ಟ್ರೋಲ್​ ಆದ ಬಿಗ್​ ಬಾಸ್​ ಸ್ಪರ್ಧಿಗಳ ಬಗ್ಗೆ ಪ್ರಶ್ನೆ: ಸುದ್ದಿಗೋಷ್ಠಿಯಲ್ಲಿ ಕಿಚ್ಚ ಸುದೀಪ್​ ಗರಂ

Updated on: Oct 03, 2023 | 4:22 PM

ಕಳೆದ ಸೀಸನ್​ಗಳಲ್ಲಿ ಸ್ಪರ್ಧಿಗಳ ಆಯ್ಕೆಯಿಂದ ಸಮಾಜಕ್ಕೆ ತಪ್ಪು ಸಂದೇಶ ರವಾನೆ ಆಗಿದೆ ಎಂಬ ಅಭಿಪ್ರಾಯ ವ್ಯಕ್ತವಾಯಿತು. ಆಗ ಸುದೀಪ್​ ಅವರು ಗರಂ ಆದರು. ‘ಟ್ರೋಲ್​ ಆದ ಸ್ಪರ್ಧಿಗಳು ಯಾರು ಎಂಬ ಹೆಸರನ್ನು ಹೇಳಿ’ ಎಂದು ಮಾಧ್ಯಮದವರಿಗೆ ಸುದೀಪ್​ ಒತ್ತಾಯಿಸಿದರು. ಆ ಸಂದರ್ಭದ ವಿಡಿಯೋ ಇಲ್ಲಿದೆ..

‘ಬಿಗ್ ಬಾಸ್​’ (Bigg Boss) ಎಂದರೆ ವಿವಾದಗಳು ಕಾಮನ್​. ಪ್ರತಿ ಬಾರಿಯೂ ಸ್ಪರ್ಧಿಗಳ ಆಯ್ಕೆ ಬಗ್ಗೆ ಕೆಲವರು ಅಸಮಾಧಾನ ವ್ಯಕ್ತಪಡಿಸುತ್ತಾರೆ. ಕಾಂಟ್ರವರ್ಸಿ ಮಾಡಿಕೊಂಡ ವ್ಯಕ್ತಿಗಳಿಗೆ ಈ ಶೋನಲ್ಲಿ ಮಣೆ ಹಾಕಲಾಗುತ್ತದೆ ಎಂಬ ಮಾತಿದೆ. ಇಂದು (ಅ.3) ಸುದ್ದಿಗೋಷ್ಠಿಯಲ್ಲಿ ಆ ಬಗ್ಗೆ ಪ್ರಸ್ತಾಪ ಆಯಿತು. ಕಳೆದ ಸೀಸನ್​ನಲ್ಲಿ ಸ್ಪರ್ಧಿಗಳ ಆಯ್ಕೆಯಿಂದ ಸಮಾಜಕ್ಕೆ ತಪ್ಪು ಸಂದೇಶ ರವಾನೆ ಆಗಿದೆ ಎಂಬ ಪ್ರಶ್ನೆ ಎದುರಾಯಿತು. ಆಗ ಕಿಚ್ಚ ಸುದೀಪ್​ (Kichcha Sudeep) ಅವರು ಗರಂ ಆದರು. ‘ಟ್ರೋಲ್​ ಆದ ಸ್ಪರ್ಧಿಗಳು ಯಾರು ಎಂಬ ಹೆಸರನ್ನು ಹೇಳಿ’ ಎಂದು ಮಾಧ್ಯಮದವರಿಗೆ ಸುದೀಪ್​ ಒತ್ತಾಯಿಸಿದರು. ‘ನೀವು ಮಾತನಾಡುತ್ತಿರುವುದು ಇನ್ನೊಬ್ಬರ ಬಗ್ಗೆ. ನೀವು ಹೆಸರು ಹೇಳಿದರೆ ಮಾತ್ರ ಉತ್ತರ ಕೊಡುತ್ತೇನೆ. ಅವರು ಯಾರದ್ದೋ ತಂದೆ-ತಾಯಿಯ ಮಕ್ಕಳು. ಯಾರದ್ದೋ ಗಂಡ, ಯಾರದ್ದೋ ಹೆಂಡತಿ. ಅವರ ಮನೆ ಒಳಗೆ ಏನು ನಡೆದಿತ್ತೋ ನಮಗೆ ಗೊತ್ತಾ? ಕ್ಲೀನ್ ಆಗೋಕೆ ಮತ್ತು ಅವರು ತಮ್ಮನ್ನು ಸಾಬೀತು ಮಾಡಿಕೊಳ್ಳೋಕೆ ಇದು ಇದು ಒಳ್ಳೆಯ ವೇದಿಕೆ. ಆ ಜಾಗದಲ್ಲಿ ನಾಳೆ ನೀವು ಇರಬಹುದು. ಆಗ ನಿಮ್ಮ ಪರವಾಗಿ ನಾವಿರುತ್ತೇವೆ. ಯಾರೋ ಟ್ರೋಲ್​ ಮಾಡಿರಬಹುದು. ಆದರೆ ನಿಮಗೆ ಜವಾಬ್ದಾರಿ ಇದೆ’ ಎಂದು ಖಡಕ್​ ಆಗಿ ಸುದೀಪ್​ (Sudeep) ಉತ್ತರ ನೀಡಿದರು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us
ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More