Daily Devotional: ಸನಾತನ ಹಿಂದೂ ಧರ್ಮದಲ್ಲಿ ದರ್ಭೆಯ ಮಹತ್ವ ತಿಳಿಯಿರಿ

|

Updated on: Oct 13, 2024 | 7:15 AM

ದರ್ಭೆ ಒಂದು ತರಹದ ಹುಲ್ಲು. ದರ್ಭೆಯನ್ನು ಚಪ್ಪರ ಮುಂತಾದವುಗಳನ್ನು ಹಾಕುವ ಜತೆ ಜತೆಗೆ ಧಾರ್ಮಿಕ ಕೆಲಸಗಳಲ್ಲೂ ಬಳಕೆ ಮಾಡುವರು. ಸನಾತನ ಧರ್ಮದಲ್ಲಿ ದರ್ಭೆಗೆ ಮಹತ್ವದ ಸ್ಥಾನವನ್ನು ಏಕೆ ನೀಡಲಾಗಿದೆ? ಹೋಮ ಮಾಡುವ ಸಂದರ್ಭದಲ್ಲಿ ದರ್ಭೆಯನ್ನು ಏಕೆ ಬಳಸಬೇಕು? ಎಂಬುವುದನ್ನು ಖ್ಯಾತ ಜ್ಯೋತಿಷಿ ಬಸವರಾಜ ಗುರೂಜಿ ತಿಳಿಸಿದ್ದಾರೆ.

ದರ್ಭೆ ಒಂದು ತರಹದ ಹುಲ್ಲು. ದರ್ಭೆಯನ್ನು ಚಪ್ಪರ ಮುಂತಾದವುಗಳನ್ನು ಹಾಕುವ ಜತೆ ಜತೆಗೆ ಧಾರ್ಮಿಕ ಕೆಲಸಗಳಲ್ಲೂ ಬಳಕೆ ಮಾಡುವರು. ದರ್ಭೆಯನ್ನು ಅನಾದಿ ಕಾಲದಿಂದಲೂ ಪೂಜಾ ಕೈಂಕರ್ಯಗಳಲ್ಲಿ ಉಪಯೋಗಿಸಿಕೊಂಡು ಬರಲಾಗಿದೆ. ವೇದಗಳ ಕಾಲದಿಂದಲೂ ದೇವರ ಆಸನದ ಜಾಗದಲ್ಲಿ ಗ್ರಹಣಕ್ಕೆ ಮುನ್ನ ದರ್ಭೆಯನ್ನು ಇರಿಸುವ ಪದ್ಧತಿ ಆಚರಣೆಯಲ್ಲಿದೆ. ದರ್ಭೆಯು ಇಂದ್ರನ ವಜ್ರಾಯುಧವಿದ್ದಂತೆ. ದರ್ಭೆಯನ್ನು ದೇವಲೋಕದಿಂದ ಯಜ್ಞ ಯಾಗಾದಿಗಳಿಗೆಂದೇ ಭೂ ಲೋಕಕ್ಕೆ ಭಗವಂತನು ಕಳಿಸಿದ್ದಾನೆ ಅಂತ ನಮ್ಮ ಶಾಸ್ತ್ರಗಳಲ್ಲಿ ಉಲ್ಲೇಖವಿದೆ.

Follow us on