ತುಮಕೂರು: ಇವಿಎಂ ಮಷಿನ್ ಕುರಿತ ತರಬೇತಿಯಲ್ಲಿ ಊಟ, ನೀರಿಲ್ಲದೆ ಅಧಿಕಾರಿಗಳ ಪರದಾಟ
ಬೆಂಗಳೂರಿನಲ್ಲಿ ಚುನಾವಣೆಯ ತರಬೇತಿ ವೇಳೆ ಅವ್ಯವಸ್ಥೆ ಆರೋಪ ಕೇಳಿಬಂದ ಬೆನ್ನಲ್ಲೇ ಇದೀಗ ತುಮಕೂರು (Tumakuru) ಜಿಲ್ಲೆಯ ತಿಪಟೂರಿನ ಸರ್ಕಾರಿ ಡಿಗ್ರಿ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಟ್ರೈನಿಂಗ್ ವೇಳೆ ಊಟ, ತಿಂಡಿ ಕನಿಷ್ಟ ನೀರು ಕೂಡ ನೀಡದೆ ಅಧಿಕಾರಿಗಳು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ.
ತುಮಕೂರು, ಏ.21: ಲೋಕಸಭಾ ಚುನಾವಣೆ ಹಿನ್ನಲೆ ಇವಿಎಂ ಮಷಿನ್‌ಗಳ ಕುರಿತು ಅಧಿಕಾರಿಗಳಿಗೆ ತುಮಕೂರು (Tumakuru) ಜಿಲ್ಲೆಯ ತಿಪಟೂರಿನ ಸರ್ಕಾರಿ ಡಿಗ್ರಿ ಕಾಲೇಜಿನಲ್ಲಿ ತರಬೇತಿ ನೀಡಲಾಗುತ್ತಿದೆ. ಜೊತೆಗೆ ಟ್ರೈನಿಂಗ್ (Training)ಗಾಗಿ ಸುಮಾರು 600ಕ್ಕೂ ಹೆಚ್ಚು ಅಧಿಕಾರಿಗಳನ್ನ ಕರೆಸಿದ್ದರು. ಆದರೆ, ತರಬೇತಿ ವೇಳೆ ಊಟ,ತಿಂಡಿ ಕನಿಷ್ಟ ನೀರು ಸಹ ಕೊಡದೆ ತಾಲೂಕು ಚುನಾವಣಾಧಿಕಾರಿ ಸತಾಯುಸುತ್ತಿರುವ ಘಟನೆ ನಡೆದಿದೆ. ಇವಿಎಂ ಯಂತ್ರಗಳ ಬಗ್ಗೆ ಅಧಿಕಾರಿಗಳಿಗೆ ಟ್ರೈನಿಂಗ್ ಕೊಡಬೇಕಾಗಿತ್ತು. ಆದ್ರೆ, ಟ್ರೈನಿಂಗ್‌ನಲ್ಲಿ ಬೆಳಗ್ಗೆಯಿಂದಲೂ ಇವಿಎಂ ಮಷಿನ್‌ಗಳೇ ಇಲ್ಲ. ಇತ್ತ ಬೆಳಗ್ಗೆಯಿಂದ ಊಟ,, ನೀರು ಇಲ್ಲದೆ ಅಧಿಕಾರಿಗಳು ಪರದಾಟ ನಡೆಸಿದ್ದಾರೆ. ಇನ್ನು ತಾಲೂಕು ಚುನಾವಣಾಧಿಕಾರಿ ಸ್ಥಳಕ್ಕೆ ಬಂದರೂ ಕೂಡ ತಲೆ ಕ್ಯಾರೆ ಎಂದಿಲ್ಲ.
ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ
Published on: Apr 21, 2024 06:48 PM