Rains in Kodagu: ಮಾನ್ಸೂನ್ ಸೀಸನ್ ಆರಂಭಗೊಂಡು ಮೂರು ವಾರ ಬಳಿಕ ಕೊಡಗು ಜಿಲ್ಲೆಯಲ್ಲಿ ಮಳೆ, ರೈತರ ಮುಖದಲ್ಲಿ ಸಂತಸ

ಅರುಣ್​ ಕುಮಾರ್​ ಬೆಳ್ಳಿ

Updated on: Jun 22, 2023 | 7:34 PM

ಹಾಗೆ ನೋಡಿದರೆ, ಮಳೆಗಾಲ ಶುರುವಾದ ಸಂಕೇತ ಕರ್ನಾಟಕದ ಉಳಿದ ಭಾಗಕ್ಕೆ ಕೊಡಗು ಜಿಲ್ಲೆಯಿಂದ ಸಿಗುತಿತ್ತು

ಮಡಿಕೇರಿ: ಮಾನ್ಸೂನ್ ಋತು (monsoon season) ಮೂರು ವಾರಗಳ ಬಳಿಕ ಕೊಡಗು ಜಿಲ್ಲೆಯ ಹಲವು ಭಾಗಗಳಲ್ಲಿ ಇಂದು ಮಳೆಯಾಗಿದೆ. ಮಡಿಕೇರಿ (Madikeri) ನಗರದಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ವಿಳಂಬವಾದರೂ ಮಳೆ ಸುರಿಯಲು ಶುರುವಾಗಿದ್ದು ಭಾಗದ ರೈತರ ಮೊಗದಲ್ಲಿ ಸಂತಸ ಅರಳುವಂತೆ ಮಾಡಿದೆ. ಶಾಲಾ ಕಾಲೇಜುಗಳು ಬಿಡುವ ಸಮಯದಲ್ಲಿ ಮಳೆ ಬೀಳಲಾರಂಭಿಸಿದ್ದರಿಂದ ಮಕ್ಕಳು ಮನೆಗಳಿಗೆ ತಲಪುವುದು ಕಷ್ಟವಾಗಿತ್ತು ಮತ್ತು ರಸ್ತೆಗಳಲ್ಲಿ ನೀರು ಹರಿಯುತ್ತಿದ್ದರಿಂದ ವಾಹನಗಳ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ಹಾಗೆ ನೋಡಿದರೆ, ಮಳೆಗಾಲ ಶುರುವಾದ ಸಂಕೇತ ಕರ್ನಾಟಕದ ಉಳಿದ ಭಾಗಕ್ಕೆ (rest of Karnataka) ಕೊಡಗು ಜಿಲ್ಲೆಯಿಂದ ಸಿಗುತಿತ್ತು. ಆದರೆ, ಈ ಬಾರಿ ಕೊಡಗುಗಿಂತ ಮೊದಲೇ ರಾಜ್ಯದ ಕೆಲಭಾಗಗಳಲ್ಲಿ ಮಳೆಯಾಗಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Loading...
Unable to load recommendations.
Follow Us
ಅರುಣ್​ ಕುಮಾರ್​ ಬೆಳ್ಳಿ

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.