ಕಾಂಗ್ರೆಸ್ ವಿರುದ್ಧ ಟೀಕಿಸುವ ಭರದಲ್ಲಿ ಭಾರತ ಭಿಕ್ಷುಕರ ದೇಶ ಆಗ್ತಿರಲಿಲ್ಲ ಎಂದ ಕಟೀಲ್
ಈ ಹಿಂದೆ ಭಾರತ ಸಾಲಗಾರರ ಹಾಗೂ ಮೋಸಗಾರರ ರಾಷ್ಟ್ರವಾಗಿತ್ತು. ಈ ಎಲ್ಲಾ ಅಪವಾದಗಳನ್ನು ತೆಗೆದು ಹಾಕಿದ್ದು ಪ್ರಧಾನಿ ನರೇಂದ್ರ ಮೋದಿ ಸರ್ಕಾರ. ಇದನ್ನು ಸಹಿಸಲಾಗದೇ ಕಾಂಗ್ರೆಸ್ ಹೂವಿಡುವ ಕೆಲಸ ಮಾಡ್ತಿದೆ ಎಂದು ನಳಿನ್ ಕುಮಾರ್ ಕಟೀಲ್ ವಾಗ್ದಾಳಿ ಮಾಡಿದರು.
ಕೊಡಗು: ರಾಜ್ಯದಲ್ಲಿ ಕಾಂಗ್ರೆಸ್ (Congress) ಅವಧಿಯಲ್ಲೇ ಅತಿ ಹೆಚ್ಚು ಗಲಭೆಗಳಾಗಿವೆ. ಅವರ ಅವಧಿಯಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳಾಗಿಲ್ಲ. ಕಾಂಗ್ರೆಸ್ನವರು ಜನರ ಕಿವಿಗೆ ಹೂವು ಇಟ್ಟೇ ಬದುಕಿದವರು ಎಂದು ಜಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ (Nalin Kumar Kateel) ಕಿಡಿಕಾರಿದರು. ಜಿಲ್ಲೆಯ ವಿರಾಜಪೇಟೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಈ ಹಿಂದೆ ಭಾರತ ಸಾಲಗಾರರ ಹಾಗೂ ಮೋಸಗಾರರ ರಾಷ್ಟ್ರವಾಗಿತ್ತು. ಈ ಎಲ್ಲಾ ಅಪವಾದಗಳನ್ನು ತೆಗೆದು ಹಾಕಿದ್ದು ಪ್ರಧಾನಿ ನರೇಂದ್ರ ಮೋದಿ ಸರ್ಕಾರ. ನಮ್ಮ ಸರ್ಕಾರ. ಇದನ್ನು ಸಹಿಸಲಾಗದೇ ಕಾಂಗ್ರೆಸ್ ಹೂವಿಡುವ ಕೆಲಸ ಮಾಡ್ತಿದೆ ವಾಗ್ದಾಳಿ ಮಾಡಿದರು.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published on: Feb 19, 2023 05:34 PM