ED ತನಿಖೆಯಲ್ಲಿ KPSC ಕರ್ಮಕಾಂಡ ಸ್ಫೋಟಕ ಸಂಗತಿ ಬಯಲು

Updated on: Aug 20, 2026 | 10:07 PM

ಕಳೆದ ಜನವರಿ 8ರಂದು ಕೆಪಿಎಸ್​ಸಿ 400 ಪಶು ವೈದ್ಯಾಧಿಕಾರಿಗಳ ಹುದ್ದೆಗೆ ಪರೀಕ್ಷೆ ನಡೆಸಿತ್ತು. ಫಲಿತಾಂಶ ಪ್ರಕಟವಾಗಿ ಅಭ್ಯರ್ಥಿಗಳು ಆಯ್ಕೆಯಾಗಿದ್ದರು. ನೇಮಕವಾದವ್ರು ಕೆಲ್ಸ ಸಿಕ್ತು ಅಂತ ಖುಷಿಯಲ್ಲಿದ್ರು. ಸಿಗದವರು ಮತ್ತೊಮ್ಮೆ ಯತ್ನಿಸೋಣ ಅಂತಾ ಸಮಾಧಾನಗೊಂಡಿದ್ರು. ಇದರ ಮಧ್ಯೆ ಈ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ. ಒಂದು ಹುದ್ದೆಗೆ 80 ಲಕ್ಷ ಬೇಡಿಕೆ ಇಟ್ಟಿದ್ದಾರೆಂಬ ಆರೋಪ ಕೇಳಿಬಂದಿತ್ತು. ಈ ಸಂಬಂಧ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ 4 ಎಫ್​ಐಆರ್ ದಾಖಲಾಗಿತ್ತು. ಈ ಪ್ರಕರಣದಲ್ಲೀಗ ಇಡಿ ಎಂಟ್ರಿಕೊಟ್ಟಿದ್ದು, ಮೆಗಾ ರೇಡ್ ನಡೆಸಿತ್ತು. ತನಿಖೆಯಲ್ಲಿ ಸ್ಫೋಟಕ ಮಾಹಿತಿ ಬಹಿರಂಗಗೊಂಡಿದೆ.

ಬೆಂಗಳೂರು, (ಆಗಸ್ಟ್ 20): ಕಳೆದ ಜನವರಿ 8ರಂದು ಕೆಪಿಎಸ್​ಸಿ 400 ಪಶು ವೈದ್ಯಾಧಿಕಾರಿಗಳ ಹುದ್ದೆಗೆ ಪರೀಕ್ಷೆ ನಡೆಸಿತ್ತು. ಫಲಿತಾಂಶ ಪ್ರಕಟವಾಗಿ ಅಭ್ಯರ್ಥಿಗಳು ಆಯ್ಕೆಯಾಗಿದ್ದರು. ನೇಮಕವಾದವ್ರು ಕೆಲ್ಸ ಸಿಕ್ತು ಅಂತ ಖುಷಿಯಲ್ಲಿದ್ರು. ಸಿಗದವರು ಮತ್ತೊಮ್ಮೆ ಯತ್ನಿಸೋಣ ಅಂತಾ ಸಮಾಧಾನಗೊಂಡಿದ್ರು. ಇದರ ಮಧ್ಯೆ ಈ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ. ಒಂದು ಹುದ್ದೆಗೆ 80 ಲಕ್ಷ ಬೇಡಿಕೆ ಇಟ್ಟಿದ್ದಾರೆಂಬ ಆರೋಪ ಕೇಳಿಬಂದಿತ್ತು. ಈ ಸಂಬಂಧ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ 4 ಎಫ್​ಐಆರ್ ದಾಖಲಾಗಿತ್ತು. ಈ ಪ್ರಕರಣದಲ್ಲೀಗ ಇಡಿ ಎಂಟ್ರಿಕೊಟ್ಟಿದ್ದು, ಮೆಗಾ ರೇಡ್ ನಡೆಸಿತ್ತು. ತನಿಖೆಯಲ್ಲಿ ಸ್ಫೋಟಕ ಮಾಹಿತಿ ಬಹಿರಂಗಗೊಂಡಿದೆ.

400 ಪಶು ವೈದ್ಯಾಧಿಕಾರಿಗಳ ಪರೀಕ್ಷೆಗೂ ಮುನ್ನವೇ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿತ್ತು ಎನ್ನಲಾಗುತ್ತಿದೆ. ಇಷ್ಟೇ ಅಲ್ದೇ, ಆಯ್ದ ಅಭ್ಯರ್ಥಿಗಳು ಅಂದ್ರೆ ದುಡ್ಡು ಕೊಟ್ಟ ಅಭ್ಯರ್ಥಿಗಳಿಗೆ ರೆಸಾರ್ಟ್​​​​​ನಲ್ಲಿ ತರಬೇತಿ ನೀಡಲಾಗಿದೆ ಅನ್ನೋದು ಇಡಿ ದಾಳಿ ವೇಳೆ ಬಹಿರಂಗಗೊಂಡಿದೆ. ಹೀಗಾಗಿ, ಅಭ್ಯರ್ಥಿಗಳ ಜೊತೆಗೆ ರೆಸಾರ್ಟ್ ಮೇಲೆ ದಾಳಿ ನಡೆಸಿರೋ ಇಡಿ, ಸಿಸಿಟಿವಿ ದೃಶ್ಯ ಸಂಗ್ರಹಿಸುತ್ತಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us