ಅಧ್ಯಕ್ಷರೇ ಈ ಸಾವಿಗೆ ಸುರೇಶ್ಕುಮಾರ್ ಕಾರಣ, ಸಿದ್ದು- ಡಿಕೆಶಿ ಮುಂದೆ ಸರ್ಕಾರಕ್ಕೆ ಧಿಕ್ಕಾರ
ಅಧ್ಯಕ್ಷರೇ ಈ ಸಾವಿಗೆ ಸುರೇಶ್ಕುಮಾರ್ ಕಾರಣ, ಸರ್ಕಾರಕ್ಕೆ ಧಿಕ್ಕಾರ ಅಂತಾ ಸಿದ್ದು-ಡಿಕೆಶಿ ಮುಂದೆ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಧ್ಯಕ್ಷರೇ ಈ ಸಾವಿಗೆ ಸುರೇಶ್ಕುಮಾರ್ ಕಾರಣ, ಸರ್ಕಾರಕ್ಕೆ ಧಿಕ್ಕಾರ ಅಂತಾ ಸಿದ್ದು-ಡಿಕೆಶಿ ಮುಂದೆ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚಾಮರಾಜನಗರ ಆಸ್ಪತ್ರೆಯಲ್ಲಿ 24 ರೋಗಿಗಳ ಸಾವು ಪ್ರಕರಣದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಆಸ್ಪತ್ರೆಗೆ ಭೇಟಿ ನೀಡಿ, ಅಲ್ಲಿನ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಆ ವೇಳೆ ಸಿದ್ದರಾಮಯ್ಯ ಪ್ರಶ್ನೆಗೆ ಉತ್ತರಿಸಲು ಅಧಿಕಾರಿಗಳು ಒದ್ದಾಟ ನಡೆಸಿದಾಗ ಅಧಿಕಾರಿಗಳಿಗೆ ಸಿದ್ದರಾಮಯ್ಯ ಕ್ಲಾಸ್ ತೆಗೆದುಕೊಂಡಿದ್ದಾರೆ. ಇದು ನಿಮ್ಮ ತಪ್ಪಲ್ಲ, ಸರ್ಕಾರದ ತಪ್ಪು ಎಂದು ಸಿದ್ದರಾಮಯ್ಯ ಗರಂ ಆಗಿದ್ದಾರೆ. ಸರ್ಕಾರ ಆಕ್ಸಿಜನ್ ನೀಡಿದ್ರೆ ನೀವೇನು ಪೂಜೆ ಮಾಡ್ತಿದ್ರಾ? ಆದ್ರೂ ಉತ್ತರಿಸಲು ಯಾಕೆ ಒದ್ದಾಡ್ತಿದ್ದೀರಾ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.