‘ಯುದ್ಧ ಬಂದಾಗ ಶಸ್ತ್ರಾಭ್ಯಾಸ ಮಾಡುವವನು ನಾನಲ್ಲ’; ಕೆ ಕಲ್ಯಾಣ್

Updated on: Jul 23, 2025 | 11:48 AM

ಸಂಗೀತ ಸಂಯೋಜಕ ಕೆ.ಕಲ್ಯಾಣ್ ಅವರು ಇತ್ತೀಚೆಗೆ ಒಂದು ಹೊಸ ಸಾಧನೆ ಮಾಡಿದ್ದಾರೆ. ಅವರು ಜೈಲಿನಲ್ಲಿರುವ ಕೈದಿಯಿಂದ ಹಾಡೊಂದನ್ನು ಹಾಡಿಸಿದ್ದಾರೆ. ಈ ವಿಚಾರ ಸಾಕಷ್ಟು ಅಚ್ಚರಿ ಮೂಡಿಸಿದೆ. ಈ ಬಗ್ಗೆ ಮಾತನಾಡುವಾಗ ಅವರು ಒಂದಷ್ಟು ವಿಷಯಗಳ ಬಗ್ಗೆ ಹೇಳಿಕೊಂಡಿದ್ದಾರೆ. ಆ ಬಗ್ಗೆ ಇಲ್ಲಿದೆ ವಿವರ.

ಸಂಗೀತ ಸಂಯೋಜಕ, ಗೀತ ಸಾಹಿತಿ ಕೆ. ಕಲ್ಯಾಣ್ (K Kalyan) ಅವರು ಸದಾ ಆ್ಯಕ್ಟೀವ್ ಆಗಿರುತ್ತಾರೆ. ಅವರು ಎಂದಿಗೂ ಆಫರ್​ಗಾಗಿ ಕಾದು ಕುಳಿತವರಲ್ಲವಂತೆ. ‘ನಾನು ಆಫರ್ ಬರುತ್ತದೆ ಎಂದು ಯಾವಾಗಲೂ ಕಾಯುತ್ತ ಕೂರುವುದಿಲ್ಲ. ನಾನು ಸದಾ ಆ್ಯಕ್ಟೀವ್ ಆಗಿರುತ್ತೇನೆ. ಆಫರ್ ಬಂದಾಗ ಒಪ್ಪಿ ಮಾಡುತ್ತೇನೆ. ನಾನು ಯುದ್ಧ ಬಂದಾಗ ಶಸ್ತ್ರಾಸ್ತ್ರಾಭ್ಯಾಸ ಮಾಡುವುದಿಲ್ಲ. ಅದಕ್ಕಾಗಿ ಸದಾ ಸಿದ್ಧನಾಗೇ ಇರುತ್ತೇನೆ’ ಎನ್ನುತ್ತಾರೆ ಅವರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us
ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More