ಶಕ್ತಿ ಯೋಜನೆ: ಹಗರಿಬೊಮ್ಮನಹಳ್ಳಿ ಡಿಪೋದ ಬಸ್ಸೊಂದರಲ್ಲಿ ಚಾಲಕನಿಗೂ ಸ್ಥಳವಿಲ್ಲದಷ್ಟು ಜನ
ಶಕ್ತಿ ಯೋಜನೆ ಜಾರಿಗೊಳಿಸಿ ಕರ್ನಾಟಕ ಸರ್ಕಾರ ಮಹಿಳೆಯರಿಗೆ ಅನುಕೂಲ ಮಾಡಿಕೊಟ್ಟಿರುವುದನ್ನು ಎಲ್ಲರೂ ನೋಡುತ್ತಿದ್ದೇವೆ. ಆದರೆ ಯೋಜನೆಯ ದುರುಪಯೋಗವಾಗುತ್ತಿರುವ ಬಗ್ಗೆ ಸರ್ಕಾರ ಮತ್ತು ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆ ನಿಷ್ಕ್ರಿಯವಾಗಿವೆ. ಮಹಿಳೆಯರು ಸುಖಾಸುಮ್ಮನೆ ಅಂದರೆ ಯಾವುದೇ ಕೆಲಸ ಇರದಿದ್ದರೂ ಬಸ್ ಗಳಲ್ಲಿ ಪ್ರಯಾಣಿಸುತ್ತಿದ್ದಾರೆ ಎಂಬ ದೂರುಗಳು ಕೇಳಿಬರುತ್ತಿವೆ.
ವಿಜಯನಗರ: ಕಳೆದ ವಾರವಷ್ಟೇ ಸಿದ್ದರಾಮಯ್ಯ (Siddaramaiah) ನೇತೃತ್ವದ ಕರ್ನಾಟಕ ಸರ್ಕಾರ ಶಕ್ತಿಯೋಜನೆ (Shakti scheme) ಅಡಿ ರಾಜ್ಯದ ಮಹಿಳೆಯರು ಒಂದು ನೂರು ಕೋಟಿ ಸಲ ಯೋಜನೆ ಲಾಭ ಪಡೆದುಕೊಂಡಿದ್ದನ್ನು ಒಂದು ಸಮಾರಂಭ ಏರ್ಪಡಿಸಿ ಘೋಷಿಸಿತು. ಸರ್ಕಾರ ತನ್ನ ಸಾಧನೆಯನ್ನೇನೋ ಹೇಳೊಕೊಂಡಿತು ಆದರೆ ಗ್ರೌಂಡ್ ರಿಯಾಲಿಟಿ ಇದು! ಜಿಲ್ಲೆಯ ಹಗರಿಬೊಮ್ಮನಹಳ್ಳಿಯ (Hagaribommanahalli) ಹಳೆಯ ಬಸ್ ನಿಲ್ದಾಣದಲ್ಲಿ ಕಂಡುಬಂದ ದೃಶ್ಯ ಗಮನಿಸಿ. ಡಿಪೋದ ಶಟಲ್ ಬಸ್ಸೊಂದರ ಹೆಚ್ಚಿನ ಭಾಗ ಮಹಿಳೆಯರಿಂದ ತುಂಬಿದೆ. ಅದರ ಹಿಂಭಾಗ ಜ್ಯಾಮ್ ಪ್ಯಾಕ್ ಆದ ನಂತರ ಕೆಲ ಪ್ರಯಾಣಿಕರು ಡ್ರೈವರ್ ಕ್ಯಾಬಿನ್ ಗೆ ನುಗ್ಗಿದ್ದಾರೆ. ಅಲ್ಲೂ ಮಹಿಳೆಯರು! ಒಬ್ಬ ಪ್ರಯಾಣಿಕನಂತೂ ನಿಲ್ಲಲು ಜಾಗ ಸಿಗದ ಕಾರಣ ಚಾಲಕನ ಆಸನದ ಮೇಲೆ ಕೂತುಬಿಟ್ಟಿದ್ದಾನೆ. ಚಾಲಕ ಮತ್ತು ನಿರ್ವಾಹಕ ಅಸಹಾಯಕರಾಗಿ ಕೆಳಗಡೆ ನಿಂತಿರುವುದನ್ನು ನೋಡಬಹುದು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ