ವಿದೇಶಕ್ಕೆ ಹೋಗುವುದನ್ನು ನಾವು ಸಿಎಂಗೇ ಹೇಳಿಲ್ಲ, ಇನ್ನು ಡಿಸಿಎಂಗೆ ಹೇಳ್ತೇವಾ: ಕಾಂಗ್ರೆಸ್​ ಶಾಸಕ ಪುಟ್ಟರಂಗಶೆಟ್ಟಿ

Updated on: Feb 18, 2026 | 11:19 AM

ಕಾಂಗ್ರೆಸ್ ಶಾಸಕರೊಬ್ಬರು ಆಸ್ಟ್ರೇಲಿಯಾಗೆ ವೈಯಕ್ತಿಕ ಪ್ರವಾಸ ಕೈಗೊಂಡಿದ್ದಾರೆ. ಇದು ಕೃಷಿ ಮತ್ತು ಪಶುಸಂಗೋಪನೆ ಅಧ್ಯಯನಕ್ಕಾಗಿಯೇ ಹೊರತು ವಿಲಾಸಿ ಜೀವನಕ್ಕಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಬಜೆಟ್ ಅಧಿವೇಶನದ ನಡುವೆಯೇ ಪ್ರವಾಸ ಕೈಗೊಂಡಿದ್ದು, ಹೈಕಮಾಂಡ್ ಅಥವಾ ಡಿಕೆ ಶಿವಕುಮಾರ್ ಅವರಿಂದ ಅನುಮತಿ ಪಡೆದಿಲ್ಲ ಎಂದಿದ್ದಾರೆ. 20 ಶಾಸಕರು ಹೋಗುತ್ತಿದ್ದಾರೆಂಬ ದೇವೇಂದ್ರಪ್ಪ ಅವರ ಹೇಳಿಕೆಯನ್ನು ಶಾಸಕರು ತಳ್ಳಿಹಾಕಿದ್ದಾರೆ.

ಬೆಂಗಳೂರು, ಫೆ.18: ಕಾಂಗ್ರೆಸ್ ಶಾಸಕರು ವಿದೇಶ ಪ್ರವಾಸ ಹೋಗಿದ್ದಾರೆ. ಈ ವೇಳೆ ಮಾಧ್ಯಮಗಳ ಜತೆಗೆ ಶಾಸಕ ಪುಟ್ಟರಂಗಶೆಟ್ಟಿ ಮಾತನಾಡಿದ್ದಾರೆ. “ಆಸ್ಟ್ರೇಲಿಯಾಕ್ಕೆ ಪ್ರಯಾಣಿಸುತ್ತಿದ್ದೇನೆ, ನನ್ನ ಜತೆಗೆ ಯಾರು ಬರುತ್ತಿದ್ದಾರೆ ಎಂದು ಗೊತ್ತಿಲ್ಲ, ನಾನಂತೂ ಹೋಯ್ತೀನಿ” ಎಂದು ಹೇಳಿದ್ದಾರೆ.”ನಾನು ಮೋಜು ಮಾಡಲು ಹೋಗುತ್ತಿಲ್ಲ. ರೈತರು, ಹೈನುಗಾರಿಕೆ ಹಾಗೂ ಕೃಷಿ ಅಧ್ಯಯನ ಮಾಡಲು ಹೋಗುತ್ತಿದ್ದೇನೆ. ಕೆಲವರು ಅಧ್ಯಯನ ಮಾಡಲಿಕ್ಕೆ ಹೋಗುತ್ತಾರೆ, ಕೆಲವರು ಎಂಜಾಯ್ ಮಾಡಲಿಕ್ಕೆ ಹೋಗುತ್ತಾರೆ, ನಾವು ಎಂಜಾಯ್ ಮಾಡಲು ಹೋಗೋದಲ್ಲ. ಅಗ್ರಿಕಲ್ಚರ್ ಮತ್ತು ಅನಿಮಲ್ ಹಸ್ಬೆಂಡ್ರಿಗೆ ಸಂಬಂಧಿಸಿದ ವಿಷಯಗಳನ್ನು ನೋಡಲು ಹೋಗುತ್ತಿದ್ದೇನೆ” ಎಂದು ಹೇಳಿದ್ದಾರೆ. ಬಜೆಟ್ ಅಧಿವೇಶನದ ಸಂದರ್ಭದಲ್ಲಿ ಈ ಪ್ರವಾಸ ಅನಿವಾರ್ಯವೇ ಎಂಬ ಮಾಧ್ಯಮಗಳ ಪ್ರಶ್ನೆಗೆ, “ಬಜೆಟ್ ನಾನೇನು ಮಾಡುವುದಿಲ್ಲ, ಸಿದ್ದರಾಮಯ್ಯನವರು ಮಂಡಿಸುತ್ತಾರೆ. ಮಂಡಿಸಿದ ನಂತರ ಬಂದುಬಿಡುತ್ತೇನೆ” ಎಂದು ಹೇಳಿದ್ದಾರೆ. ಈ ಪ್ರವಾಸಕ್ಕೆ ಹೈಕಮಾಂಡ್ ಅನುಮತಿ ನೀಡಿದ್ದೀಯಾ ೆಂಬ ಪ್ರಶ್ನೆಗೆ ಉತ್ತರಿಸಿದ ಅವರು, “ಅದೆಲ್ಲ ಯಾತಕ್ಕೆ ಬೇಕು ನಾವು ಹೋಗೋದಕ್ಕೆ?” ಎಂದು ಹೇಳಿದ್ದಾರೆ. ಡಿಕೆ ಶಿವಕುಮಾರ್ ಅವರಿಗೆ ಈ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ಹೇಳಲಾಗುತ್ತಿದೆ ಎಂದು ಪ್ರಶ್ನಿಸಿದಾಗ, “ಅದು ನನಗೆ ಗೊತ್ತಿಲ್ಲ. ನಾನು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೇ ಹೇಳಿಲ್ಲ, ಇನ್ನು ಡಿಕೆ ಶಿವಕುಮಾರ್‌ಗೆ ಎಲ್ಲಿ ಹೇಳುತ್ತೇವೆ?” ಎಂದು ಹೇಳಿದ್ದಾರೆ. ಇದು ನನ್ನ ವೈಯಕ್ತಿಕ ಪ್ರವಾಸ. ಖರ್ಚು ವೆಚ್ಚ ಎಲ್ಲ ನನ್ನದೇ” ಎಂದು ಶಾಸಕರು ಹೇಳಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಅಕ್ಷಯ್​ ಪಲ್ಲಮಜಲು​​

ಅಕ್ಷಯ್ ಕುಮಾರ್ ಪಲ್ಲಮಜಲು ಅವರು ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕಿನವರು. ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇದೆ. ಇದರ ಜತೆಗೆ ಸೋಶಿಯಲ್ ಮೀಡಿಯಾದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ, ಪ್ರಸ್ತುತ ಟಿವಿ9 ಕನ್ನಡದಲ್ಲಿ ಸೋಶಿಯಲ್​​​ ಮೀಡಿಯಾವನ್ನು ನೋಡಿಕೊಳ್ಳುತ್ತಿದ್ದಾರೆ. ಡಿಜಿಟಲ್ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದು, ಸೋಶಿಯಲ್​​​ ಮೀಡಿಯಾದಲ್ಲಿ ಇನ್ನೂ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳವ ಆಸಕ್ತಿ ಇದೆ. ಇದರ ಜತೆಗೆ ರಾಷ್ಟ್ರೀಯ ಸುದ್ದಿ ಮತ್ತು ಬ್ರೇಕಿಂಗ್​ ಸುದ್ದಿಗಳನ್ನು ಬರೆಯುತ್ತಾರೆ.

Read More