ಲಕ್ಷ್ಮಣ ಸವದಿ ವಿರುದ್ಧ ಮತ್ತೇ ಹರಿಹಾಯ್ದ ಸತೀಶ್ ಜಾರಕಿಹೊಳಿ, ಈ ಬಾರಿ ಬೆಂಗಳೂರಲ್ಲಿ!

ಅರುಣ್​ ಕುಮಾರ್​ ಬೆಳ್ಳಿ

Updated on: Jun 08, 2024 | 1:02 PM

ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಆಥಣಿಯಲ್ಲಿ 76,000 ಲೀಡ್ ಸಿಕ್ಕಿತ್ತು, ಆದರೆ ಲೊಕಸಭಾ ಚುನಾವಣೆಯಲ್ಲಿ ವೋಟುಗಳು 8,000 ಮೈನಸ್ ಆಗಿವೆ. ಯಾಕೆ ಹೀಗಾಯ್ತು? ಸವದಿಯವರು ಬೇರೆ ಕ್ಷೇತ್ರಗಳಲ್ಲಿ ಪ್ರಚಾರದಲ್ಲಿ ತೊಡಗಿದ್ದರೇ? ಕಾರ್ಯಕರ್ತರು ಕೆಲಸ ಮಾಡಲಿಲ್ಲವೇ? ಎಂದು ಸಚಿವ ಪ್ರಶ್ನಿಸಿದರು.

ಬೆಳಗಾವಿ: ಲೋಕೊಪಯೋಗಿ ಖಾತೆ ಸಚಿವ ಸತೀಶ್ ಜಾರಕಿಹೊಳಿ (Satish Jarkiholi) ಅವರದ್ದು ಅದೇ ವರಾತ ಮಾರಾಯ್ರೇ. ಚಿಕ್ಕೋಡಿ ಲೋಕಸಭಾ ಕ್ಷೇತ್ರದ ವಿಧಾನಸಭಾ ಸೆಗ್ಮೆಂಟ್ ಗಳಾಗಿರುವ ಅಥಣಿ ಮತ್ತು ಕುಡಚಿಯಲ್ಲಿ ಅವರ ಮಗಳು ಮತ್ತು ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕಾ ಚಾರಕಿಹೊಳಿಗೆ (Priyanka Jarkiholi) ಲೀಡ್ ಸಿಕ್ಕಿಲ್ಲ ಅನ್ನೋದು. ನಿನ್ನೆ ಬೆಳಗಾವಿಯಲ್ಲಿ ಸತೀಶ್ ಜಾರಕಿಹೊಳಿ ಎರಡೆರಡು ಬಾರಿ ಅಥಣಿ ಶಾಸಕ ಲಕ್ಷ್ಮಣ ಸವದಿ ವಿರುದ್ಧ ವಾಗ್ದಾಳಿ ನಡೆಸಿದ್ದರು. ಇವತ್ತು ಬೆಂಗಳೂರಿನ ತಮ್ಮ ಕಚೇರಿಯಲ್ಲೂ ಅವರು ಮತ್ತೊಮ್ಮೆ ಅದೇ ವಿಷಯದ ಬಗ್ಗೆ ಮಾತಾಡಿ ಅಸಮಾಧಾನವನನ್ನು ಹೊರಹಾಕಿದರು. ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಆಥಣಿಯಲ್ಲಿ 76,000 ಲೀಡ್ ಸಿಕ್ಕಿತ್ತು, ಆದರೆ ಲೊಕಸಭಾ ಚುನಾವಣೆಯಲ್ಲಿ ವೋಟುಗಳು 8,000 ಮೈನಸ್ ಆಗಿವೆ. ಯಾಕೆ ಹೀಗಾಯ್ತು? ಸವದಿಯವರು ಬೇರೆ ಕ್ಷೇತ್ರಗಳಲ್ಲಿ ಪ್ರಚಾರದಲ್ಲಿ ತೊಡಗಿದ್ದರೇ? ಕಾರ್ಯಕರ್ತರು ಕೆಲಸ ಮಾಡಲಿಲ್ಲವೇ? ಇದು ನಡೆದಿದ್ದು ಉದ್ದೇಶಪೂರ್ವಕಾವಾಗಿಯೋ ಇಲ್ಲವೋ ಅಂತ ಸವದಿಯವರೇ ಸ್ಪಷ್ಟೀಕರಣ ನೀಡಬೇಕು ಎಂದು ಸತೀಶ್ ಹೇಳಿದರು. ಕುಡಚಿಯಲ್ಲಂತೂ ಶಾಸಕ ಮಹೇಂದ್ರ ಕೆ ತಮ್ಮಣ್ಣನವರ್ ತಮ್ಮ ಮೊಬೈಲ್ ಸ್ವಿಚ್ಚಾಫ್ ಮಾಡಿ ಎಲ್ಲೋ ಮಲಗಿದ್ದರು ಎಂದು ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ಲೋಕಸಭೆ ಫಲಿತಾಂಶ: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ವಿರುದ್ಧ ಸಚಿವ ಸತೀಶ್ ಜಾರಕಿಹೊಳಿ ಪರೋಕ್ಷ ಅಸಮಾಧಾನ  

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.