ಪಾಕಿಸ್ತಾನಕ್ಕೆ ಇನ್ನು ಟೊಮ್ಯಾಟೊ ಕಳಿಸಲ್ಲ: ಕೋಲಾರ ಬೆಳೆಗಾರರ ದಿಟ್ಟ ನಿರ್ಧಾರ

ಅರುಣ್​ ಕುಮಾರ್​ ಬೆಳ್ಳಿ

Updated on: May 01, 2025 | 7:02 PM

ಭಾರತದ ನೆರೆ ರಾಷ್ಟ್ರಗಳಾದ ಬಾಂಗ್ಲಾದೇಶ, ನೇಪಾಳ ಮತ್ತು ಇತರ ಕೆಲ ದೇಶಗಳಿಗೂ ಕೋಲಾರದಿಂದ ಟೊಮ್ಯಾಟೊ ರಫ್ತಾಗುತ್ತದೆ. ಪಾಕಿಸ್ತಾನದ ಮನಸ್ಥಿತಿ ಮತ್ತು ಮೊಂಡಾಟಗಳಿಂದ ಬೇಸತ್ತು ಮನನೊಂದು ಈ ಕ್ರಮಕ್ಕೆ ಮುಂದಾಗಿದ್ದೇವೆ ಎಂದು ಟೊಮ್ಯಾಟೊ ಬೆಳೆಗಾರರು ಹೇಳುತ್ತಾರೆ. ಜೂನ್ ನಿಂದ ಡಿಸೆಂಬರ್ ವರೆಗೆ ಟೊಮ್ಯಾಟೊಗೆ ಸೀಸನ್ ಎಂದು ಹೇಳಲಾಗಿದ್ದು ಮಾರ್ಕೆಟ್​​ನಲ್ಲಿ ನಿಲ್ಲಲು ಕೂಡ ಜಾಗ ಸಿಗದ ಸ್ಥಿತಿ ನಿರ್ಮಾಣವಾಗುತ್ತದೆ.

ಬೆಂಗಳೂರು, ಮೇ 1: ಕೋಲಾರದ ಟೊಮ್ಯಾಟೊ ಬೆಳೆಗಾರರು (Kolar tomato growers) ತೆಗೆದುಕೊಂಡಿರುವ ದಿಟ್ಟ ನಿರ್ಧಾರ ಪಾಕಿಸ್ತಾನವನ್ನು ಕಂಗೆಡುವಂತೆ ಮಾಡಿದೆ. ಅಲ್ಲಿಂದ ಹೇರಳ ಪ್ರಮಾಣದಲ್ಲಿ ರಫ್ತಾಗುತ್ತಿದ್ದ ಟೊಮ್ಯಾಟೊವನ್ನು ನಿಲ್ಲಿಸಲು ಕೋಲಾರದ ರೈತರು ನಿರ್ಧರಿಸಿದ್ದಾರೆ. ಎಪಿಎಂಸಿ ಮೂಲಗಳ ಪ್ರಕಾರ ಪಾಕಿಸ್ತಾನಕ್ಕೆ ಪ್ರತಿದಿನ 800-900 ಟನ್ ಟೊಮ್ಯಾಟೊ ರಫ್ತಾಗುತ್ತದೆ. ಪಹಲ್ಗಾಮ್ ನಲ್ಲಿ ಅಮಾಯಕ ಹಿಂದೂಗಳ ಮೇಲೆ ಗುಂಡಿನ ದಾಳಿ ನಡೆಸಿ 26 ಜನರನ್ನು ಕೊಂದ ಉಗ್ರರಿಗೆ ತನ್ನ ನೆಲದಲ್ಲಿ ಆಶ್ರಯ ನೀಡಿ ಅವರ ಕೃತ್ಯಗಳಿಗೆ ಕುಮ್ಮಕ್ಕು ನೀಡುತ್ತಿರುವ ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಲು ಕೋಲಾರ ರೈತರು ಈ ನಿರ್ಣಯ ತೆಗೆದುಕೊಂಡಿದ್ದಾರೆ. ಒಂದಷ್ಟು ಟೊಮ್ಯಾಟೊ ಬೆಳೆಗಾರರರು ನಮ್ಮ ಕೋಲಾರ ಪ್ರತಿನಿಧಿಯೊಂದಿಗೆ ಮಾತಾಡಿದ್ದು ಪಾಕಿಸ್ತಾನಕ್ಕೆ ರಫ್ತು ಮಾಡುವುದನ್ನು ನಿಲ್ಲಿಸುವುದರಿಂದ ನಮಗಾಗುವ ಅರ್ಥಿಕ ನಷ್ಟದ ಬಗ್ಗೆ ಯೋಚಿಸುತಿಲ್ಲ, ಬೇರೆ ನೆರೆ ರಾಷ್ಟ್ರಗಳಿಗೂ ಟೊಮ್ಯಾಟೊ ಕಳಿಸಬಹುದು, ಪಾಕಿಸ್ತಾನಕ್ಕೆ ಪಾಠ ಕಲಿಸಲು ಕೇಂದ್ರ ಸರ್ಕಾರ ಯಾವುದೇ ಕ್ರಮ ತೆಗೆದುಕೊಂಡರೂ ನಾವು ಅದರ ಜೊತೆ ಇರುತ್ತೇವೆ ಎಂದು ಅವರು ಹೇಳುತ್ತಾರೆ.

ಇದನ್ನೂ ಓದಿ:   ಪಹಲ್ಗಾಮ್ ದಾಳಿ ನಂತರ ಕರ್ನಾಟಕ ಕರವಾಳಿಯಲ್ಲಿ ಭಾರಿ ಕಟ್ಟೆಚ್ಚರ: ಉತ್ತರ ಕನ್ನಡ ಪ್ರವಾಸಿ ತಾಣಗಳ ಮೇಲೆ ಪೊಲೀಸರ ಹದ್ದಿನ ಕಣ್ಣು

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಅರುಣ್​ ಕುಮಾರ್​ ಬೆಳ್ಳಿ

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.