ಕೋಲಾರ: ಕರ್ನಾಟಕ ವಿಧಾನಸಭಾ ಚುನಾವಣೆಗೆ ಇದೇ ಮೇ10ರಂದು ಮತದಾನ ನಡೆಯಲಿದ್ದು, ಇದಕ್ಕೆ ಚುನಾವಣಾ ಆಯೋಗ ಸಕಲ ಸಿದ್ಧತೆಗಳು ಮಾಡಿಕೊಂಡಿದೆ. ಯಾವುದೇ ತೊಂದರೆಗಳಾಗದಂತೆ ನ್ಯಾಯಸಮ್ಮತವಾಗಿ ಚುನಾವಣೆ ನಡೆಸಲು ಆಯೋಗ ಎಲ್ಲಾ ಕ್ರಮ ಕೈಗೊಂಡಿದೆ. ಅಲ್ಲದೇ ಮತದಾನದ ಪ್ರಮಾಣ ಹೆಚ್ಚಿಸಲು ನಾನಾ ರೀತಿಯಯಾಗಿ ಜಾಗೃತಿ ಮೂಡಿಸುತ್ತಿದೆ. ಅದರಂತೆ ಕೋಲಾರದಲ್ಲಿ ಮದುವೆ ಮನೆಯಲ್ಲಿ ಮತದಾನದ ಜಾಗೃತಿ ಮೂಡಿಸಿದ್ದಾರೆ. ಹೌದು… ಮುಳಬಾಗಿಲು ಪಟ್ಟಣದ ಕಲ್ಯಾಣ ಪಂಟಪದಲ್ಲಿ ಮತದಾನದ ಜಾಗೃತಿ ಮೂಡಿಸಿದ್ದಾರೆ. ನೂತನ ವಧು ವರರ ಮೂಲಕ ಚುನಾವಣಾಧಿಕಾರಿ ಪ್ರತಿಭಾ ನೇತೃತ್ವದಲ್ಲಿ ಜಾಗೃತಿ ಮೂಡಿಸಲಾಗಿದೆ.