ಆ್ಯಕ್ಸೆಲ್ ಬ್ಲೇಡ್ ಕಟ್ಟಾಗಿ ಸಾರಿಗೆ ಸಂಸ್ಥೆಯ ಬಸ್ಸು ಸೇತುವೆಗೆ ಢಿಕ್ಕಿ ಹೊಡೆಯಿತು, ಚಿಕ್ಕಪುಟ್ಟ ಗಾಯಗಳಿಂದ ಪಾರಾದ ಪ್ರಯಾಣಿಕರು
ಚಾಲಕನ ಸಮಯಪ್ರಜ್ಞೆಯಿಂದ ಭಾರಿ ಅನಾಹುತ ಜರುಗುವುದು ತಪ್ಪಿತು ಎಂದು ಪ್ರಯಾಣಿಕರು ಹೇಳಿದ್ದಾರೆ. ಅವರಲ್ಲಿ ಕೆಲವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ.
ತುಮಕೂರು: ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆ (KSRTC) ಆ್ಯಕ್ಸೆಲ್ ಬ್ಲೇಡ್ ಕಟ್ ಆಗಿ ವಾಹನ ಸೇತುವೆಯೊಂದಕ್ಕೆ ಢಿಕ್ಕಿ ಹೊಡೆದ ಘಟನೆ ತುಮಕೂರು (Tumakuru) ಜಿಲ್ಲೆ ಶಿರಾ ತಾಲ್ಲೂಕಿನ ಕಲ್ಲುಕೋಟೆ ಎಂಬಲ್ಲಿ ಸಂಭವಿಸಿದೆ. ಸುಮಾರು 40 ಪ್ರಯಾಣಿಕರನ್ನು ಹೊತ್ತಿದ್ದ ಬಸ್ಸು ಶಿರಾ (Sira) ಪಟ್ಟಣದಿಂದ ಪಟ್ಟನಾಯಕನಹಳ್ಳಿ ಕಡೆ ಹೋಗುವಾಗ ಅಪಘಾತ ಸಂಭವಿಸಿದೆ. ಚಾಲಕನ ಸಮಯಪ್ರಜ್ಞೆಯಿಂದ ಭಾರಿ ಅನಾಹುತ ಜರುಗುವುದು ತಪ್ಪಿತು ಎಂದು ಪ್ರಯಾಣಿಕರು ಹೇಳಿದ್ದಾರೆ. ಅವರಲ್ಲಿ ಕೆಲವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ.