‘ಕೆಜಿಎಫ್ 3 ಟೀಸರ್ ರಿಲೀಸ್’; ಹೀಗೂ ಟ್ರೋಲ್ ಮಾಡಬಹುದು

Updated on: Feb 04, 2026 | 8:31 AM

‘ಕೆಜಿಎಫ್ 3’ ಟೀಸರ್ ರಿಲೀಸ್ ಆಗಿದೆ. ಹೀಗೆಂದು ಟ್ರೋಲ್ ಮಾಡಲಾಗುತ್ತಿದೆ. ಆದರೆ, ಟ್ರೋಲ್ ಮಾಡುವುದಕ್ಕೆ ಕಾರಣ, ‘ಧುರಂಧರ್ 2’ ಚಿತ್ರ. ಮೊದಲ ಭಾಗದ ಕೊನೆಯಲ್ಲಿ ತೋರಿಸಿದ್ದನ್ನೇ ಮತ್ತೆ ತೋರಿಸಿರುವ ಕಾರಣಕ್ಕೆ ಟ್ರೋಲ್ ಮಾಡಲಾಗುತ್ತಿದೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆ ಆಗುತ್ತಿದೆ.

‘ಕೆಜಿಎಫ್ 3’ ಸಿನಿಮಾ ಟೀಸರ್ ರಿಲೀಸ್ ಆಗಿದೆ! ಹಾಂಗತ ಇದು ನಿಜ ಎಂದುಕೊಳ್ಳಬೇಡಿ. ಇದನ್ನು ಸೋಶಿಯಲ್ ಮೀಡಿಯಾದಲ್ಲಿ ‘ಧುರಂಧರ್ 2’ ಚಿತ್ರವನ್ನು ಟ್ರೋಲ್ ಮಾಡಲು ಬಳಸಲಾಗುತ್ತಿದೆ. ‘ಧುರಂಧರ್ 2’ ಸಿನಿಮಾದ ಟೀಸರ್ ರಿಲೀಸ್ ಆಗಿದೆ. ಮೊದಲ ಭಾಗದ ಎಂಡ್ ಕಾರ್ಡ್​​​ನಲ್ಲಿ ತೋರಿಸಿದ ದೃಶ್ಯಗಳನ್ನೇ ಟೀಸರ್ ಎಂದು ಬಿಡಲಾಗಿದೆ. ಹೀಗಾಗಿ, ‘ಕೆಜಿಎಫ್ 2’ ಎಂಡ್ ಕಾರ್ಡ್ ಅಲ್ಲಿ ಬರೋ ‘ಕೆಜಿಎಫ್ 3’ ಬಗೆಗಿನ ಹಿಂಟ್​ನ ಯಶ್ ಫ್ಯಾನ್ಸ್ ‘ಕೆಜಿಎಫ್ 3 ಟೀಸರ್ ಬಿಡುಗಡೆ’ ಎಂಬ ಕ್ಯಾಪ್ಶನ್ ನೀಡಿ ವೈರಲ್ ಮಾಡುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us
ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More