‘ಔಟಾದೆ, ಹೋಗಪ್ಪ’; ಕಿಚ್ಚ ಸುದೀಪ್ ಸ್ಲೆಡ್ಜಿಂಗ್​​ಗೆ ಎದುರಾಳಿ ತಂಡದವರು ಕಂಗಾಲು

Updated on: Feb 02, 2026 | 8:11 AM

ಕಿಚ್ಚ ಸುದೀಪ್ ಅವರ ಹಲವು ವರ್ಷಗಳ ಕನಸು ನನಸಾಗಿದೆ. ಮತ್ತೊಮ್ಮೆ ಸಿಸಿಎಲ್ ಕಪ್ ಎತ್ತಬೇಕು ಎಂದು ಕಿಚ್ಚ ಕನಸು ಕಂಡಿದ್ದರು. ಆ ಕನಸು ಈಗ ನನಸಾಗಿದೆ. ಸುದೀಪ್ ಅವರು ಕಪ್ ಎತ್ತಿದ್ದಾರೆ. ಈ ಪಂದ್ಯದ ವೇಳೆ ಸುದೀಪ್ ಅವರು ಮಾಡಿದ ಸ್ಲೆಡ್ಜಿಂಗ್ ವಿಡಿಯೋ ಗಮನ ಸೆಳೆದಿದೆ.

ಸುದೀಪ್ ಅವರು 2025ನೇ ಸಾಲಿನ ಸಿಸಿಎಲ್ ಜರ್ನಿ ಪೂರ್ಣಗೊಳಿಸಿದ್ದಾರೆ. ಬೆಂಗಾಲ್ ಟೈಗರ್ಸ್ ವಿರುದ್ಧ ಗೆಲುವು ಸಾಧಿಸಿ, ಚಾಂಪಿಯನ್ಸ್ ಆಗಿ ಹೊರಹೊಮ್ಮಿದ್ದಾರೆ. ಪಂದ್ಯದ ವೇಳೆ ಸುದೀಪ್ ಅವರು ಸಖತ್ ಅಗ್ರೆಸ್ಸಿವ್ ಆಗಿದ್ದರು. ಅವರು ಬೆಂಗಾಲ್ ಟೈಗರ್ಸ್ ತಂಡದ ಇಂದ್ರಾಶಿಶ್ ಔಟ್ ಆದಾಗ ಅವರನ್ನು ಸ್ಲೆಡ್ಜ್ ಮಾಡಿದ್ದಾರೆ. ಬ್ಯಾಟ್ಸಮನ್​ ಬೋಲ್ಡ್ ಆದ ಬಳಿಕ ಅವರಿಗೆ ಪೆವಿಲಿಯನ್ ದಾರಿ ತೋರಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published on: Feb 02, 2026 08:10 AM
Follow Us
Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More