು, ಜನ ಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಮಳೆಯ ಆರ್ಭಟಕ್ಕೆ ಅಗ್ನಿಶಾಮಕ ಠಾಣೆ ಜಲಾವೃತವಾಗಿದೆ. ಶಿರಹಟ್ಟಿ ಪಟ್ಟಣದ ಅಗ್ನಿಶಾಮಕ ಠಾಣೆಗೆ ಮಳೆ ನೀರು ನುಗ್ಗಿದ್ದು, ಸಿಬ್ಬಂದಿಗಳು ಪರದಾಡಿದ್ದಾರೆ. ರಾಜ್ಯಾದ್ಯಂತ ಮುಂಗಾರು ಮಳೆ ಪ್ರವೇಶ ಹಿನ್ನೆಲೆ ಗದಗ ಜಿಲ್ಲೆಯ ಹಲವೆಡೆ ಭಾರಿ ಮಳೆ ಆಗಿದೆ.
ಗದಗ, ಜೂನ್ 03: ಮುಂಗಾರು ಮಳೆ ಪ್ರವೇಶ ಹಿನ್ನೆಲೆ ರಾಜ್ಯಾದ್ಯಂತ ಮಳೆರಾಯ (rain) ಆರ್ಭಟಿಸುತ್ತಿದ್ದಾನೆ. ಕಳೆದ ಒಂದು ವಾರದ ಬಳಿಕ ರಾಜ್ಯದ ಹಲವೆಡೆ ಜೋರು ಮಳೆ ಆಗುತ್ತಿದೆ. ಇಂದು ಕೂಡ ಹಲವೆಡೆ ಗುಡುಗು ಮಿಂಚು ಸಹಿತ ಮಳೆ ಸುರಿದಿದೆ. ಜೊತೆಗೆ ಹತ್ತಾರು ಅವಾಂತರಗಳನ್ನು ಸೃಷ್ಟಿಸಿದೆ. ಕೆಲವೆಡೆ ಬೆಳೆ ನಾಶವಾದರೆ, ಇನ್ನೊಂದೆಡೆ ಮರಗಳು ಧರೆಗುರುಳಿವೆ. ಇನ್ನು ಶಿರಹಟ್ಟಿ ಸೇರಿದಂತೆ ಗದಗ ಜಿಲ್ಲೆಯ ಹಲವೆಡೆ ಭಾರಿ ಮಳೆ ಆಗಿದ್ದು, ಜನ ಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಮಳೆಯ ಆರ್ಭಟಕ್ಕೆ ಅಗ್ನಿಶಾಮಕ ಠಾಣೆ (fire station) ಜಲಾವೃತವಾಗಿದೆ. ಶಿರಹಟ್ಟಿ ಪಟ್ಟಣದ ಅಗ್ನಿಶಾಮಕ ಠಾಣೆಗೆ ಮಳೆ ನೀರು ನುಗ್ಗಿದ್ದು, ಸಿಬ್ಬಂದಿಗಳು ಪರದಾಡಿದ್ದಾರೆ. ವಿಡಿಯೋ ನೋಡಿ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
Latest Videos