ನೀತಿ ಸಂಹಿತೆ ಜಾರಿಯಲ್ಲಿದ್ದರೂ ಚುನಾವಣಾ ಆಯೋಗ ಅನುಮತಿ ಪಡೆದು ನಗರ ಪ್ರದಕ್ಷಿಣೆ ಮಾಡಿದ್ದೇವೆ: ಸಿದ್ದರಾಮಯ್ಯ
ಈಜಿಪುರ ಮೇಲ್ಸೇತುವೆ ಕಾಮಗಾರಿ ಬಹಳ ದಿನಗಳಿಂದ ನೆನೆಗುದಿಗೆ ಬಿದ್ದಿದೆ, ಅದರ ಕಾಮಗಾರಿ ಟೆಂಡರ್ ಪಡೆದಿದ್ದ ಗುತ್ತಿಗೆದಾರ ಕೇವಲ ಶೇಕಡ 5ರಷ್ಟು ಮಾತ್ರ ಕೆಲಸ ಮಾಡಿದ್ದಾನೆ. ಅವನಿಗೆ ನೀಡಿದ ಗುತ್ತಿಗೆಯನ್ನು ರದ್ದು ಮಾಡಿ ಬೇರೆಯವರಿಗೆ ನೀಡಲು ಡಿಕೆ ಶಿವಕುಮಾರ್ ಹೇಳಿದ್ದಾರೆ ಮತ್ತು ತಾವು ಸಹ ಹೇಳಿರುವುದಾಗಿ ಸಿದ್ದರಾಮಯ್ಯ ಹೇಳಿದರು.
ಬೆಂಗಳೂರು: ಮಳೆಗಾಲ ಇನ್ನೇನು ಶುರುವಾಗೋದ್ರಲ್ಲಿದೆ ಮತ್ತು ಇದೇ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ನಗರ ಪ್ರದಕ್ಷಿಣೆಗೆ (city rounds) ತೆರಳಿ ಮಳೆ ಸುರಿಯಲಾರಂಭಿಸಿದಾಗ ಜನಕ್ಕೆ ಸಮಸ್ಯೆಗಳನ್ನು ಸೃಷ್ಟಿ ಮಾಡಲಿರುವ ಸ್ಥಳಗಳ ಪರಿಶೀಲನೆ ನಡೆಸಿ ಆಯಾ ಸ್ಥಳದ ಮುಖ್ಯಮಂತ್ರಿ ಸಿನಿವಾಸಿಗಳ ಅಳಲನ್ನು ಆಲಿಸಿದರು. ನಂತರ ಪತ್ರಿಕಾ ಗೋಷ್ಠಿಯೊಂದನ್ನು ನಡೆಸಿ ಮಾತಾಡಿದ ಅವರು, ಸಿಲ್ಕ್ ಬೋರ್ಡ್ ಪ್ರದೇಶದಲ್ಲಿ ಬಿಎಂಆರ್ ಸಿಎಲ್ ಸಂಸ್ಥೆ (BMRCL) ನಿರ್ಮಿಸಿರುವ ಒಳಚರಂಡಿಗಳು ಚಿಕ್ಕವು ಮತ್ತು ಅವುಗಳ ಮೂಲಕ ಮಳೆನೀರು ಸಲೀಸಾಗಿ ಹರಿದು ಹೋಗಲ್ಲ, ಆಗ ನೀರು ರಸ್ತೆಗಳ ಮೇಲೆ ಬಂದು ಇಳಿಜಾರು ಪ್ರದೇಶಗಳಲ್ಲಿನ ಮನೆಗಳಿಗೆ ನುಗ್ಗುತ್ತದೆ, ಹಾಗಾಗಿ ಚರಂಡಿಗಳನ್ನು ಅಗಲ ಮಾಡಲು ಸೂಚಿಸಲಾಗಿದೆ ಎಂದು ಹೇಳಿದರು. ಬೊಮ್ಮನಹಳ್ಳಿ ಕ್ಷೇತ್ರದಲ್ಲಿರುವ ಮಡಿವಾಳ ಕೆರೆಗೆ ನೀರು ಹರಿದು ಹೋಗಲು ಮತ್ತೊಂದು ಒಳಚರಂಡಿ ಬೇಕೆಂದು ಅಲ್ಲಿನ ನಿವಾಸಿಗಳು ಕೇಳಿದ್ದಾರೆ ಎಂದ ಮುಖ್ಯಮಂತ್ರಿ ಈಜಿಪುರ ಮೇಲ್ಸೇತುವೆ ಕಾಮಗಾರಿ ಬಹಳ ದಿನಗಳಿಂದ ನೆನೆಗುದಿಗೆ ಬಿದ್ದಿದೆ, ಅದರ ಕಾಮಗಾರಿ ಟೆಂಡರ್ ಪಡೆದಿದ್ದ ಗುತ್ತಿಗೆದಾರ ಕೇವಲ ಶೇಕಡ 5ರಷ್ಟು ಮಾತ್ರ ಕೆಲಸ ಮಾಡಿದ್ದಾನೆ. ಅವನಿಗೆ ನೀಡಿದ ಗುತ್ತಿಗೆಯನ್ನು ರದ್ದು ಮಾಡಿ ಬೇರೆಯವರಿಗೆ ನೀಡಲು ಡಿಕೆ ಶಿವಕುಮಾರ್ ಹೇಳಿದ್ದಾರೆ ಮತ್ತು ತಾವು ಸಹ ಹೇಳಿರುವುದಾಗಿ ಸಿದ್ದರಾಮಯ್ಯ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ನಾನು ಮಂಡಿಸಿದ 2024-25 ಸಾಲಿನ ಬಜೆಟ್ ಓದದೆ ಬಿಜೆಪಿ ನಾಯಕರು ಅಭಿವೃದ್ಧಿ ಶೂನ್ಯ ಅನ್ನುತ್ತಾರೆ: ಸಿದ್ದರಾಮಯ್ಯ