ರಾಜಕಾರಣಿಗಳಿಂದ ಮಹಿಳೆಯರಿಗೆ ಅವಮಾನ; ಜ್ಯೂ. ಎನ್ಟಿಆರ್ ನೀಡಿದ ಎಚ್ಚರಿಕೆ ಸಂದೇಶದ ವಿಡಿಯೋ ಇಲ್ಲಿದೆ
Jr NTR: ‘ಮಹಿಳೆಯರ ವೈಯಕ್ತಿಕ ಬದುಕಿನ ಬಗ್ಗೆ ನಾವು ಕೆಟ್ಟ ಮಾತುಗಳನ್ನು ಆಡಿದರೆ ಅಲ್ಲಿಂದಲೇ ಅರಾಜಕತೆ ಆರಂಭ ಆಗುತ್ತದೆ’ ಎಂದು ಜ್ಯೂ. ಎನ್ಟಿಆರ್ ಹೇಳಿದ್ದಾರೆ. ಅವರ ಈ ವಿಡಿಯೋ ವೈರಲ್ ಆಗುತ್ತಿದೆ.
‘ತೆಲುಗು ದೇಶಂ ಪಾರ್ಟಿ’ ಮುಖಂಡ ಚಂದ್ರಬಾಬು ನಾಯ್ಡು ಅವರ ಪತ್ನಿ ಭುವನೇಶ್ವರಿ ಬಗ್ಗೆ ಆಂಧ್ರದ ರಾಜಕಾರಣಿಗಳು ಅವಹೇಳನಕಾರಿ ಮಾತುಗಳನ್ನು ಆಡಿದ್ದಾರೆ. ಇದರ ವಿರುದ್ಧ ಅನೇಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅವಹೇಳನಕಾರಿ ಹೇಳಿಕೆಗಳನ್ನು ಸೆಲೆಬ್ರಿಟಿಗಳು ಕೂಡ ಖಂಡಿಸುತ್ತಿದ್ದಾರೆ. ಈ ಬಗ್ಗೆ ‘ಆರ್ಆರ್ಆರ್’ ಸಿನಿಮಾ ನಟ ಜ್ಯೂ. ಎನ್ಟಿಆರ್ ಪ್ರತಿಕ್ರಿಯೆ ನೀಡಿದ್ದಾರೆ. ‘ನಮ್ಮ ಮಾತು ನಮ್ಮ ವ್ಯಕ್ತಿತ್ವವನ್ನು ತೋರಿಸುತ್ತದೆ. ರಾಜಕಾರಣದಲ್ಲಿ ಟೀಕೆಗಳು ಸಹಜ. ಆದರೆ ಆದರೆ ಆ ಟೀಕೆಗಳು ಜನರ ಸಮಸ್ಯೆ ಪರಿಹರಿಸುವುದಕ್ಕೆ ಇರಬೇಕೇ ಹೊರತು ಯಾರೊಬ್ಬರ ವೈಯಕ್ತಿಕ ಬದುಕಿನ ಬಗ್ಗೆ ಇರಬಾರದು. ಮಹಿಳೆಯರ ವೈಯಕ್ತಿಕ ಬದುಕಿನ ಬಗ್ಗೆ ನಾವು ಕೆಟ್ಟ ಮಾತುಗಳನ್ನು ಆಡಿದರೆ ಅಲ್ಲಿಂದಲೇ ಅರಾಜಕತೆ ಆರಂಭ ಆಗುತ್ತದೆ. ನಾನು ಭವನೇಶ್ವರಿ ಅವರ ಕುಟುಂಬಕ್ಕೆ ಸೇರಿದವನು ಅಂತ ಈ ಪ್ರತಿಕ್ರಿಯೆ ನೀಡುತ್ತಿಲ್ಲ. ಒಬ್ಬ ಮಗನಾಗಿ, ತಂದೆಯಾಗಿ, ಪತಿಯಾಗಿ ಮತ್ತು ಈ ದೇಶದ ಜವಾಬ್ದಾರಿಯುತ ಪ್ರಜೆಯಾಗಿ ಈ ಮಾತುಗಳನ್ನು ಹೇಳುತ್ತಿದ್ದೇನೆ’ ಎಂದಿದ್ದಾರೆ ಜ್ಯೂ. ಎನ್ಟಿಆರ್.
ಇದನ್ನೂ ಓದಿ:
ಆರ್ಆರ್ಆರ್ ಚಿತ್ರದ ಪ್ರಮೋಷನ್ಗಾಗಿ ದೊಡ್ಡ ತ್ಯಾಗಕ್ಕೆ ಸಿದ್ಧರಾದ ಜ್ಯೂ.ಎನ್ಟಿಆರ್