Karnataka Assembly Election Result 2023: ಎರಡೂ ಕ್ಷೇತ್ರಗಳಲ್ಲಿ ಗೆಲುವು ನನ್ನದೇ ಎಂದ ಸೋಮಣ್ಣ

Updated on: May 13, 2023 | 9:38 AM

ರಾಜ್ಯ ವಿಧಾನಸಭೆ ಚುನಾವಣೆ ಮತದಾನ ಮೇ.10 ರಂದು ಭರ್ಜರಿಯಾಗಿ ನಡೆದಿದೆ. ಅದರಂತೆ ಇಂದು (ಮೇ.13) 224 ಕ್ಷೇತ್ರದ ಫಲಿತಾಂಶ ಬರಲಿದ್ದು, ಇಡೀ ರಾಜ್ಯವೇ ಕಾದು ನೋಡುತಿದೆ. ಅದರಂತೆ ಫಲಿತಾಂಶಕ್ಕೂ ಮುನ್ನ ವಿ.ಸೋಮಣ್ಣ ದೇವರ ಮೊರೆ ಹೋಗಿದ್ದು, ಚಾಮುಂಡೇಶ್ವರಿ ತಾಯಿಯ ದರ್ಶನ‌ ಪಡೆದು ಪೂಜೆ ಸಲ್ಲಿಸಿ, ತಮ್ಮ ಗೆಲುವಿನ ಕುರಿತು ಮಾಧ್ಯಮ ಪ್ರತಿನಿಧಿಯೊಂದಿಗೆ ಮಾತನಾಡಿದ್ದಾರೆ.

ರಾಜ್ಯ ವಿಧಾನಸಭೆ ಚುನಾವಣೆ(Karnataka Assembly Election Result 2023) ಮತದಾನ ಮೇ.10 ರಂದು ಭರ್ಜರಿಯಾಗಿ ನಡೆದಿದೆ. ಅದರಂತೆ ಇಂದು (ಮೇ.13) 224 ಕ್ಷೇತ್ರದ ಫಲಿತಾಂಶ ಬರಲಿದ್ದು, ಇಡೀ ರಾಜ್ಯವೇ ಕಾದು ನೋಡುತಿದೆ. ಅದರಂತೆ ರಾಜ್ಯದ ಹೈವೋಲ್ಟೇಜ್​ ಕ್ಷೇತ್ರವಾದ ವರುಣಾದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ದ ನಿಂತಿರುವ ವಿ ಸೋಮಣ್ಣ ಫಲಿತಾಂಶಕ್ಕೂ ಮುನ್ನ ದೇವರ ಮೊರೆ ಹೋಗಿದ್ದು, ಚಾಮುಂಡೇಶ್ವರಿ ತಾಯಿಯ ದರ್ಶನ‌ ಪಡೆದು ಪೂಜೆ ಸಲ್ಲಿಸಿ, ತಮ್ಮ ಗೆಲುವಿನ ಕುರಿತು ಮಾಧ್ಯಮ ಪ್ರತಿನಿಧಿಯೊಂದಿಗೆ ಮಾತನಾಡಿ‘ ಈ ಬಾರಿ ಸಂಪೂರ್ಣ ಬಹುಮತದೊಂದಿಗೆ ಮತ್ತೊಮ್ಮೆ ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯುತ್ತೇವೆ. ಜೊತೆಗೆ ವರುಣಾದಲ್ಲಿ ಕೂಡ ಭರ್ಜರಿಯಾಗಿ ಗೆಲುವು ಸಾಧಿಸುತ್ತೇವೆ ಎಂದರು.

ಕರ್ನಾಟಕ ಚುನಾವಣಾ ಫಲಿತಾಂಶ ಲೈವ್​ ಅಪ್ಡೇಟ್ಸ್​ಗಾಗಿ ಇಲ್ಲಿ ಕ್ಲಿಕ್​ ಮಾಡಿ

ಇನ್ನಷ್ಟು ಚುನಾವಣಾ ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Kiran Hanumant Madar

ಹುಟ್ಟೂರು- ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಮಾವಿನಕಟ್ಟ, ಶಿರಸಿಯಲ್ಲಿ ಬಿ.ಎ ಪತ್ರಿಕೋಧ್ಯಮ ಮುಗಿಸಿ, ವಾರ್ತಾ ಇಲಾಖೆಯಲ್ಲಿ ಒಂದು ವರ್ಷದ ತರಭೇತಿ ಪಡೆದು, ಟಿವಿ9 ಡಿಜಿಟಲ್​ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ.

Read More