ಕೋಲಾರ: ಹಾಡಹಗಲೇ ಪುಲಿ ಇಡ್ಲಿ ಹೊಟೇಲ್​ನಿಂದ ಇಡ್ಲಿ ಬಾಕ್ಸ್‌ ಕಳವು, ಸಿಸಿ ಟಿವಿಯಲ್ಲಿ ದೃಶ್ಯ ಸೆರೆ

Edited By: Rakesh Nayak Manchi

Updated on: Aug 06, 2023 | 5:57 PM

ಪ್ರಪಂಚದಲ್ಲಿ ಎಂತೆಂತಹ ಕಳ್ಳರಿದ್ದಾರೆ ಎಂದರೆ ಅದನ್ನು ಊಹಿಸಲೂ ಸಾಧ್ಯವಿಲ್ಲ. ಕೋಲಾರದಲ್ಲಿ ಹಾಡಹಗಲೇ ಹೊಟೇಲ್​ನಲ್ಲಿದ್ದ ಇಡ್ಲಿ ಬೇಯಿಸುವ ಬಾಕ್ಸ್​ ಕಳ್ಳತನ ಮಾಡಿದ ಘಟನೆ ನಡೆದಿದೆ ಮಾರಾಯ್ರೆ.

ಕೋಲಾರ, ಆಗಸ್ಟ್ 6: ಹಾಡಗಲೇ ಹೋಟೆಲ್​​ನಲ್ಲಿದ್ದ ಇಡ್ಲಿ ಬಾಕ್ಸ್‌ ಅನ್ನು ಕದ್ದು ಪರಾರಿಯಾದ ಘಟನೆ ಕೋಲಾರದ (Kolar) ಬ್ರಾಹ್ಮಣರ‌ ಬೀದಿಯಲ್ಲಿ‌ ನಡೆದಿದೆ. ಪುಲಿ ಇಡ್ಲಿ ಹೋಟಲ್​ ಮಾಲೀಕ ನವೀನ್ ಮನೆಗೆ ಹೋಗಿ ಬರುವಷ್ಟರಲ್ಲಿ ಇಡ್ಲಿ ಬಾಕ್ಸ್ ಕಳವು ಮಾಡಲಾಗಿದೆ. ಮಧ್ಯಾಹ್ನ 12 ಗಂಟೆಗೆ ಈ ಕಳ್ಳತನ ನಡೆದಿದ್ದು, ಇಡ್ಲಿ ಬಾಕ್ಸ್ ಹೊತ್ತುಕೊಂಡು ಹೋಗುವ ದೃಶ್ಯ ಸಿಸಿ ಟಿಟಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಮತ್ತಷ್ಟು ವಿಡಿಯೋ ಸ್ಟೋರಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ

Published on: Aug 06, 2023 05:02 PM
Loading...
Unable to load recommendations.
Follow Us
ರಾಜೇಂದ್ರ ಸಿಂಹ ಬಿ.ಎಲ್. ಕೋಲಾರ

18 ವರ್ಷಗಳ ಹಿಂದೆ ಉತ್ತಮ ಸಮಾಜಕ್ಕಾಗಿ ಟಿವಿ9 ಚಾನೆಲ್​​ ಆರಂಭವಾದಾಗಿನಿಂದ ನನ್ನ ಮಾಧ್ಯಮ ಕಾಯಕವೂ ಆರಂಭ ಪಡೆಯಿತು. ಸ್ನಾತಕೋತ್ತರ ಪದವಿ ಮುಗಿಸಿದ್ದ ನಾನು ಚಿನ್ನದ ನಾಡು, ಕೃಷಿಕರ ಬೀಡು ಕೋಲಾರ ಜಿಲ್ಲೆಯ ಹಿರಿಯ ಪ್ರತಿನಿಧಿಯಾಗಿ ಕೆಲಸ ಮಾಡುತ್ತಾ ಬಂದಿದ್ದೇನೆ. ಟಿವಿ9 ಸಂಸ್ಥೆಯ ಆಶೋತ್ತರಗಳಿಗೆ ತಕ್ಕಂತೆ ಕೋಲಾರ ಜನತೆಯ ಪರವಾಗಿ ಧ್ವನಿ ಎತ್ತುವ ಕೆಲಸ ಮಾಡಿದ್ದೇನೆ. ನನ್ನದು ಸಾಮಾಜಿಕ ಕಳಕಳಿ ಇರುವ ಟಿವಿ9 ಸಂಸ್ಥೆಯಲ್ಲಿ ಕೆಲಸ ಅನ್ನೋದಕ್ಕಿಂತ ಉತ್ತಮ ಸಮಾಜಕ್ಕಾಗಿ ನನ್ನ ಸೇವೆ ಅನ್ನುವ ಭಾವನೆಯಲ್ಲಿ ಕೆಲಸ ಮಾಡಿಕೊಂಡು ಬಂದಿದ್ದೇನೆ.

Read More