‘ನಮ್ಮ ಬಾಡಿ ಬಗ್ಗೆಯೂ ಕಮೆಂಟ್ ಮಾಡ್ತಾರೆ, ಅದಕ್ಕೆ ತಲೆ ಕೆಡಿಸಿಕೊಳ್ಳಬಾರದು’: ಪ್ರಿಯಾಂಕಾ ಉಪೇಂದ್ರ
ಸ್ಟಾರ್ ನಟಿಯರಿಗೂ ಬಾಡಿ ಶೇಮಿಂಗ್ ತಪ್ಪಿದ್ದಲ್ಲ. ಆ ಕುರಿತು ನಟಿ ಪ್ರಿಯಾಂಕಾ ಉಪೇಂದ್ರ ಅವರು ಮಾತನಾಡಿದ್ದಾರೆ.
ನಟಿಯರ ಸೌಂದರ್ಯದ ಬಗ್ಗೆ ಚಿತ್ರರಂಗದಲ್ಲಿ ಮತ್ತು ಸಮಾಜದಲ್ಲಿ ಒಂದಷ್ಟು ತಪ್ಪು ಕಲ್ಪನೆಗಳಿವೆ. ಬಣ್ಣದ ಲೋಕದಲ್ಲಿ ಹೀರೋಯಿನ್ಗಳು ಹೀಗೆಯೇ ಇರಬೇಕು ಎಂದು ಒತ್ತಡ ಹೇರಲಾಗುತ್ತದೆ. ಅದಕ್ಕೆ ಹೆಚ್ಚು ತಲೆ ಕೆಡಿಸಿಕೊಂಡರೆ ಜೀವನ ಮಾಡವುದೇ ಕಷ್ಟ ಆಗುತ್ತದೆ. ಇತ್ತೀಚೆಗೆ ಫ್ಯಾಟ್ ಸರ್ಜರಿ ಮಾಡಿಸಿಕೊಳ್ಳಲು ಹೋಗಿ ನಟಿ ಚೇತನಾ ರಾಜ್ (Chetana Raj) ಪ್ರಾಣ ಕಳೆದುಕೊಂಡರು. ಆ ಹಿನ್ನೆಲೆಯಲ್ಲಿ ಅನೇಕ ವಿಚಾರಗಳು ಚರ್ಚೆ ಆಗುತ್ತಿದೆ. ನಟಿ ಪ್ರಿಯಾಂಕಾ ಉಪೇಂದ್ರ (Priyanka Upendra) ಅವರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ‘ನಮ್ಮ ಬಾಡಿ ಬಗ್ಗೆಯೂ ಕಮೆಂಟ್ ಮಾಡ್ತಾರೆ, ಅದಕ್ಕೆ ತಲೆ ಕೆಡಿಸಿಕೊಳ್ಳಬಾರದು’ ಎಂಬುದನ್ನು ಅವರು ಒತ್ತಿ ಹೇಳಿದ್ದಾರೆ. ಚಿತ್ರರಂಗದಲ್ಲಿನ ಇಷ್ಟು ವರ್ಷಗಳ ಅನುಭವದ ಆಧಾರದಲ್ಲಿ ಅವರು ಈ ಮಾತುಗಳನ್ನು ಹಂಚಿಕೊಂಡಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.