Nithya Bhavishya: ನವರಾತ್ರಿಯ ನಾಲ್ಕನೇ ದಿನದ ರಾಶಿ ಭವಿಷ್ಯ ತಿಳಿಯಿರಿ

ಇಂದು (ಅ.06) ಭಾನುವಾರ. 9 ದಿನಗಳ ಕಾಲ ನವರಾತ್ರಿ ಹಬ್ಬವನ್ನು ಆಚರಿಸಲಾಗುತ್ತೆ. ಹೆಣ್ಣು ದೇವತೆಗಳನ್ನು ಪೂಜಿಸಲಾಗುತ್ತೆ. ಈ ದಿನ ದ್ವಾದಶ ರಾಶಿಗಳ ಭವಿಷ್ಯ ಹೇಗಿದೆ? ಯಾವ ರಾಶಿಯವರಿಗೆ ಏನು ಫಲ? ಗ್ರಹಗಳ ಸಂಚಾರದಿಂದ ಆಗುವ ಪರಿಣಾಮಗಳೇನು? ಎಂಬುವುದನ್ನು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ. ಬಸವರಾಜ ಗುರೂಜಿ ಈ ವಿಡಿಯೋದಲ್ಲಿ ಮಾಹಿತಿ ನೀಡಿದ್ದಾರೆ.

Nithya Bhavishya: ನವರಾತ್ರಿಯ ನಾಲ್ಕನೇ ದಿನದ ರಾಶಿ ಭವಿಷ್ಯ ತಿಳಿಯಿರಿ
|

Updated on: Oct 06, 2024 | 7:20 AM

ಅಕ್ಟೋಬರ್ 06ರ ಭಾನುವಾರವಾದ ಇಂದು ನವರಾತ್ರಿ ಹಬ್ಬದ 4ನೇ ದಿನ. ಈ ವರ್ಷದ ಶಾರದೀಯ ನವರಾತ್ರಿ ಹಬ್ಬವನ್ನ ಅಕ್ಟೋಬರ್ 3 ರಿಂದ ಆಚರಿಸಲಾಗುತ್ತಿದೆ. ಭಾಗವತ ಮತ್ತು ಮಾರ್ಕಂಡೇಯ ಪುರಾಣದ ಪ್ರಕಾರ, ನವರಾತ್ರಿಯ 9 ದಿನಗಳಲ್ಲಿ ದುರ್ಗಾ ದೇವಿಯ (Durga Devi) 9 ರೂಪಗಳನ್ನು ಪೂಜಿಸಲಾಗುತ್ತದೆ. ನವರಾತ್ರಿಯ ನಾಲ್ಕನೇ ದಿನವನ್ನು ದುರ್ಗಾ ದೇವಿಯ ನಾಲ್ಕನೇ ರೂಪವಾದ ಕೂಷ್ಮಾಂಡ ದೇವಿಗೆ ಸಮರ್ಪಿಸಲಾಗಿದೆ. ಈಕೆಯನ್ನು ದುರ್ಗಾ ದೇವಿಯ ಒಂಬತ್ತು ಅವತಾರಗಳಲ್ಲಿ ಒಬ್ಬಳು ಎಂದು ಹೇಳಲಾಗುತ್ತದೆ. ಶಕ್ತಿ ಮತ್ತು ಬೆಳಕನ್ನು ಸಮತೋಲನಗೊಳಿಸಲು ಪಾರ್ವತಿ ದೇವಿಯು ಈ ರೂಪವನ್ನು ಪಡೆದಳು ಎನ್ನುವ ನಂಬಿಕೆಯಿದೆ. ಇಂದು ದ್ವಾದಶ ರಾಶಿ ಭವಿಷ್ಯ (Horoscope) ಹೇಗಿದೆ?, ಈ ದಿನದ ಗ್ರಹಗಳ ಚಲನವಲನ ಹೇಗಿದೆ? ಈ ಪ್ರಶ್ನೆಗಳಿಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ. ಬಸವರಾಜ ಗುರೂಜಿ ಉತ್ತರ ನೀಡಿದ್ದಾರೆ. ವಿಡಿಯೋ ನೋಡಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ಶರದ್ ಋತು, ಕನ್ಯಾ ಮಾಸ, ಮಹಾನಕ್ಷತ್ರ: ಹಸ್ತಾ, ಮಾಸ: ಆಶ್ವಯುಜ, ಪಕ್ಷ: ಶುಕ್ಲ, ವಾರ: ಭಾನು, ತಿಥಿ: ಚತುರ್ಥೀ, ನಿತ್ಯನಕ್ಷತ್ರ: ವಿಶಾಖಾ, ಯೋಗ: ಪ್ರೀತಿ, ಕರಣ: ಗರಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 23 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 17 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 04:48 ರಿಂದ 06:17, ಯಮಘಂಡ ಕಾಲ ಮಧ್ಯಾಹ್ನ 12:21ರಿಂದ 01: 50ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 03:19 ರಿಂದ 04:48 ರವರೆಗೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Follow us