Kichcha Sudep: ಕಿಚ್ಚ ಹೋದಲೆಲ್ಲ ಜನಸಾಗರ; ಸುದೀಪ್ ಕ್ರೇಜ್ ಹೇಗಿದೆ ನೋಡಿ..

|

Updated on: May 03, 2023 | 9:40 AM

ಸುದೀಪ್ ಅಬ್ಬರದ ರೋಡ್ ಶೋ ಮಾಡಿದ್ದಾರೆ. ಬಿಜೆಪಿ ಅಭ್ಯರ್ಥಿ ಶಾಸಕ ವೀರಣ್ಣ ಚರಂತಿಮಠ ಪರವಾಗಿ ಮತ ಕೇಳಿದ್ದಾರೆ.

ನಟ ಕಿಚ್ಚ ಸುದೀಪ್ (Kichcha Sudep) ಅವರು ಬಿಜೆಪಿ ಪರ ಪ್ರಚಾರ ಮಾಡುತ್ತಿದ್ದಾರೆ. ವಿವಿಧ ಕ್ಷೇತ್ರಗಳಿಗೆ ತೆರಳಿ ಅವರು ಮತ ಕೇಳುತ್ತಿದ್ದಾರೆ. ಬಾಗಲಕೋಟೆಯಲ್ಲಿ ಸುದೀಪ್ ಅಬ್ಬರದ ರೋಡ್ ಶೋ ಮಾಡಿದ್ದಾರೆ. ಬಿಜೆಪಿ ಅಭ್ಯರ್ಥಿ ಶಾಸಕ ವೀರಣ್ಣ ಚರಂತಿಮಠ ಪರವಾಗಿ ಮತ ಕೇಳಿದ್ದಾರೆ. ನೆಚ್ಚಿನ ನಟನ ಕಣ್ತುಂಬಿಕೊಳ್ಳಲು ಜನಸಾಗರವೇ ಬಂದಿತ್ತು. ರಸ್ತೆ ಉದ್ದಕ್ಕೂ ಕಿಚ್ಚನ ಪರ ಘೋಷಣೆಗಳನ್ನು ಕೂಗಲಾಗಿದೆ. ಚುನಾವಣೆಗೆ ದಿನಗಣನೆ ಶುರುವಾಗಿದೆ. ಅದಕ್ಕೂ ಮುನ್ನ ವಿವಿಧ ಕಡೆಗಳಿಗೆ ತೆರಳಿ ಸುದೀಪ್ ಪ್ರಚಾರ ಮಾಡಲಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ