ನೇಹಾ ತಂದೆ ನಿರಂಜನ್ ಹಿರೇಮಠ ನಿವಾಸಕ್ಕೆ ಮುಸ್ಲಿಂ ಮುಖಂಡರ ಭೇಟಿ

Edited By: ಕಿರಣ್ ಹನುಮಂತ್​ ಮಾದಾರ್

Updated on: Apr 20, 2024 | 6:41 PM

ನಗರದಲ್ಲಿ ಎಂಸಿಎ ವಿದ್ಯಾರ್ಥಿನಿ ನೇಹಾ ನಿರಂಜನ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹುಬ್ಬಳ್ಳಿಯ ಬಿಡನಾಳ ಬಡಾವಣೆಯಲ್ಲಿರುವ ನೇಹಾ ತಂದೆ ನಿರಂಜನ್ ಹಿರೇಮಠ ನಿವಾಸಕ್ಕೆ ಮುಸ್ಲಿಂ ಮುಖಂಡರು ಭೇಟಿ ನೀಡಿ ಸಾಂತ್ವಾನ ಹೇಳಿದರು. ‘ನಿನ್ನೆ(ಏ.19) ನಿಮ್ಮನ್ನು ಭೇಟಿಯಾಗಲು ಧೈರ್ಯ ಸಾಲಲಿಲ್ಲ. ನಿಮಗೆ ಧೈರ್ಯ ಹೇಳೋಕೆ ಮನಸು ಇಲ್ಲ ಎಂದು ಮುಸ್ಲಿಂ ಮುಖಂಡರು ಹೇಳಿದರು.

ಹುಬ್ಬಳ್ಳಿ, ಏ.20: ನಗರದಲ್ಲಿ ಎಂಸಿಎ ವಿದ್ಯಾರ್ಥಿನಿ ನೇಹಾ ನಿರಂಜನ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹುಬ್ಬಳ್ಳಿ (Hubballi)ಯ ಬಿಡನಾಳ ಬಡಾವಣೆಯಲ್ಲಿರುವ ನೇಹಾ ತಂದೆ ನಿರಂಜನ್ ಹಿರೇಮಠ ನಿವಾಸಕ್ಕೆ ಮುಸ್ಲಿಂ ಮುಖಂಡರು ಭೇಟಿ ನೀಡಿ ಸಾಂತ್ವಾನ ಹೇಳಿದರು. ‘ನಿನ್ನೆ(ಏ.19) ನಿಮ್ಮನ್ನು ಭೇಟಿಯಾಗಲು ಧೈರ್ಯ ಸಾಲಲಿಲ್ಲ. ನಿಮಗೆ ಧೈರ್ಯ ಹೇಳೋಕೆ ಮನಸು ಇಲ್ಲ ಎಂದು ಮುಸ್ಲಿಂ ಮುಖಂಡರು ಹೇಳಿದರು. ಈ ವೇಳೆ ಮೃತ ಯುವತಿ ತಂದೆ ನಿರಂಜನ್​, ‘ಅಣ್ಣ ಯಾರೋ ಒಬ್ಬರು ಮಾಡಿದ್ರೆ ನಾನ ಯಾವಾಗ ನಿಮ್ಮ ಸಮಾಜದ ಬಗ್ಗೆ ಮಾತಾಡೀನಿ, ನೇಹಾ ನಮ್ಮ ಮನೆ ಮಾಹಾಲಕ್ಷ್ಮೀ, ಅವಳನ್ನು ಯಾರೋ ಟಾರ್ಗೆಟ್ ಮಾಡಿದ್ದರೆ ಎಂದರು.

ಇದೇ ವೇಳೆ ಮುಸ್ಲಿಂ ಮುಖಂಡರು, ‘ ಟಾರ್ಗೆಟ್ ಮಾಡಿದವರಿಗೆ ಒಳ್ಳೆದ ಆಗಲ್ಲ. ನಾವ ಕೆಟ್ಡದ್ದ ವಿಚಾರ ಮಾಡಿದ್ರೆ, ದೇವ್ರು ನಮಗೆ ಕೆಟ್ಟದ್ದು ಮಾಡ್ತಾನೆ. ನಾವೆಲ್ಲರೂ ನಿಮ್ಮ ಜೊತೆ ಇದೀವಿ. ನಾನು ಮತ್ತು ನಿರಂಜನ್​ ಡಿಗ್ರೀವರೆಗೂ ಒಟ್ಟಿಗೆ ಕಲಿತಿದ್ದೇವೂ ಎಂದರು. ಈ ವೇಳೆ ಹರಿಹರ ಪೀಠದ ವಚಾನನಂದ ಸ್ವಾಮೀಜಿ ಕೂಡ ಉಪಸ್ಥಿತರಿದ್ದರು.

ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಶಿವಕುಮಾರ್ ಪತ್ತಾರ್

ಶಿವಕುಮಾರ್ ಎಸ್ ಪತ್ತಾರ.. ಹುಟ್ಟಿದ್ದು ಗದಗ ಜಿಲ್ಲೆಯ ನರಗುಂದ ತಾಲೂಕಿನ ಕೊಣ್ಣೂರ. ಪತ್ರಿಕೋದ್ಯಮ ದಲ್ಲಿ ಕರ್ನಾಟಕ ವಿವಿಯಿಂದ ಸ್ನಾತಕೋತ್ತರ ಪದವಿ ಪಡೆದಿದ್ದೇನೆ.‌ಕಳೆದ 10 ವರ್ಷಗಳಿಂದ ಟಿವಿ9 ಕನ್ನಡ ಸುದ್ದಿವಾಹಿನಿಯಲ್ಲಿ ಹಿರಿಯ ವರದಿಗಾರನಾಗಿ ಕೆಲಸ ನಿರ್ವಹಿಸುತ್ತಿದ್ದೇನೆ.ಕೊಪ್ಪಳದಿಂದ ಆರಂಭವಾಗಿರೋ ವೃತ್ತಿ ಬದುಕು ‌ಸದ್ಯ ಹುಬ್ಬಳ್ಳಿಗೆ ಬಂದು ನಿಂತಿದೆ.ಈ ಮದ್ಯೆ ರಾಯಚೂರು,ಬಳ್ಳಾರಿ,ವರದಿಗಾರನಾಗಿ ಕೆಲಸ ಮಾಡಿದ್ದೇನೆ.ರಹಸ್ಯ ಕಾರ್ಯಾಚರಣೆ ನನಗಿಷ್ಟ.ಟಿವಿ9 ನಲ್ಲಿ ಕೆಲ ರಹಸ್ಯ ಕಾರ್ಯಾಚರಣೆಗಳ ವರದಿಯನ್ನು ಮಾಡಿದ್ದೇನೆ.ಕ್ರೈಮ್, ಜನರ ಬದುಕು ಬವಣೆಯ ಸುದ್ದಿಗಳನ್ನೇ ಮಾಡಿದ್ದೇ ಹೆಚ್ಚು.

Read More