ಎಣ್ಣೆ ಮತ್ತಲ್ಲಿ ಗುಂಡು ಹಾರಿಸಿಕೊಂಡ ಆಸಾಮಿ, ಸ್ಫೋಟಕ ಅಂಶ ಬಿಚ್ಚಿಟ್ಟ ಎಸ್ಪಿ
ಕೊಪ್ಪಳದ ಕುಕುನೂರು ಲಿಮಿಟ್ಸ್‌ನಲ್ಲಿ ಆನಂದ್ ನಿಂಗಪ್ಪ ಪೊಲೀಸ್ ಪಾಟೀಲ್ ಎಂಬ ವ್ಯಕ್ತಿ ಮದ್ಯಪಾನ ಮಾಡಿ ತನಗೆ ತಾನೇ ಸಿಂಗಲ್ ಬ್ಯಾರೆಲ್ ಗನ್ನಿನಿಂದ ಗುಂಡು ಹಾರಿಸಿಕೊಂಡಿದ್ದಾರೆ. ಇದೀಗ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ಆಯುಧದ ಮೂಲದ ಬಗ್ಗೆ ತೀವ್ರ ತನಿಖೆ ನಡೆಸುತ್ತಿದ್ದಾರೆ. ಗಾಯಾಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಸ್ಥಿತಿ ಸ್ಥಿರವಾಗಿದೆ.
ಕೊಪ್ಪಳ, ಅ.27: ಕುಡಿತದಿಂದ ಜೀವಕ್ಕೆ ಅಪಾಯ ತಂದುಕೊಂಡ ಅನೇಕ ಘಟನೆಗಳನ್ನು ನೋಡಿದ್ದೇವೆ. ಇದೀಗ ಕೊಪ್ಪಳ ಜಿಲ್ಲೆಯ ಕುಕುನೂರು ಎಂಬಲ್ಲಿ ನಿನ್ನೆ ರಾತ್ರಿ ಸುಮಾರು 8.30 ರಿಂದ 9.00 ಗಂಟೆಯ ನಡುವೆ ಆನಂದ್ ನಿಂಗಪ್ಪ ಪೊಲೀಸ್ ಪಾಟೀಲ್ ಎಂಬ ವ್ಯಕ್ತಿ ತಮಗೆ ತಾವೇ ಗುಂಡು ಹಾರಿಸಿಕೊಂಡಿದ್ದಾರೆ. ಮದ್ಯಪಾನದ ಅಮಲಿನಲ್ಲಿದ್ದ ಅವರು ಸಿಂಗಲ್ ಬ್ಯಾರೆಲ್ ವೆಪನ್ ಬಳಸಿ ಗುಂಡು ಹಾರಿಸಿಕೊಂಡಿರುವ ಬಗ್ಗೆ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಘಟನೆ ಕುರಿತು, ಗಾಯಾಳು ಮಾವ ಹನುಮಂತಪ್ಪ ಅವರು ನೀಡಿದ ದೂರಿನ ಮೇರೆಗೆ ಪೊಲೀಸರು ಆರ್ಮ್ಸ್ ಆಕ್ಟ್ (ಶಸ್ತ್ರಾಸ್ತ್ರ ಕಾಯಿದೆ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಎಸ್‌ಪಿ, ಸಿಪಿಐ ಮತ್ತು ಡಿವೈಎಸ್‌ಪಿ ಸೇರಿದಂತೆ ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳು ಜತೆ ಮಾತನಾಡಿದ್ದಾರೆ. ಪ್ರಸ್ತುತ ಆನಂದ್ ನಿಂಗಪ್ಪ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ. ಈ ಘಟನೆಗೆ ಬಳಸಿದ ವೆಪನ್ ಮೂಲದ ಬಗ್ಗೆ ಪೊಲೀಸರು ತೀವ್ರ ತನಿಖೆ ನಡೆಸುತ್ತಿದ್ದಾರೆ.
ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
