ಬಿಗ್ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ: ಕಿಚ್ಚನ ಖಡಕ್ ಡೈಲಾಗ್
Bigg Boss Kannada Season 11: ಬಿಗ್ಬಾಸ್ ಅನ್ನು ಮುಚ್ಚಿಸುವುದಾಗಿ, ಬಿಗ್ಬಾಸ್ ಅನ್ನು ಎಕ್ಸ್ಪೋಸ್ ಮಾಡುವುದಾಗಿ, ಬಿಗ್ಬಾಸ್ನ ಬಾಗಿಲು ಒಡೆಸುವುದಾಗಿ ಹೇಳಿದ್ದ ವಕೀಲ ಜಗದೀಶ್ಗೆ ಕಿಚ್ಚ ಸುದೀಪ್ ಸರಿಯಾಗಿಯೇ ಮಾತಿನ ಛಾಟಿ ಬೀಸಿದ್ದಾರೆ.
ಬಿಗ್ಬಾಸ್ ಕನ್ನಡ ಸೀಸನ್ 11 ಪ್ರಾರಂಭವಾದಾಗಿನಿಂದಲೂ ಮನೆಯ ಒಳಗೆ ಜಗಳಗಳೇ ನಡೆಯುತ್ತಿವೆ. ಬಿಗ್ಬಾಸ್ ಆರಂಭವಾದ ಕೆಲವೇ ದಿನಗಳಲ್ಲಿ ಲಾಯರ್ ಜಗದೀಶ್ ಬಿಗ್ಬಾಸ್ ಮೇಲೆ ಆವಾಜ್ ಹೊಡೆದರು. ‘ಬಿಗ್ ಬಾಸ್ ಅನ್ನು ಎಕ್ಸ್ಪೋಸ್ ಮಾಡ್ತೀನಿ’, ‘ನಮ್ಮನ್ನು ಎದುರು ಹಾಕಿಕೊಂಡು ಕರ್ನಾಟಕದಲ್ಲಿ ಬಿಗ್ಬಾಸ್ ಹೇಗೆ ನಡೆಸ್ತೀರ ನೋಡ್ತೀನಿ’ ಎಂದೆಲ್ಲ ಆವಾಜ್ ಹೊಡೆದಿದ್ದರು. ಇದು ಭಾರಿ ಸುದ್ದಿಯಾಗಿತ್ತು. ಇಂದು ಈ ಸೀಸನ್ನ ಮೊದಲ ವಾರದ ಪಂಚಾಯ್ತಿ ನಡೆದಿದ್ದು, ಸುದೀಪ್, ಲಾಯರ್ ಜಗದೀಶ್ಗೆ ಖಡಕ್ ಆಗಿ ಪ್ರತ್ಯುತ್ತರ ನೀಡಿದ್ದಾರೆ. ನಿಮ್ಮಪ್ಪನಾಣೆ ಬಿಗ್ಬಾಸ್ ಅನ್ನು ಹಾಳುಮಾಡಲಾರಿರಿ ಎಂದಿದ್ದಾರೆ ಸುದೀಪ್.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Oct 05, 2024 07:02 PM