ವಯಸ್ಸು ನಂಬರ್ ಮಾತ್ರ; ಸಿಸಿಎಲ್ನಲ್ಲಿ ಅದ್ಭುತ ಕ್ಯಾಚ್ ಹಿಡಿದ ಕಿಚ್ಚ ಸುದೀಪ್
ಕಿಚ್ಚ ಸುದೀಪ್ ಅವರು ಅದ್ಭುತ ಕ್ಯಾಚ್ ಹಿಡಿದು ಅಚ್ಚರಿ ಮೂಡಿಸಿದ್ದಾರೆ. ವಯಸ್ಸು 50 ದಾಟಿದ್ದರೂ ಆಟದಲ್ಲಿ ಅವರಿಗೆ ಇದು ಅಡ್ಡಿ ಆಗುತ್ತಿಲ್ಲ. ಸುದೀಪ್ ಅವರು ಸಿಸಿಎಲ್ನಲ್ಲಿ ಕರ್ನಾಟಕ ಬುಲ್ಡೋಜರ್ ತಂಡದಲ್ಲಿ ಇದ್ದಾರೆ. ಅವರು ಕೀಪರ್ ಕೂಡ ಹೌದು. ಆ ಕ್ಯಾಚ್ ಹಿಡಿದ ವಿಡಿಯೋ ಇಲ್ಲಿದೆ.
ಸಿಸಿಎಲ್ ಕ್ರಿಕೆಟ್ ಹಬ್ಬ ಮತ್ತೆ ಶುರುವಾಗಿದೆ. ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಅನ್ನೋದು ಸಿಸಿಎಲ್ನ ವಿಸ್ತೃತ ರೂಪ. ಸಿಸಿಎಲ್ನಲ್ಲಿ ಕರ್ನಾಟಕ ಬುಲ್ಡೋಜರ್ಸ್ ಹಾಗೂ ಪಂಜಾಬ್ ದೆ ಶೇರ್ ಪಂದ್ಯ ಜನವರಿ 16ರಂದು ಆಂಧ್ರ ಪ್ರದೇಶದ ವಿಶಾಖಪಟ್ಟಣದಲ್ಲಿ ನಡೆದಿದೆ. ಮೊದಲ ಪಂದ್ಯವನ್ನು ಕರ್ನಾಟಕ ಬುಲ್ಡೋಜರ್ ಗೆದ್ದಿದೆ. ಪ್ರದೀಪ್ ಅವರ ಬೌಲಿಂಗ್ ವೇಳೆ ಬಬ್ಬಲ್ ಅವರು ಬ್ಯಾಟಿಂಗ್ ನಿಂತಿದ್ದರು. ಅವರು ಬೀಸಲು ಹೋಗಿ ಬಾಲ್ ಬ್ಯಾಟ್ಗೆ ಟಚ್ ಆಗಿ ಕೀಪರ್ನಿಂದ ಹೊರ ಹೋಗುತ್ತಿತ್ತು. ಈ ವೇಳೆ ಸುದೀಪ್ ಅದ್ಭುತ ಕ್ಯಾಚ್ ಹಿಡಿದಿದ್ದಾರೆ. ಆ ಸಂದರ್ಭದ ವಿಡಿಯೋ ವೈರಲ್ ಆಗಿದೆ. ವಯಸ್ಸು ಕೇವಲ ಸಂಖ್ಯೆ ಎಂಬ ಮಾತು ಕೇಳಿ ಬಂದಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.