ಕೆ.ಎಸ್. ಈಶ್ವರಪ್ಪ ಈ ಹೇಳಿಕೆ ನೀಡಿದ್ರು ಅಂತ ಅಧಿವೇಶನ ಮೊಟಕುಗೊಳಿಸಿದ್ರು. ಆದರೆ, ಕೆಂಪುಕೋಟೆಯ ಮೇಲೆ ಭಗವಾಧ್ವಜ ಹಾರಿಸೋದು ಸಿದ್ದ. ರಾಷ್ಟ್ರಧ್ವಜದ ಕೆಳಗೆ ಭಗವಾಧ್ವಜವನ್ನ ಹಾರಿಸುತ್ತೇವೆ. ಭಗವಾಧ್ವಜ ಹಾರಿಸೋದನ್ನ ಯಾರಿಂದಲೂ ತಪ್ಪಿಸಲಾಗಲ್ಲ ಎಂದು ಬಿಜೆಪಿ ಶಾಸಕ ಹರೀಶ್ ಪೂಂಜಾ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಶಿವಮೊಗ್ಗದ ಹರ್ಷ ಹತ್ಯೆ ಖಂಡಿಸಿ ಹಿಂದೂ ಜನಜಾಗೃತಿ ಸಮಿತಿ ನಡೆಸಿದ ಪ್ರತಿಭಟನೆಯಲ್ಲಿ ಹೇಳಿಕೆ ನೀಡಲಾಗಿದೆ ಎಂಬ ಮಾಹಿತಿ ಲಭಿಸಿದೆ.
ತುಳು ಭಾಷೆಯಲ್ಲಿ ಹರೀಶ್ ಪೂಂಜಾ ಮಾಡಿದ ಭಾಷಣದ ತುಣುಕು ವೈರಲ್ ಆಗಿದೆ. ಕಾಂಗ್ರೆಸ್ ಷಡ್ಯಂತ್ರ, ಪ್ರೇರಣೆ ಮತ್ತು ಕುಮ್ಮಕ್ಕಿನಿಂದ ಹಿಂದೂ ಕಾರ್ಯಕರ್ತನ ಹತ್ಯೆ ಆಗಿದೆ. ಕೆಂಪುಕೋಟೆಯ ಮೇಲೆ, ರಾಷ್ಟ್ರಧ್ವಜದ ಕೆಳಗೆ ಭಗವಾಧ್ಬಜ ಹಾರಿಸೋದನ್ನು ಯಾವ ಪಕ್ಷದಿಂದಲೂ ತಪ್ಪಿಸೋದಕ್ಕೆ ಸಾಧ್ಯವೇ ಇಲ್ಲ. ಇದು ಭಾರತೀಯ ಜನತಾ ಪಾರ್ಟಿ ಮತ್ತು ಹಿಂದೂ ಸಮಾಜದ ಸಂಕಲ್ಪ. ದೇಶಕ್ಕೆ ಸ್ವಾತಂತ್ರ್ಯ ಸಿಗಲು ಬಾಲಗಂಗಾಧರ ತಿಲಕರು ಭಗವಾಧ್ಬಜ ಎದುರಿಟ್ಟು ಹೋರಾಟ ಮಾಡಿದ್ರು. ಅದಕ್ಕೂ ಮೊದಲು ಹಿಂದೂ ಸಮಾಜದ ಶಕ್ತಿಯಾಗಿದ್ದ ಶಿವಾಜಿ ಮಹಾರಾಜರ ಶಕ್ತಿಯೂ ಭಗವಾಧ್ವಜ ಆಗಿತ್ತು ಎಂದು ಪೂಂಜಾ ಹೇಳಿದ್ದಾರೆ.
ಇದನ್ನೂ ಓದಿ: ಆಳಂದ ಚಲೋ ಹಿನ್ನೆಲೆ: ಕಲಬುರಗಿಯ ಕೆಲವೆಡೆ ನಿಷೇಧಾಜ್ಞೆ; ಜಿಲ್ಲೆಗೆ ಪ್ರಮೋದ್ ಮುತಾಲಿಕ್, ಚೈತ್ರಾ ಕುಂದಾಪುರಗೆ ನಿರ್ಬಂಧ
ಇದನ್ನೂ ಓದಿ: ಜಾತ್ಯತೀತತೆ ಉಳಿಯಲು ಹಿಂದೂಗಳು ಬಹುಸಂಖ್ಯೆಯಲ್ಲಿರಬೇಕು: ಬಿಜೆಪಿ ನಾಯಕ ಪ್ರಲ್ಹಾದ್ ಜೋಶಿ