ಸುದೀಪ್ ಹೇಳಿದ ‘ಗೌರವ’ದ ಪಾಠ ಮರೆತು ಮತ್ತೆ ಕಿತ್ತಾಟಕ್ಕೆ ಇಳಿದ ಅಶ್ವಿನಿ

Updated on: Oct 30, 2025 | 9:38 AM

ಬಿಗ್ ಬಾಸ್ ಮನೆಯಲ್ಲಿ ಜಗಳ ಯಾವಾಗ ಆರಂಭ ಆಗುತ್ತದೆ ಎಂದು ಹೇಳೋದು ಕಷ್ಟ. ಇದಕ್ಕೆ ಹೊಸ ಉದಾಹರಣೆ ಸಿಕ್ಕಿದೆ. ಸ್ಪರ್ಧಿಗಳ ಮಧ್ಯೆ ಕಿತ್ತಾಟ ಶುರುವಾಗಿದೆ. ಇದಕ್ಕೆ ಕಾರಣ ಆಗಿರೋದು ಗೌರವದ ವಿಚಾರ. ಈ ವಿಚಾರವಾಗಿ ಸ್ಪರ್ಧಿಗಳು ಕಿತ್ತಾಟ ಶುರು ಮಾಡಿರೋದು ಅಚ್ಚರಿ ಮೂಡಿಸಿದೆ.

ಸುದೀಪ್ ಅವರು ಕಳೆದ ವಾರ ಗೌರವ ಎಂಬ ವಿಚಾರದ ಬಗ್ಗೆ ಪಾಠ ಮಾಡಿದ್ದರು. ಬೇರೆಯವರಿಂದ ಗೌರವ ನಿರೀಕ್ಷೆ ಮಾಡುತ್ತೇವೆ ಎಂದರೆ ನಾವು ಮೊದಲು ಗೌರವ ಕೊಡಬೇಕು ಎಂದು ಹೇಳಿದ್ದರು. ಅಶ್ವಿನಿ ಗೌಡ ಅವರಿಗೆ ಮುಖ್ಯವಾಗಿ ಇದನ್ನು ಹೇಳಲಾಗಿತ್ತು. ಆದರೆ, ಈಗ ಈ ಪಾಠ ಮರೆತಿದ್ದಾರೆ. ಕಾವ್ಯಾಗೆ ಅವರು ಏಕವಚನದಲ್ಲೇ ಮಾತನಾಡಿಸಿದ್ದಾರೆ. ಇದು ಕಾವ್ಯಾಗೆ ಸಿಟ್ಟು ತರಿಸಿದೆ. ಈ ಕಾರಣದಿಂದ ಅಶ್ವಿನಿ ಅವರಿಗೆ ಅವರು ಏಕವಚನ ಬಳಕೆ ಮಾಡಿದ್ದಾರೆ. ಇದರಿಂದ ಅಶ್ವಿನಿ ಸಿಟ್ಟಾಗಿದ್ದಾರೆ. ಗೌರವ ಕೊಟ್ಟು ಗೌರವ ತೆಗೆದುಕೊಳ್ಳಬೇಕು ಎಂಬ ಸುದೀಪ್ ಮಾತು ಇಲ್ಲಿ ಮರೆತೇ ಹೋಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published on: Oct 30, 2025 09:37 AM