Karnataka Assembly Polls 2023: ಮತಯಾಚಿಸಲು ಹೋದ ಬಿಜೆಪಿ ಶಾಸಕ ಮಹಾಂತೇಶ್ ದೊಡ್ಡಗೌಡರ್​ಗೆ ಚಿಕ್ಕಬಾಗೇವಾಡಿ ಗ್ರಾಮಸ್ಥರಿಂದ ತರಾಟೆ

ಅರುಣ್​ ಕುಮಾರ್​ ಬೆಳ್ಳಿ

Updated on: Apr 11, 2023 | 10:33 AM

ಜಾಸ್ತಿ ಹೊತ್ತು ನಿಂತಿದ್ದರೆ ಉಳಿದ ಮಾನ ಕೂಡ ಮಣ್ಣುಪಾಲಾಗುತ್ತದೆ ಅಂತ ಮಹಾಂತೇಶ್ ದೊಡ್ಡಗೌಡರ್ ಅಲ್ಲಿಂದ ಕಾಲ್ಕಿತ್ತಿದ್ದಾರೆ.

ಬೆಳಗಾವಿ: ಮತದಾರರು ಈಗ ಮೊದಲಿನಂತಿಲ್ಲ, ಅವರನ್ನು ಬಕ್ರಾ ಮಾಡಲಾಗಲ್ಲ, ಎಚ್ಚೆತ್ತುಕೊಂಡಿದ್ದಾರೆ ಅಂತ ರಾಜಕೀಯ ನಾಯಕರಿಗೆ ಅರ್ಥವಾಗದಿರೋದು ದುರಂತವೇ. ಈ ವಿಡಿಯೋ ನೋಡಿ. ಕಿತ್ತೂರು (Kittur) ಬಿಜೆಪಿ ಶಾಸಕ ಮಹಾಂತೇಶ್ ದೊಡ್ಡಗೌಡರ್​ (Mahantesh Doddagoudar) ಕ್ಷೇತ್ರದ ಚಿಕ್ಕಬಾಗೇವಾಡಿಗೆ (Chikka Bagewadi) ಮತ ಯಾಚಿಸಲು ಹೋದಾಗ ಜನ ಚೆನ್ನಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಗ್ರಾಮದಲ್ಲಿ ಯಾವುದೇ ಅಭಿವೃದ್ಧಿ ಕೆಲಸ ಮಾಡದೆ ವೋಟು ಕೇಳಲು ಬಂದಿದ್ದೀರಲ್ಲ, ನಿಮಗೆ ಮಾನ ಮರ್ಯಾದೆ ಇಲ್ಲವೇ ಅಂತ ಒಬ್ಬ ಯುವಕ ಹಾಗೂ ಮಹಿಳೆಯರು ಶಾಸಕರಿಗೆ ನೀರಿಳಿಸಿದ್ದಾರೆ. ಶಾಸಕರ ಪರ ಮಾತಾಡಲು ಮುಂದಾದ ಬೆಂಬಲಿಗರು ಸಹ ಲೇವಡಿಗೊಳಗಾಗಿದ್ದಾರೆ. ಜಾಸ್ತಿ ಹೊತ್ತು ನಿಂತಿದ್ದರೆ ಉಳಿದ ಮಾನ ಕೂಡ ಮಣ್ಣುಪಾಲಾಗುತ್ತದೆ ಅಂತ ಮಹಾಂತೇಶ್ ದೊಡ್ಡಗೌಡರ್ ಅಲ್ಲಿಂದ ಕಾಲ್ಕಿತ್ತಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಅರುಣ್​ ಕುಮಾರ್​ ಬೆಳ್ಳಿ

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.