ಫ್ರೆಂಡ್​ಶಿಪ್​ಗಾಗಿ ಫ್ರೆಂಡ್​ಶಿಪ್ ಸಾಂಗ್ ಹೇಳಿದ ಸುದೀಪ್; ಮೆಲೋಡಿ ಹಾಡಿಗೆ ಕಿಚ್ಚನ ಧ್ವನಿ

Updated on: Jul 29, 2025 | 12:41 PM

ಕಿಚ್ಚ ಸುದೀಪ್ ಅವರು ಸಾಕಷ್ಟು ಹಾಡುಗಳನ್ನು ಈ ಮೊದಲು ಹಾಡಿದ್ದು ಇದೆ. ಈಗ ಅವರು ಮೆಲೋಡಿ ಹಾಡನ್ನು ಹಾಡಿದ್ದಾರೆ. ಈ ಸುದ್ದಿ ಸಾಕಷ್ಟು ಗಮನ ಸೆಳೆಯುತ್ತಿದೆ. ಅವರಿಗೆ ಮೆಲೋಡಿ ಹಾಡು ಹಾಡಲು ಸಾಕಷ್ಟು ಭಯ ಇತ್ತು. ಆದರೆ, ಅದನ್ನು ಅವರು ಯಶಸ್ವಿಯಾಗಿ ನಿರ್ವಹಿಸಿದ್ದಾರೆ.

ಸುದೀಪ್ ಅವರು ಫ್ರೆಂಡ್​ಶಿಪ್​ಗಾಗಿ ಏನು ಬೇಕಾದರೂ ಮಾಡಲು ರೆಡಿ. ಈಗ ಚಂದನ್ ಕುಮಾರ್ ಅವರ ಜೊತೆಗಿನ ಗೆಳೆತನದ ಕಾರಣಕ್ಕೆ ಹಾಡನ್ನು ಹಾಡಿದ್ದಾರೆ. ಅದು ಕೂಡ ಮೆಲೋಡಿ ಸಾಂಗ್ ಅನ್ನೋದು ವಿಶೇಷ. ಈ ಬಗ್ಗೆ ಅವರೇ ಮಾಹಿತಿ ನೀಡಿದ್ದಾರೆ. ‘ಫ್ಲರ್ಟ್’ ಹೆಸರಿನ ಚಿತ್ರವನ್ನು ಚಂದನ್ ಕುಮಾರ್ ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರದ ‘ನೀ ನನ್ನ ಜೀವ..’ ಹೆಸರಿನ ಫ್ರೆಂಡ್​ಶಿಪ್ ಆ್ಯಂಥಮ್ ಸಾಂಗ್​​ನ ಸುದೀಪ್ (Kichcha Sudeep) ಹಾಡಿದ್ದಾರೆ. ಇದರ ಅನುಭವದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಈ ಹಾಡು ರಿಲೀಸ್​ ಆಗಿ ಸಾವಿರಾರು ವೀವ್ಸ್ ಪಡೆದಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us
ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More