‘ತಪ್ಪಾಗಿ ಆಡಿದ ಮಾತಿಗೆ ಬುದ್ಧಿ ಕಲಿಸದೇ ಬಿಡಲ್ಲ’; ರಕ್ಷಿತಾ ಪರ ನಿಂತ ಸುದೀಪ್
‘ಬಿಗ್ ಬಾಸ್ ಕನ್ನಡ ಸೀಸನ್ 12’ರಲ್ಲಿ ಅಶ್ವಿನಿ-ಜಾನ್ವಿ vs ರಕ್ಷಿತಾ ಶೆಟ್ಟಿ ಎಂಬ ಪರಿಸ್ಥಿತಿ ನಿರ್ಮಾಣ ಆಗಿದೆ. ರಕ್ಷಿತಾ ಅವರನ್ನು ತುಳಿಯುವ ಪ್ರಯತ್ನ ಇಲ್ಲಿ ನಡೆದಿದೆ. ಇದಕ್ಕೆ ಸುದೀಪ್ ಅವರು ಖಡಕ್ ಆಗಿ ಉತ್ತರಿಸಿದ್ದಾರೆ. ಅವರ ಮಾತಿಗೆ ಜಾನ್ವಿ-ಅಶ್ವಿನಿ ಅವರು ಥಂಡ್ ಆಗಿದ್ದಾರೆ.
‘ಬಿಗ್ ಬಾಸ್ ಕನ್ನಡ ಸೀಸನ್ 12’ರಲ್ಲಿ ಸುದೀಪ್ ಅವರು ರಕ್ಷಿತಾ ಶೆಟ್ಟಿ ಪರ ನಿಂತಿದ್ದಾರೆ. ಅಶ್ವಿನಿ ಗೌಡ ಹಾಗೂ ಜಾನ್ವಿ ಸೇರಿ ರಕ್ಷಿತಾ ವಿರುದ್ಧ ಹರಿಹಾಯ್ದಿದ್ದರು. ಇದು ಅವರಿಗೆ ಇಷ್ಟ ಆಗಿಲ್ಲ. ಈ ಕಾರಣದಿಂದಲೇ ಅವರಿಗೆ ಕೋಪ ಬಂದಿದೆ. ‘ತಪ್ಪಾಗಿ ಆಡಿದ ಮಾತಿಗೆ ಬುದ್ಧಿ ಕಲಿಸದೇ ಬಿಡಲ್ಲ’ ಎಂದು ಸುದೀಪ್ ಅವರು ನೇರ ಮಾತಲ್ಲಿ ಹೇಳಿದ್ದಾರೆ. ಈ ಪ್ರೋಮೋ ಮೂಲಕ ಇಂದಿನ ಎಪಿಸೋಡ್ ಎಷ್ಟು ಖಡಕ್ ಆಗಿರಬಹುದು ಎಂಬುದರ ಸೂಚನೆ ಸಿಕ್ಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
