ಹರೀಶ್ ಪೂಂಜಾ ಮನೆಮುಂದೆ ಪೊಲೀಸರೊಂದಿಗೆ ಶಾಸಕನ ಬೆಂಬಲಿಗರ ವಾಗ್ವಾದ, ದೊಂಬಿಯಂಥ ಸನ್ನಿವೇಶ!

ಹರೀಶ್ ಪೂಂಜಾ ಮನೆಮುಂದೆ ಪೊಲೀಸರೊಂದಿಗೆ ಶಾಸಕನ ಬೆಂಬಲಿಗರ ವಾಗ್ವಾದ, ದೊಂಬಿಯಂಥ ಸನ್ನಿವೇಶ!

ಅರುಣ್​ ಕುಮಾರ್​ ಬೆಳ್ಳಿ
|

Updated on: May 22, 2024 | 5:51 PM

ಸಹಸ್ರಾರು ಸಂಖ್ಯೆಯಲ್ಲಿ ಬೆಂಬಲಿಗರು ಶಾಸಕನ ಮನೆ ಮುಂದೆ ಜಮಾಯಿಸಿ ಪೊಲೀಸರಿಗೆ ಅಡ್ಡಿಯುಂಟು ಮಾಡುತ್ತಿರುವುದು ಮತ್ತು ಪೊಲೀಸ್ ಅಧಿಕಾರಿಗಳೊಂದಿಗೆ ವಾದ ಮಾಡುತ್ತಿರುವುದಯ ಪರಿಸ್ಥಿತಿಯನ್ನು ಮತ್ತಷ್ಟು ಬಿಗಡಾಯಿಸುತ್ತದೆಯೇ ಹೊರತು ಇತ್ಯರ್ಥವಾಗಲ್ಲ, ಯಾಕೆಂದರೆ ಹರೀಶ್ ಪೂಂಜಾ ವಿರುದ್ಧ ಈಗಾಗಲೇ ಎಫ್ಐಅರ್ ದಾಖಲಾಗಿದೆ.

ಮಂಗಳೂರು: ಬೆಳ್ತಂಗಡಿಯ ಬಿಜೆಪಿ ಶಾಸಕ ಹರೀಶ್ ಪೂಂಜಾ (Harish Poonja) ಪೊಲೀಸರಿಗೆ ಬೆದರಿಕೆ ಹಾಕಿರುವ ಹಿನ್ನೆಲೆಯಲ್ಲಿ ಅವರ ವಿರುದ್ಧ ಪ್ರಕರಣ (case registered) ದಾಖಲಾಗಿದ್ದು ಅವರನ್ನು ಬಂಧಿಸಲು ಪೊಲೀಸರು ಹೋದಾಗ ಶಾಸಕನ ಬೆಂಬಲಿಗರು ಪೊಲೀಸರಿಗೆ ತಮ್ಮ ಕರ್ತವ್ಯ ನಿರ್ವಹಿಸದಂತೆ ಅಡ್ಡಿಪಡಿಸಿದ್ದಾರೆ. ಪೊಲೀಸರು ಶಾಸಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ ವಾಪಸ್ಸು ಕಳಿಸುತ್ತಾರೆ ಇಲ್ಲವೇ ನ್ಯಾಯಾಲಯದ ಮುಂದೆ ಹಾಜರು ಪಡಿಸುತ್ತಾರೆ. ಶಾಸಕ ನ್ಯಾಯಾಲಯಕ್ಕೆ ಜಾಮೀನು ಅರ್ಜಿ ಸಲ್ಲಿಸಿ ಬೇಲ್ ಪಡೆದುಕೊಳ್ಳುತ್ತಾರೆ. ಇದು ಕಾನೂನು ಪ್ರಕ್ರಿಯೆ. ಆದರೆ, ಶಾಸಕ ಹರೀಶ್ ಮತ್ತು ಅವರ ಬೆಂಬಲಿಗರು ವಿನಾಕಾರಣ ದೊಂಬಿ ಸೃಷ್ಟಿಸುತ್ತಿದ್ದಾರೆ. ಶಾಸಕ ಪೊಲೀಸರಿಗೆ ಬೆದರಿಕೆಯೊಡ್ಡಿದ್ದು ತಪ್ಪೆಂದು ಖುದ್ದು ಪಕ್ಷದ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹೇಳಿದ್ದಾರೆ. ಹರೀಶ್ ತಾವೇ ಪೊಲೀಸರಿಗೆ ಶರಣಾಗಿ ಕಾನೂನು ಪ್ರಕ್ರಿಯೆಯಲ್ಲಿ ಸಹಕರಿಸಿದರೆ ಈ ಸನ್ನಿವೇಶ ಸೃಷ್ಟಿಯಾಗುತ್ತಿರಲಿಲ್ಲ. ಸಹಸ್ರಾರು ಸಂಖ್ಯೆಯಲ್ಲಿ ಬೆಂಬಲಿಗರು ಶಾಸಕನ ಮನೆ ಮುಂದೆ ಜಮಾಯಿಸಿ ಪೊಲೀಸರಿಗೆ ಅಡ್ಡಿಯುಂಟು ಮಾಡುತ್ತಿರುವುದು ಮತ್ತು ಪೊಲೀಸ್ ಅಧಿಕಾರಿಗಳೊಂದಿಗೆ ವಾದ ಮಾಡುತ್ತಿರುವುದಯ ಪರಿಸ್ಥಿತಿಯನ್ನು ಮತ್ತಷ್ಟು ಬಿಗಡಾಯಿಸುತ್ತದೆಯೇ ಹೊರತು ಇತ್ಯರ್ಥವಾಗಲ್ಲ, ಯಾಕೆಂದರೆ ಹರೀಶ್ ಪೂಂಜಾ ವಿರುದ್ಧ ಈಗಾಗಲೇ ಎಫ್ಐಅರ್ ದಾಖಲಾಗಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ಸಿಎಂ ಆದ ಬೆನ್ನಲ್ಲೇ ಸಿದ್ದರಾಮಯ್ಯ ವಿರುದ್ಧ ವಿವಾದಾತ್ಮಕ ಹೇಳಿಕೆ: ಬಿಜೆಪಿ ಶಾಸಕ ಹರೀಶ್ ಪೂಂಜಾ ವಿರುದ್ಧ ದೂರು