ಮೈಸೂರಿಗೆ ಕರ್ನಾಟಕ ಅಂತ ನಾಮಕರಣವಾದ 50 ನೇ ವರ್ಷ; ವರ್ಷವಿಡೀ ಉತ್ಸವ ಅಚರಿಸಲು ಸರ್ಕಾರ ತೀರ್ಮಾನ: ಡಿಕೆ ಶಿವಕುಮಾರ್

ಮೈಸೂರಿಗೆ ಕರ್ನಾಟಕ ಅಂತ ನಾಮಕರಣವಾದ 50 ನೇ ವರ್ಷ; ವರ್ಷವಿಡೀ ಉತ್ಸವ ಅಚರಿಸಲು ಸರ್ಕಾರ ತೀರ್ಮಾನ: ಡಿಕೆ ಶಿವಕುಮಾರ್

ಅರುಣ್​ ಕುಮಾರ್​ ಬೆಳ್ಳಿ
|

Updated on:Nov 03, 2023 | 10:36 AM

ಸುವರ್ಣ ಮಹೋತ್ಸವವನ್ನು ಸಿದ್ದರಾಮಯ್ಯ ನಿನ್ನೆ ಐತಿಹಾಸಿಕ ವಿಜಯನಗರದ ಹಂಪಿಯಲ್ಲಿ ಜ್ಯೋತಿ ಬೆಳಗುವ ಮೂಲಕ ಚಾಲನೆ ನೀಡಿದ್ದಾರೆ ಎಂದು ಹೇಳಿದ ಶಿವಕುಮಾರ್ ಅದರ ಮುಂದುವರಿದ ಭಾಗವಾಗಿ ಗದಗನಲ್ಲಿ ಒಂದು ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು. ಸುವರ್ಣ ಮಹೋತ್ವವದ ನೆನಪಿಗಾಗಿ ತಾಯಿ ಭುವನೇಶ್ವರಿ ಭವನ ನಿರ್ಮಿಸಲು ನಿರ್ಧರಿಸಲಾಗಿದೆ ಮತ್ತು ಅದಕ್ಕಾಗಿ ಜಾಗದ ಶೋಧ ನಡೆದಿದೆ ಎಂದು ಉಪ ಮುಖ್ಯಮಂತ್ರಿ ಹೇಳಿದರು.

ಹುಬ್ಬಳ್ಳಿ: ರಾಜ್ಯಕ್ಕೆ ಕರ್ನಾಟಕ ಅಂತ ನಾಮಕರಣ ಆಗಿ 50 ವರ್ಷಗಳು ಕಳೆದಿರುವ ಸಂದರ್ಭದಲ್ಲಿ, ಸಿದ್ದರಾಮಯ್ಯ (Siddaramaiah) ಮತ್ತು ಡಿಕೆ ಶಿವಕುಮಾರ್ (DK Shivakumar) ನೇತೃತ್ವದ ಕಾಂಗ್ರೆಸ ಸರ್ಕಾರ ಈ ಇಡೀ ವರ್ಷವನ್ನು ಸುವರ್ಣ ಮಹೋತ್ಸವವಾಗಿ (golden jubilee) ಅಚರಿಸಲು ತೀರ್ಮಾನಿಸಿದೆ. ಉತ್ಸವದ ಭಾಗವಾಗಿ ಗದಗನಲ್ಲಿ ಇಂದು ನಡೆಯಲಿರುವ ಕಾರ್ಯಕ್ರಮದಲ್ಲಿ ಭಾಗವಹಿಸಲು ಶುಕ್ರವಾರ ಬೆಳಗ್ಗೆ ಹುಬ್ಬಳ್ಳಿಗೆ ಆಗಮಿಸಿರುವ ಶಿವಕುಮಾರ್ ಸರ್ಕಾರ ಹಮ್ಮಿಕೊಂಡಿರುವ ಯೋಜನೆಗಳ ಬಗ್ಗೆ ಮಾಧ್ಯಮ ಪ್ರತಿನಿಧಿಗಳಿಗೆ ಸಂಕ್ಷಿಪ್ತ ವಿವರಣೆ ನೀಡಿದರು. ಸುವರ್ಣ ಮಹೋತ್ಸವವನ್ನು ಸಿದ್ದರಾಮಯ್ಯ ನಿನ್ನೆ ಐತಿಹಾಸಿಕ ವಿಜಯನಗರದ ಹಂಪಿಯಲ್ಲಿ ಜ್ಯೋತಿ ಬೆಳಗುವ ಮೂಲಕ ಚಾಲನೆ ನೀಡಿದ್ದಾರೆ ಎಂದು ಹೇಳಿದ ಶಿವಕುಮಾರ್ ಅದರ ಮುಂದುವರಿದ ಭಾಗವಾಗಿ ಗದಗನಲ್ಲಿ ಒಂದು ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು. ಸುವರ್ಣ ಮಹೋತ್ವವದ ನೆನಪಿಗಾಗಿ ತಾಯಿ ಭುವನೇಶ್ವರಿ ಭವನ ನಿರ್ಮಿಸಲು ನಿರ್ಧರಿಸಲಾಗಿದೆ ಮತ್ತು ಅದಕ್ಕಾಗಿ ಜಾಗದ ಶೋಧ ನಡೆದಿದೆ ಎಂದು ಉಪ ಮುಖ್ಯಮಂತ್ರಿ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Nov 03, 2023 10:35 AM