Karnataka Assembly Polls: ಚುನಾವಣೆ ಸಂದರ್ಭದಲ್ಲಿ ಬಿವೈ ವಿಜಯೇಂದ್ರಗೆ ಹೆಚ್ಚಿನ ಜವಾಬ್ದಾರಿ?

Edited By:

Updated on: Jan 02, 2023 | 11:08 AM

ಬಿ ಎಸ್ ವೈ ಕೋಪ ಶಮನ ಮಾಡಲೆಂದೇ ಈ ಬಾರಿಯ ಚುನಾವಣೆಯಲ್ಲಿ ಅವರ ಪುತ್ರ ಬಿವೈ ವಿಜಯೇಂದ್ರಗೆ ಹೆಚ್ಚಿನ ಜವಾಬ್ದಾರಿ ನೀಡುವ ಆಲೋಚನೆ ಹೈ ಕಮಾಂಡ್ ಮಾಡುತ್ತಿದೆ.

ಬೆಂಗಳೂರು:  ರಾಜ್ಯದಲ್ಲಿ ವಿಧಾನಸಭೆ ಚುನಾವಣೆ (assembly polls) ಹತ್ತಿರಗೊಳ್ಳುತ್ತಿದ್ದಂತೆಯೇ ಪ್ರಮುಖ ಪಕ್ಷಗಳು ತಮ್ಮ ತಮ್ಮ ಲೆಕ್ಕಾಚಾರಗಳಲ್ಲಿ ತೊಡಗಿವೆ. ಆಡಳಿತಾರೂಢ ಬಿಜೆಪಿಗೆ ರಾಜ್ಯದಲ್ಲಿ ಅತಿದೊಡ್ಡ ಶಕ್ತಿಯೆಂದರೆ ನಿಸ್ಸಂದೇಹವಾಗಿ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ (BS Yediyurappa). ಅದರೆ, ಇತ್ತೀಚಿಗೆ ಅವರು ಮುನಿಸಿಕೊಂಡಿರುವುದು ಹೈಕಮಾಂಡ್ ಗೆ ಚಿಂತೆಗೀಡು ಮಾಡಿದೆ. ಬಿ ಎಸ್ ವೈ ಕೋಪ ಶಮನ ಮಾಡಲೆಂದೇ ಈ ಬಾರಿಯ ಚುನಾವಣೆಯಲ್ಲಿ ಅವರ ಪುತ್ರ ಬಿವೈ ವಿಜಯೇಂದ್ರಗೆ (BY Vijayendra) ಹೆಚ್ಚಿನ ಜವಾಬ್ದಾರಿ ನೀಡುವ ಆಲೋಚನೆ ಹೈ ಕಮಾಂಡ್ ಮಾಡುತ್ತಿದೆ. ಅವರಿಗೆ ವರುಣ ಕ್ಷೇತ್ರದಿಂದ ಟಿಕೆಟ್ ಸಿಕ್ಕರೆ ಆಶ್ಚರ್ಯವಿಲ್ಲ ಮತ್ತು ಹಳೆ ಮೈಸೂರು ಭಾಗದಲ್ಲಿ ಚುನಾವಣಾ ಪ್ರಚಾರ ವಿಜಯೇಂದ್ರ ಹೆಗಲೇರುವ ಸಾಧ್ಯತೆಯೂ ಇದೆ. ಗೃಹ ಸಚಿವ ಅಮಿತ್ ಶಾ ಅವರ ಕರ್ನಾಟಕ ಪ್ರವಾಸದಲ್ಲಿ ಈ ಸಂಗತಿ ಚರ್ಚೆಯಾಗಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ