ರಾಜ್ಯೋತ್ಸವದಂದು ಹಿಂದಿ ಸಿನಿಮಾ ಕನ್ನಡಪರ ಸಂಘಟನೆಗಳ ವಿರೋಧ

|

Updated on: Nov 01, 2024 | 5:00 PM

ಇಂದು ಕನ್ನಡ ರಾಜ್ಯೋತ್ಸವ, ಕನ್ನಡದ ಹಬ್ಬ ಆಚರಿಸುವ ವಿಶೇಷ ದಿನ. ಆದರೆ ಇದೇ ದಿನ ಬೆಂಗಳೂರಿನ ಕೆಲ ಮಾಲ್​ಗಳು, ಚಿತ್ರಮಂದಿರಗಳು ಹಿಂದಿ ಸಿನಿಮಾಗಳನ್ನು ಪ್ರದರ್ಶನ ಮಾಡುತ್ತಿವೆ. ಇದನ್ನು ವಿರೋಧಿಸಿ ಕನ್ನಡ ಪರ ಸಂಘಟನೆಗಳು ಗಲಾಟೆ ಮಾಡಿವೆ.

ಇಂದು (ನವೆಂಬರ್ 01) ಕನ್ನಡ ರಾಜ್ಯೋತ್ಸವ. ಕನ್ನಡ ಭಾಷೆಯ ಹಿರಿಮೆ, ಗರಿಮೆ ಸಾರಲು ಭಾಷೆಯ ಬಗ್ಗೆ ಅಭಿಮಾನ, ಹೆಮ್ಮೆ ಪಡುವ ವಿಶೇಷ ದಿನ. ಆದರೆ ಇದೇ ದಿನದಂದು ಬೆಂಗಳೂರಿನ ಕೆಲವು ಮಾಲ್​ಗಳಲ್ಲಿ, ಕೆಲವು ಚಿತ್ರಮಂದಿರಗಳಲ್ಲಿ ಹಿಂದಿ ಸಿನಿಮಾಗಳನ್ನು ಬಿಡುಗಡೆ ಮಾಡಲಾಗಿದೆ. ಇಂದು ಹಿಂದಿಯ ‘ಸಿಂಗಂ ಅಗೇನ್’ ಹಾಗೂ ‘ಭೂಲ್ ಭೂಲಯ್ಯ 3’ ಸಿನಿಮಾಗಳು ಬಿಡುಗಡೆ ಆಗಿದ್ದು, ಬೆಂಗಳೂರಿನ ಹಲವು ಮಾಲ್​ಗಳಲ್ಲಿ ಈ ಸಿನಿಮಾಗಳು ಪ್ರದರ್ಶನಗೊಳ್ಳುತ್ತಿವೆ. ಅದರಲ್ಲಿಯೂ ಸಿಂಗಂ ಅಗೇನ್ ಸಿನಿಮಾದ ವಿತರಣೆಯನ್ನು ಪಿವಿಆರ್ ತೆಗೆದುಕೊಂಡಿರುವ ಕಾರಣ ತಮ್ಮ ಪಿವಿಆರ್-ಐನಾಕ್ಸ್​ ಸ್ಕ್ರೀನ್​ಗಳಲ್ಲಿ ಅದನ್ನೇ ಹೆಚ್ಚಾಗಿ ಪ್ರದರ್ಶಿಸುತ್ತಿದೆ. ಕನ್ನಡ ರಾಜ್ಯೋತ್ಸವದಂದು ಹಿಂದಿ ಸಿನಿಮಾ ಪ್ರದರ್ಶನವನ್ನು ವಿರೋಧಿಸಿ ಕನ್ನಡ ಪರ ಸಂಘಟನೆ ಸದಸ್ಯರು ಕೆಲ ಮಾಲ್​ಗಳ ಮುಂದೆ ಪ್ರತಿಭಟನೆ, ಗಲಾಟೆ ಮಾಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us on