ಕಲಬುರಗಿ ಬಂದ್​: ಕಿಡಿಗೇಡಿಗಳಿಂದ ಗೂಂಡಾ ವರ್ತನೆ; ಬೈಕ್ ಜಖಂ, ವ್ಯಾಪಾರಸ್ಥರ ಮೇಲೆ ದರ್ಪ

|

Updated on: Dec 24, 2024 | 2:03 PM

ಕೇಂದ್ರ ಸಚಿವ ಅಮಿತ್ ಶಾ ಅವರ ಹೇಳಿಕೆಯನ್ನು ಖಂಡಿಸಿ ಕಲಬುರಗಿಯಲ್ಲಿ ಪ್ರತಿಭಟನೆಗಳು ನಡೆದವು.ಪ್ರತಿಭಟನೆ ಹೆಸರಿನಲ್ಲಿ ಕೆಲವು ಕಡೆ ಕಿಡಿಗೇಡಿಗಳು ಗುಂಡಾ ವರ್ತನೆ ತೋರಿದ್ದು, ವಾಹನಗಳಿಗೆ ಹಾನಿ ಮಾಡಿದ್ದಾರೆ ಮತ್ತು ಅಂಗಡಿಗಳನ್ನು ಮುಚ್ಚಿಸಿದ್ದಾರೆ. ಕೈಯಲ್ಲಿ ದೊಣ್ಣೆಗಳನ್ನು ಹಿಡಿದು ನಗರದಾದ್ಯಂತ ಬೈಕ್​ನಲ್ಲಿ ಕಿಡಿಗೇಡಿಗಳು ಸುತ್ತಾಡಿದ್ದಾರೆ.

ಕಲಬುರಗಿ, ಡಿಸೆಂಬರ್​​ 24: ಡಾ. ಬಿ.ಆರ್​ ಅಂಬೇಡ್ಕರ್ ಅವರ ಬಗ್ಗೆ ಕೇಂದ್ರ ಸಚಿವ ಅಮಿತ್ ಶಾ ಅವರು ನೀಡಿರುವ ಹೇಳಿಕೆ ಖಂಡಿಸಿ ಕಲಬುರಗಿ ಬಂದ್​ ಕರೆ ನೀಡಿದ್ದು, ಪ್ರತಿಭಟನೆಗಳು ನಡೆಯುತ್ತಿವೆ. ಪ್ರತಿಭಟನೆ ಹೆಸರಿನಲ್ಲಿ ಕೆಲವು ಕಡೆ ಕಿಡಗೇಡಿಗಳು ಗುಂಡಾ ವರ್ತನೆ ತೋರಿದ್ದಾರೆ. ಬೈಕ್​ನಲ್ಲಿ ಬರ್ತಿದ್ದ ವ್ಯೆಕ್ತಿಯನ್ನ ತಡೆದು ದೊಣ್ಣೆಯಿಂದ ಬೈಕ್​ಗೆ ಹೊಡೆದಿದ್ದಾರೆ.

ಕಲಬುರಗಿ ನಗರದ ಶಹಬಜಾರ್ ಬಳಿ ಬರುತ್ತಿದ್ದ ವ್ಯಕ್ತಿಯ ಬೈಕ್​ಗೆ ಕಿಡಿಗೇಡಿಗಳು ದೊಣ್ಣೆಯಿಂದ ಹೊಡೆದಿದ್ದಾರೆ. ಅಲ್ಲದೇ, ಆಗಿದ್ದ ಅಂಗಡಿಯನ್ನು ಬಲವಂತವಾಗಿ ಮುಚ್ಚಿಸಿ ಕುರ್ಚಿ ಹೊರಗೆ ಬಿಸಾಕಿದ್ದಾರೆ. ಕೈಯಲ್ಲಿ ದೊಣ್ಣೆಗಳನ್ನು ಹಿಡಿದು ನಗರದಾದ್ಯಂತ ಬೈಕ್​ನಲ್ಲಿ ಕಿಡಿಗೇಡಿಗಳು ಸುತ್ತಾಡಿದ್ದಾರೆ.