ಅಯೋಧ್ಯೆ ಹಗರಣ ಬೆನ್ನಲ್ಲೇ ರಾಜ್ಯ ಸರ್ಕಾರ ಅಲರ್ಟ್: ರಾಜ್ಯದ ಎಲ್ಲಾ ದೇವಾಲಯದ ಹುಂಡಿಗಳ ರಕ್ಷಣೆಗೆ ಬಿಗಿ ಭದ್ರತೆ

Updated on: Jul 16, 2026 | 8:08 PM

ಮುಖ್ಯಾಂಶಗಳು

  • ಅಯೋಧ್ಯೆ ಹಗರಣದ ಬೆನ್ನಲ್ಲೇ ರಾಜ್ಯದ ದೇವಾಲಯಗಳಿಗೆ ಬಿಗಿ ಭದ್ರತೆ
  • ಮುಜರಾಯಿ ದೇವಾಲಯಗಳ ಹುಂಡಿ ಹಣ ರಕ್ಷಣೆಗೆ ಸರ್ಕಾರದಿಂದ ಹೊಸ ಕ್ರಮ
  • ಕಾಣಿಕೆ ಹಣವನ್ನು ದೇವಾಲಯದ ಅಭಿವೃದ್ಧಿಗೆ ಮಾತ್ರ ಬಳಕೆ ಎಂದ ಜಿ. ಪರಮೇಶ್ವರ್

ಅಯೋಧ್ಯೆ ಹಗರಣದ ನಂತರ ರಾಜ್ಯ ಸರ್ಕಾರವು ಎಚ್ಚೆತ್ತುಕೊಂಡಿದ್ದು, ರಾಜ್ಯದ ಎಲ್ಲಾ ದೇವಾಲಯಗಳ ಹುಂಡಿಗಳಿಗೆ ಬಿಗಿ ಭದ್ರತೆ ಒದಗಿಸಲು ಮುಂದಾಗಿದೆ. ಕಾಣಿಕೆ ಹಣವನ್ನು ದೇವಾಲಯದ ಅಭಿವೃದ್ಧಿಗೆ ಮಾತ್ರ ಬಳಸಲಾಗುವುದು ಎಂದು ಸಚಿವ ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ. ಹುಂಡಿಗಳ ಮೇಲೆ ನಿಗಾ ವಹಿಸಲು ನಾಲ್ಕು ಕಡೆಗಳಿಂದ ಸಿಸಿಟಿವಿ ಅಳವಡಿಸಿ, ಕೇಂದ್ರ ಕಚೇರಿಯಿಂದ ಮೇಲ್ವಿಚಾರಣೆ ನಡೆಸಲಾಗುವುದು.

ಬೆಂಗಳೂರು, ಜುಲೈ 16: ಅಯೋಧ್ಯೆ ರಾಮಮಂದಿರ ಹುಂಡಿ ಅವ್ಯವಹಾರದ ಬೆನ್ನಲ್ಲೇ ಅಲರ್ಟ್ ಆಗಿರುವ ರಾಜ್ಯ ಸರ್ಕಾರವು ರಾಜ್ಯದ ದೇವಾಲಯಗಳಲ್ಲಿ ಭದ್ರತೆಯನ್ನು ಹೆಚ್ಚಿಸಲು ನಿರ್ಧರಿಸಿದೆ. ರಾಜ್ಯದ ಎಲ್ಲಾ ಮುಜರಾಯಿ ದೇವಾಲಯಗಳಲ್ಲಿನ ಕಾಣಿಕೆ ಹುಂಡಿಗಳಿಗೆ ಬಿಗಿ ಭದ್ರತಾ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಈ ಕುರಿತಾಗಿ ಡಿಸಿಎಂ ಜಿ. ಪರಮೇಶ್ವರ್​ ಮಾತನಾಡಿದ್ದು, ‘‘ರಾಜ್ಯದಲ್ಲಿ 39 ಸಾವಿರ ದೇವಸ್ಥಾನಗಳು ಮುಜರಾಯಿ ಅಡಿಯಲ್ಲಿವೆ. ಮುಜರಾಯಿಗೆ ಸೇರದ ದೇವಸ್ಥಾನಗಳೂ ಇವೆ. ಎ ದರ್ಜೆಯ ದೇವಸ್ಥಾನಕ್ಕೆ ಸಾಕಷ್ಟು ಹಣ ಬರುತ್ತೆ. ಹುಂಡಿ ಇತರೆ ಸ್ಥಳಕ್ಕೆ ಸಿಸಿಟಿಸಿ ಹಾಕಿ ಕೇಂದ್ರೀಕೃತ ಸರ್ವರ್​​ ಅಳವಡಿಸಬೇಕು. ಕೇಂದ್ರ ಸ್ಥಾನದಿಂದಲೇ ಮಾನಿಟರ್ ಮಾಡಬೇಕು ಎಂದು ಆದೇಶ ಮಾಡಿದ್ದೇವೆ. ದೇವಸ್ಥಾನದ ಹಣವನ್ನು ಆ ದೇವಸ್ಥಾನಕ್ಕೆ ಖರ್ಚು ಮಾಡಬೇಕು. ಅದಕ್ಕಾಗಿ ಕಾರ್ಯಕ್ರಮ ಹಾಕಿಕೊಳ್ಳುತ್ತೇನೆ. 10% ಹಣವನ್ನು ಸಿ‌ ದರ್ಜೆಯ ದೇವಸ್ಥಾನಕ್ಕೆ ಕೊಡಬಹುದು, ಅದು ಬಿಟ್ಟರೆ ಆ ಹಣವನ್ನು ಬೇರೆ ಉದ್ದೇಶಕ್ಕೆ ಬಳಸಲ್ಲ’’ ಎಂದು ಹೇಳಿದ್ದಾರೆ.

ವರದಿ: ಈರಣ್ಣ ಬಸವ

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Published on: Jul 16, 2026 08:07 PM
Follow Us