Boult Crown Smartwatch: ಆ್ಯಪಲ್ ವಾಚ್ ಅಲ್ಟ್ರಾ ಡಿಸೈನ್​ನಲ್ಲಿ ಬಂತು ಬೋಲ್ಟ್ ಸ್ಮಾರ್ಟ್​ವಾಚ್

Boult Crown Smartwatch: ಆ್ಯಪಲ್ ವಾಚ್ ಅಲ್ಟ್ರಾ ಡಿಸೈನ್​ನಲ್ಲಿ ಬಂತು ಬೋಲ್ಟ್ ಸ್ಮಾರ್ಟ್​ವಾಚ್

ಕಿರಣ್​ ಐಜಿ
|

Updated on: Jul 18, 2023 | 9:56 AM

ಜನರ ಬೇಡಿಕೆ ಮತ್ತು ಅವಶ್ಯಕತೆಗೆ ಅನುಗುಣವಾಗಿ, ಬೋಲ್ಟ್ ಕಂಪನಿ ಕ್ರೌನ್ ಹೆಸರಿನ ನೂತನ ಸ್ಮಾರ್ಟ್​ವಾಚ್ ಅನ್ನು ದೇಶದಲ್ಲಿ ಬಿಡುಗಡೆ ಮಾಡಿದೆ. ಆ್ಯಪಲ್ ಕಂಪನಿಯ ವಾಚ್ ಅಲ್ಟ್ರಾ ವಿನ್ಯಾಸ ಹೋಲುವ ಈ ಸ್ಮಾರ್ಟ್​ವಾಚ್, ಗ್ಯಾಜೆಟ್ ಮಾರುಕಟ್ಟೆಯಲ್ಲಿ ಲಭ್ಯವಿದೆ. ಹೆಚ್ಚಿನ ವಿವರ ನಿಮಗಾಗಿ ಇಲ್ಲಿದೆ..

ಸ್ಮಾರ್ಟ್​ವಾಚ್ ಮಾರುಕಟ್ಟೆಯಲ್ಲಿ ಫೀಚರ್ಸ್ ಜತೆಗೆ ಡಿಸೈನ್ ಕೂಡ ಈಗ ಹೆಚ್ಚು ಪ್ರಾಮುಖ್ಯತೆ ಪಡೆಯುತ್ತಿದೆ. ವಿವಿಧ ಬ್ರ್ಯಾಂಡ್​ಗಳ ಹತ್ತು ಹಲವು ಸ್ಮಾರ್ಟ್​ವಾಚ್​ಗಳು ಮಾರುಕಟ್ಟೆ ಪ್ರವೇಶಿಸುತ್ತಿರುವುದರಿಂದ, ಜನರು ಹೆಚ್ಚಿನ ಆಯ್ಕೆ ಬಯಸುತ್ತಿದ್ದಾರೆ. ಜನರ ಬೇಡಿಕೆ ಮತ್ತು ಅವಶ್ಯಕತೆಗೆ ಅನುಗುಣವಾಗಿ, ಬೋಲ್ಟ್ ಕಂಪನಿ ಕ್ರೌನ್ ಹೆಸರಿನ ನೂತನ ಸ್ಮಾರ್ಟ್​ವಾಚ್ ಅನ್ನು ದೇಶದಲ್ಲಿ ಬಿಡುಗಡೆ ಮಾಡಿದೆ. ಆ್ಯಪಲ್ ಕಂಪನಿಯ ವಾಚ್ ಅಲ್ಟ್ರಾ ವಿನ್ಯಾಸ ಹೋಲುವ ಈ ಸ್ಮಾರ್ಟ್​ವಾಚ್, ಗ್ಯಾಜೆಟ್ ಮಾರುಕಟ್ಟೆಯಲ್ಲಿ ಲಭ್ಯವಿದೆ. ಹೆಚ್ಚಿನ ವಿವರ ನಿಮಗಾಗಿ ಇಲ್ಲಿದೆ..