‘ಕ್ಲಾಂತ’ ಟ್ರೈಲರ್ ಬಿಡುಗಡೆ ಮಾಡಿದ ಅಜಯ್ ರಾವ್, ಇದು ನಿಗೂಢ ಕತೆ
Klaantha: ‘ಕ್ಲಾಂತ’ ಸಿನಿಮಾದ ಟ್ರೈಲರ್ ಅನ್ನು ಅಜಯ್ ರಾವ್ ಬಿಡುಗಡೆ ಮಾಡಿದ್ದಾರೆ. ಸಿನಿಮಾವು ಆಕ್ಷನ್, ಪ್ರೇಮ, ನಿಗೂಢತೆಯ ಕತೆಯನ್ನು ಒಳಗೊಂಡಿದೆ.
ಅರಣ್ಯದಲ್ಲಿ ನಡೆವ ನಿಗೂಢ ಕತೆಯನ್ನು ಆಧರಿಸಿದ ಸಿನಿಮಾ ‘ಕ್ಲಾಂತ’ದ ಟ್ರೈಲರ್ (Tailer) ಇದೀಗ ಬಿಡುಗಡೆ ಆಗಿದೆ. ನಟ ಅಜಯ್ ರಾವ್ ಅವರು ಸಿನಿಮಾದ ಟ್ರೈಲರ್ ಬಿಡುಗಡೆ ಮಾಡಿ, ಸಿನಿಮಾದ ಬಗ್ಗೆ, ಚಿತ್ರತಂಡದ ಬಗ್ಗೆ ಭರವಸೆಯ ಮಾತುಗಳನ್ನಾಡಿದರು. ‘ಕ್ಲಾಂತ’ ಸಿನಿಮಾ ಕೊರಗಜ್ಜನ ಮಹಿಮೆಯ ಅಂಶವನ್ನು ಸಹ ಒಳಗೊಂಡಿದೆ. ಸಿನಿಮಾದ ಟ್ರೈಲರ್ ನಲ್ಲಿ ಆಕ್ಷನ್, ನಿಗೂಢತೆ ಎಲ್ಲವೂ ಕಣ್ಣಿಗೆ ರಾಚುತ್ತಿದೆ. ದಗಲ್ ಬಾಜಿ ತುಳು ಸಿನಿಮಾ ಮಾಡಿದ್ದ ನಟ ವಿಗ್ನೇಶ್, ‘ಕ್ಲಾಂತ’ ಸಿನಿಮಾ ಮೂಲಕ ಕನ್ನಡಕ್ಕೆ ಬಂದಿದ್ದಾರೆ. ಪ್ರಶಾಂತ್ ವೈಭವ್ ಈ ಸಿನಿಮಾಕ್ಕೆ ನಿರ್ದೇಶನ ಮಾಡಿದ್ದಾರೆ. ಸಿನಿಮಾದ ಟ್ರೈಲರ್ ಬಿಡುಗಡೆ ಮಾಡಿದ ಅಜಯ್ ರಾವ್ ಮಾತನಾಡಿದ್ದು ಹೀಗೆ…
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Loading...
Unable to load recommendations.
Follow Us
