Kannada Rajyotsava: ವ್ಹೀಲ್​ ಚೇರ್​ನಲ್ಲಿ ಬಂದು ಧ್ವಜಾರೋಹಣ ಮಾಡಿದ ನಟಿ ಲೀಲಾವತಿ

Updated on: Nov 01, 2023 | 12:59 PM

Senior Actress Leelavathi: ಹಿರಿಯ ನಟಿ ಲೀಲಾವತಿ ಅವರು ವ್ಹೀಲ್​ ಚೇರ್​ನಲ್ಲಿ ಇದ್ದಾರೆ. ಈ ಪರಿಸ್ಥಿತಿಯಲ್ಲೂ ಕೂಡ ಅವರಿಗೆ ಕನ್ನಡದ ಮೇಲಿನ ಪ್ರೇಮ ಕಡಿಮೆ ಆಗಿಲ್ಲ. ಇಂದು (ನವೆಂಬರ್​ 1) ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ವ್ಹೀಲ್​ ಚೇರ್​ನಲ್ಲಿಯೇ ಬಂದು ಅವರು ಧ್ವಜಾರೋಹಣ ಮಾಡಿರುವುದು ವಿಶೇಷ. ಆ ಸಂದರ್ಭದ ವಿಡಿಯೋ ಇಲ್ಲಿದೆ..

ಹಿರಿಯ ನಟಿ ಲೀಲಾವತಿ ಅವರು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ (Karnataka Film Chamber) ಬಂದು ಧ್ವಜಾರೋಹಣ ಮಾಡಿದ್ದಾರೆ. ಅವರಿಗೆ ಇಗ 86 ವರ್ಷ ವಯಸ್ಸು. ದಿನದಿಂದ ದಿನಕ್ಕೆ ಅವರ ಆರೋಗ್ಯ ಕ್ಷೀಣಿಸುತ್ತಿದೆ. ಸದ್ಯ ಅವರು ವ್ಹೀಲ್​ ಚೇರ್​ನಲ್ಲಿ ಇದ್ದಾರೆ. ಈ ಪರಿಸ್ಥಿತಿಯಲ್ಲೂ ಕೂಡ ಅವರಿಗೆ ಕನ್ನಡದ ಮೇಲಿನ ಪ್ರೇಮ ಕಡಿಮೆ ಆಗಿಲ್ಲ. ಇಂದು (ನವೆಂಬರ್​ 1) ಕನ್ನಡ ರಾಜ್ಯೋತ್ಸವದ (Kannada Rajyotsava) ಪ್ರಯುಕ್ತ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ವ್ಹೀಲ್​ ಚೇರ್​ನಲ್ಲಿಯೇ ಬಂದು ಅವರು ಧ್ವಜಾರೋಹಣ ಮಾಡಿರುವುದು ವಿಶೇಷ. ಬಳಿಕ ಮಾತನಾಡಿದ ಮಂಡಳಿ ಅಧ್ಯಕ್ಷ ಎನ್​ಎಂ ಸುರೇಶ್​ ಅವರು ಲೀಲಾವತಿ (Leelavathi) ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆದುಕೊಂಡರು. ಈ ವೇಳೆ ನಟ ವಿನೋದ್​ ರಾಜ್​ ಕೂಡ ಭಾಗಿ ಆಗಿದ್ದರು. ಅವರಿಗೆ ಸನ್ಮಾನ ಮಾಡಿ ಗೌರವಿಸಲಾಯಿತು. ಪ್ರಮೀಳಾ ಜೋಶಾಯ್​​, ಭಾ.ಮ. ಹರೀಶ್ ಮುಂತಾದವರು ಕೂಡ ಉಪಸ್ಥಿತರಿದ್ದರು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us
ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More