ಕರ್ನಾಟಕ ಗಾಂಧಿ ಸ್ಮಾರಕ ನಿಧಿಯಿಂದ ಹಿರಿಯ ನಟಿ ಡಾ.ಲೀಲಾವತಿ, ವಿನೋದ್‌ರಾಜ್‌ರಿಗೆ ಸನ್ಮಾನ

ಕರ್ನಾಟಕ ಗಾಂಧಿ ಸ್ಮಾರಕ ನಿಧಿಯಿಂದ ಭಾರತ ಸ್ವಾತಂತ್ರ‍್ಯ ಮಹೋತ್ಸವದ ಹಿನ್ನಲೆ ಕನ್ನಡಕ್ಕೊಬ್ಬರೆ ಅಭಿನಯ ಸರಸ್ವತಿ ಡಾ.ಲೀಲಾವತಿ ಎಂಬ ಬಿರುದು ನೀಡಿ ಪ್ರಮಾಣ ಪತ್ರ ಹಾಗೂ ಚರಕವನ್ನು ನೀಡಿ ಡಾ.ಲೀಲಾವತಿಯವರಿಗೆ ಅಭಿನಂದನೆ ಸಲ್ಲಿಸಿ ಸನ್ಮಾನಿಸಲಾಯಿತು.

ಕರ್ನಾಟಕ ಗಾಂಧಿ ಸ್ಮಾರಕ ನಿಧಿಯಿಂದ ಹಿರಿಯ ನಟಿ ಡಾ.ಲೀಲಾವತಿ, ವಿನೋದ್‌ರಾಜ್‌ರಿಗೆ ಸನ್ಮಾನ
ಕರ್ನಾಟಕ ಗಾಂಧಿ ಸ್ಮಾರಕ ನಿಧಿಯಿಂದ ಹಿರಿಯ ನಟಿ ಡಾ.ಲೀಲಾವತಿ, ವಿನೋದ್‌ರಾಜ್‌ರಿಗೆ ಸನ್ಮಾನ
Follow us
ಬಿ ಮೂರ್ತಿ, ನೆಲಮಂಗಲ
| Updated By: ಆಯೇಷಾ ಬಾನು

Updated on:Aug 12, 2023 | 3:46 PM

ನೆಲಮಂಗಲ, ಆ.12: ಕರ್ನಾಟಕ ಗಾಂಧಿ ಸ್ಮಾರಕ ನಿಧಿಯಿಂದ ಹಿರಿಯ ನಟಿ ಡಾ.ಲೀಲಾವತಿ(Dr Leelavathi) ಹಾಗೂ ವಿನೋದ್‌ರಾಜ್‌ರವರಿಗೆ(Vinod Rajkumar) ಸನ್ಮಾನ, ಅಭಿನಂದನೆ ಸಲ್ಲಿಸಲಾಗಿದೆ. ಹಿರಿಯ ನಟಿ ಡಾ.ಲೀಲಾವತಿ ಹಾಗೂ ವಿನೋದ್‌ರಾಜ್‌ರವರು ಕಲ್ಲಿನ ಬಂಡೆಯ ಜಾಗದಲ್ಲಿ ಪ್ರಕೃತಿಯನ್ನು ಆರಾಧಿಸುವಂತೆ ತೋಟ ಮಾಡಿರುವುದು ಆ ತೋಟದಲ್ಲಿ ಪ್ರಾಣಿಪಕ್ಷಿಗಳು ಜೀವನ ಮಾಡಲು ಅನುವು ಮಾಡಿಕೊಟ್ಟಿರುವುದು ಮನುಷ್ಯ ಜನ್ಮದ ಅದ್ಬುತ ಕಾರ್ಯ ಎಂದು ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಗೌರವ ಕಾರ್ಯದರ್ಶಿ ಇಂದಿರಾಕೃಷ್ಣಪ್ಪ ಅಭಿಪ್ರಾಯ ಪಟ್ಟರು.

ತಾಲೂಕಿನ ಸೋಲದೇವನಹಳ್ಳಿ ಗ್ರಾಮದ ತೋಟದ ಮನೆಯಲ್ಲಿ ಕರ್ನಾಟಕ ಗಾಂಧಿ ಸ್ಮಾರಕ ನಿಧಿಯಿಂದ ಆಯೋಜಿಸಲಾಗಿದ್ದ ಭಾರತ ಸ್ವಾತಂತ್ರ‍್ಯ ಮಹೋತ್ಸವದ ಹಿನ್ನಲೆ ಸಾಧಕರಿಗೆ ಸನ್ಮಾನ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು. ಜನರಿಗೆ ಹಾಗೂ ಪಶುಗಳಿಗೆ ಸ್ವಂತ ಆಸ್ಪತ್ರೆ ನಿರ್ಮಾಣ ಮಾಡಿ ಸೇವೆ ಸಲ್ಲಿಸುತ್ತಿರುವುದು ನಿಜಕ್ಕೂ ಸಮಾಜಕ್ಕೆ ಪ್ರೇರಣೆ, ಗಾಂಧಿಯವರ ಕನಸಿನ ಭಾರತಕ್ಕೆ ಲೀಲಾವತಿಯವರ ಸೇವೆ ಮಾದರಿಯಾಗಿದೆ. ಕರುನಾಡಿನಲ್ಲಿ ಜನಮೆಚ್ಚಿದ ಆರುನೂರಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟನೆ ಮಾಡಿ ದಕ್ಷಿಣ ಭಾರತದ ಘನತೆಯ ಕಲಾವಿದೆಯಾಗಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಜೀವನ ಸಾಗಿಸುವ ಮೂಲಕ ಸಮಾಜ ಸೇವೆ ಮಾಡಿ ಮಾದರಿಯಾಗಿದ್ದಾರೆ ಎಂದರು.

ಇದನ್ನೂ ಓದಿ: ಶಕ್ತಿ ಯೋಜನೆಯಡಿ ಅಂತಾರಾಜ್ಯ ಬಸ್​​​ನಲ್ಲಿ ಉಚಿತ ಪ್ರಯಾಣ, ಮುಂದುವರಿದ ಗೊಂದಲ

ಹಿರಿಯ ನಟಿ ಡಾ.ಲೀಲಾವತಿ ಮಾತನಾಡಿ, ನನಗೆ ಕರ್ನಾಟಕ ಗಾಂಧಿ ಸ್ಮಾರಕ ನಿಧಿಯಿಂದ ಅಭಿನಂದನೆ ಸಲ್ಲಿಸುತ್ತಿರುವುದು ಸಂತೋಷವಾಗಿದೆ. ದೇಶದಲ್ಲಿ ಗಾಂಧಿ ಕನಸಿನ ಮಾದರಿ ಗ್ರಾಮಗಳು ಸೃಷ್ಟಿಯಾದರೆ ಮಾತ್ರ ಗ್ರಾಮೀಣ ಜನರ ಬದುಕು ಉತ್ತಮವಾಗಿರುತ್ತದೆ, ನಾನು ನೆಲೆಸಿರುವ ಸೋಲದೇವನಹಳ್ಳಿ ಭಾಗದ ಗ್ರಾಮೀಣ ಜನರಿಗೆ ಅನುಕೂಲವಾಗಲು ಆಸ್ಪತ್ರೆ ಮಾಡುವ ಕನಸು ನನಸಾಗಿದೆ. ಒಂದು ಪಶು ಆಸ್ಪತ್ರೆ ಮಾಡಲಾಗುತ್ತಿದ್ದು ಮಗ ವಿನೋದ್ ರಾಜ್ ಬಲವಾಗಿ ನಿಂತಿದ್ದಾರೆ. ಗಾಂಧೀಜಿಯವರು ಹೇಳಿದಂತೆ ಹಳ್ಳಿ ಅಭಿವೃದ್ಧಿಯಾದರೆ ದೇಶ ಅಭಿವೃದ್ಧಿ ಕಾಣಲಿದೆ ಎಂದರು.

ಕರ್ನಾಟಕ ಗಾಂಧಿ ಸ್ಮಾರಕ ನಿಧಿಯಿಂದ ಭಾರತ ಸ್ವಾತಂತ್ರ‍್ಯ ಮಹೋತ್ಸವದ ಹಿನ್ನಲೆ ಕನ್ನಡಕ್ಕೊಬ್ಬರೆ ಅಭಿನಯ ಸರಸ್ವತಿ ಡಾ.ಲೀಲಾವತಿ ಎಂಬ ಬಿರುದು ನೀಡಿ ಪ್ರಮಾಣ ಪತ್ರ ಹಾಗೂ ಚರಕವನ್ನು ನೀಡಿ ಡಾ.ಲೀಲಾವತಿಯವರಿಗೆ ಅಭಿನಂದನೆ ಸಲ್ಲಿಸಿ ಸನ್ಮಾನಿಸಲಾಯಿತು. ತಾಯಿಯ ಜೊತೆ ಮಗ ವಿನೋದ್ ರಾಜ್‌ರವರಿಗೂ ಸಹ ಅಭಿನಂದನೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ನಟ ವಿನೋದ್‌ರಾಜ್, ರಾಷ್ಟೀಯ ಯುವ ಯೋಜನೆಯ ರಾಜ್ಯ ಸಂಯೋಜಕ ಡಾ.ವಿ ಪ್ರಶಾಂತ್,ಅಧ್ಯಾಪಕಿ ಶಾಮಲಾ, ಕನ್ನಡ ಸಾಹಿತ್ಯ ಪರಿಷತ್ ಸಂಘಸಂಸ್ಥೆಗಳ ಪ್ರತಿನಿಧಿಗಳು ಭಾಗಿಯಾಗಿದ್ರು.

ರಾಜ್ಯಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 3:45 pm, Sat, 12 August 23

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್