KD Movie Teaser: ‘ಕೆಡಿ’ ಸಿನಿಮಾ ಟೀಸರ್ ಬಗ್ಗೆ ಅಪ್ಡೇಟ್ ನೀಡಿದ ಪ್ರೇಮ್
ಪ್ರೇಮ್ ಅವರು ಮೈಸೂರಿನ ಚಾಮುಂಡೇಶ್ವರಿ ಬೆಟ್ಟಕ್ಕೆ ಆಗಮಿಸಿದ್ದರು. ಇವರ ಜೊತೆ ಸಂಜಯ್ ದತ್ ಕೂಡ ಇದ್ದರು ಅನ್ನೋದು ವಿಶೇಷ.
‘ಜೋಗಿ’ ಪ್ರೇಮ್ (Prem) ನಿರ್ದೇಶನದ ‘ಕೆಡಿ’ ಸಿನಿಮಾದ ಕೆಲಸಗಳು ಭರದಿಂದ ಸಾಗುತ್ತಿವೆ. ಜುಲೈ 17ರಂದು ಪ್ರೇಮ್ ಅವರು ಮೈಸೂರಿನ ಚಾಮುಂಡೇಶ್ವರಿ ಬೆಟ್ಟಕ್ಕೆ ಆಗಮಿಸಿದ್ದರು. ಇವರ ಜೊತೆ ಸಂಜಯ್ ದತ್ ಕೂಡ ಇದ್ದರು ಅನ್ನೋದು ವಿಶೇಷ. ಮಾಧ್ಯಮಗಳನ್ನು ಎದುರುಗೊಂಡ ಸಂಜಯ್ ದತ್ಗೆ ‘ಕೆಡಿ’ ಸಿನಿಮಾ (KD Movie) ಟೀಸರ್ ಬಗ್ಗೆ ಪ್ರಶ್ನೆ ಮಾಡಲಾಯಿತು. ‘ಶೀಘ್ರದಲ್ಲೇ ಟೀಸರ್ ರಿಲೀಸ್ ಮಾಡ್ತೀವಿ’ ಎಂದು ಪ್ರೇಮ್ ಹೇಳಿದ್ದಾರೆ. ಈ ಮೂಲಕ ಸಸ್ಪೆನ್ಸ್ ಉಳಿಸಿದ್ದಾರೆ. ಇವರನ್ನು ನೋಡಲು ಅಭಿಮಾನಿಗಳು ದೊಡ್ಡ ಸಂಖ್ಯೆಯಲ್ಲಿ ನೆರೆದಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ