ರಾಘವೇಂದ್ರ ವಿರುದ್ಧ ಹೀನಾಯ ಸೋಲು ಅನುಭವಿಸಿದ ಬಳಿಕವೂ ಈಶ್ವರಪ್ಪ ಭ್ರಮೆಯಲ್ಲಿದ್ದಾರೆ!

ಅರುಣ್​ ಕುಮಾರ್​ ಬೆಳ್ಳಿ

Updated on: Jun 06, 2024 | 11:45 AM

ತಾನು ಸ್ಪರ್ಧಿಸಿದ ಉದ್ದೇಶ ರಾಜ್ಯದಲ್ಲಿ ಚರ್ಚೆಯಾಗುತ್ತಿದೆ ಎಂದು ಅವರಿಂದು ಹೇಳಿದರು. ಈಗಲೂ ಅವರು ಭ್ರಮೆಯಲ್ಲಿದ್ದಾರೆ ಅಂತ ಅವರ ಮಾತುಗಳಿಂದ ವಿದಿತವಾಗುತ್ತದೆ. ಚುನಾವಣೆ ಸಮಯದಲ್ಲಿ ಹೇಳುತ್ತಿದ್ದ ಪಕ್ಷದ ಶುದ್ಧೀಕರಣ, ಅಪ್ಪ ಮಕ್ಕಳ ಕಪಿಮುಷ್ಠಿಯಿಂದ ಬಿಜೆಪಿಯನ್ನು ಬಿಡಿಸುವುದು-ಮೊದಲಾದ ಸಂಗತಿಗಳನ್ನು ಈಗಲೂ ಹೇಳುತ್ತಿದ್ದಾರೆ.

ಶಿವಮೊಗ್ಗ: ಹಾವೇರಿ ಲೋಕಸಭಾ ಕ್ಷೇತ್ರದ ಟಿಕೆಟ್ ತನ್ನ ಮಗನಿಗೆ ನೀಡದ ಕಾರಣ ರಾಜ್ಯ ಬಿಜೆಪಿ ನಾಯಕತ್ವದ ವಿರುದ್ಧ ಸೆಡ್ಡು ಹೊಡೆದು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಬಿಎಸ್ ಯಡಿಯೂರಪ್ಪ (BS Yediyurappa) ಮಗ ಮತ್ತು ಹಾಲಿ ಸಂಸದ ಬಿವೈ ರಾಘವೇಂದ್ರ (BY Raghavendra) ವಿರುದ್ಧ ಹೀನಾಯ ಸೋಲು ಅನುಭವಿಸಿದ ಹಿರಿಯ ರಾಜಕಾರಣಿ ಕೆಎಸ್ ಈಶ್ವರಪ್ಪ (KS Eshwarappa) ಇಂದು ತಮ್ಮ ನಿವಾಸದಲ್ಲಿ ಮಾಧ್ಯಮ ಗೋಷ್ಠಿ ನಡೆಸಿ ಮಾತಾಡಿದರು. ಠೇವಣಿ ಕಳೆದುಕೊಂಡ ಈಶ್ವರಪ್ಪನವರ ಮುಖ ಕಳೆಗುಂದಿದೆ, ಮೊದಲಿನ ಲವಲವಿಕೆ ಕಾಣುತ್ತಿಲ್ಲ. ಎರಡು ಲಕ್ಷ ಮತಗಳಿಗಿಂತ ಹೆಚ್ಚಿನ ಅಂತರದಲ್ಲಿ ಗೆಲ್ಲುತ್ತೇನೆಂದು ಪ್ರಚಾರದ ವೇಳೆ ಹೇಳಿಕೊಳ್ಳುತ್ತಿದ್ದ ಅವರಿಗೆ ಕಟು ವಾಸ್ತವ ಎದುರಾಗಿದೆ. ಅವರ ನಿರ್ಧಾರ ತಪ್ಪೆಂದು ರಾಜಕೀಯ ವಿಶ್ಲೇಷಕರು ಹೇಳಿದರೂ 5 ದಶಕಗಳಿಂದ ರಾಜಕಾರಣದಲ್ಲಿರುವ ಈಶ್ವರಪ್ಪ ಕೇವಲ ಸೇಡಿನ ಮನೋಭಾವದಿಂದ ದುಡುಕಿ ಚುನಾವಣೆಯಲ್ಲಿ ಸ್ಪರ್ಧಿಸಿದರು. ತಾನು ಸ್ಪರ್ಧಿಸಿದ ಉದ್ದೇಶ ರಾಜ್ಯದಲ್ಲಿ ಚರ್ಚೆಯಾಗುತ್ತಿದೆ ಎಂದು ಅವರಿಂದು ಹೇಳಿದರು. ಈಗಲೂ ಅವರು ಭ್ರಮೆಯಲ್ಲಿದ್ದಾರೆ ಅಂತ ಅವರ ಮಾತುಗಳಿಂದ ವಿದಿತವಾಗುತ್ತದೆ. ಚುನಾವಣೆ ಸಮಯದಲ್ಲಿ ಹೇಳುತ್ತಿದ್ದ ಪಕ್ಷದ ಶುದ್ಧೀಕರಣ, ಅಪ್ಪ ಮಕ್ಕಳ ಕಪಿಮುಷ್ಠಿಯಿಂದ ಬಿಜೆಪಿಯನ್ನು ಬಿಡಿಸುವುದು-ಮೊದಲಾದ ಸಂಗತಿಗಳನ್ನು ಈಗಲೂ ಹೇಳುತ್ತಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ತಮಿಳುನಾಡುನಲ್ಲಿ ಪ್ರಬಲ ವಿರೋಧದ ಹೊರತಾಗಿಯೂ ಅಣ್ಣಾಮಲೈ ಹಿಂದೂತ್ವಕ್ಕಾಗಿ ಹೋರಾಡುತ್ತಿದ್ದಾರೆ: ಈಶ್ವರಪ್ಪ

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.