‘ಕಬ್ಜ 2’ ಚಿತ್ರದಲ್ಲಿ ಇರ್ತಾರೆ ಹಲವು ಸ್ಟಾರ್ಸ್​; ಹೊಸ ವಿಚಾರ ರಿವೀಲ್ ಮಾಡಿದ ಆರ್. ಚಂದ್ರು

Updated on: Apr 15, 2023 | 9:09 AM

‘ಶೀಘ್ರದಲ್ಲೇ ಕಬ್ಜ 2 ಸಿನಿಮಾ ಆರಂಭ ಮಾಡ್ತೀವಿ. ಈ ಸಿನಿಮಾದಲ್ಲಿ ಹಲವು ಸ್ಟಾರ್ಸ್​ ಇರ್ತಾರೆ’ ಎಂದಿದ್ದಾರೆ ಚಂದ್ರು.

ಆರ್​. ಚಂದ್ರು ಅವರು ‘ಕಬ್ಜ’ ಸಿನಿಮಾ (Kabzaa Movie) ಸಕ್ಸಸ್​ ಆಗಿದೆ ಎಂದು ಹೇಳಿಕೊಂಡಿದ್ದಾರೆ. ಈ ಸಿನಿಮಾ ಅಮೇಜಾನ್ ಪ್ರೈಮ್ ವಿಡಿಯೋ ಮೂಲಕ ಪ್ರಸಾರ ಕಂಡಿದೆ. 25ನೇ ದಿನದ ಯಶಸ್ಸನ್ನು ಆಚರಿಸಲು ಚಿತ್ರತಂಡ ಸುದ್ದಿಗೋಷ್ಠಿ ಕರೆದಿತ್ತು. ಈ ವೇಳೆ ಆರ್​. ಚಂದ್ರು ಅವರು ಟಿವಿ9 ಕನ್ನಡದ ಜೊತೆಗೆ ಮಾತನಾಡಿದ್ದಾರೆ. ಈ ವೇಳೆ ಅವರು ‘ಕಬ್ಜ 2’ ಬಗ್ಗೆ ಮಾಹಿತಿ ನೀಡಿದ್ದಾರೆ. ‘ಶೀಘ್ರದಲ್ಲೇ ಕಬ್ಜ 2 ಸಿನಿಮಾ ಆರಂಭ ಮಾಡ್ತೀವಿ. ಈ ಸಿನಿಮಾದಲ್ಲಿ ಹಲವು ಸ್ಟಾರ್ಸ್​ ಇರ್ತಾರೆ’ ಎಂದಿದ್ದಾರೆ ಅವರು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published on: Apr 15, 2023 09:09 AM
Loading...
Unable to load recommendations.
Follow Us
ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More