ಮಹಾರಾಷ್ಟ್ರ ಗಡಿಯಲ್ಲಿ ‘ಚೀಟಿ’ ಗ್ಯಾಂಗ್ ಮಾಯಾಜಾಲ! ಕಿರಾಣಿ ಅಂಗಡಿ ಒಡತಿಯ ಮಾಂಗಲ್ಯ ದೋಚಿ ಎಸ್ಕೇಪ್ ಆದ ಐನಾತಿ

'ಚೀಟಿ' ಗ್ಯಾಂಗ್ ಮಾದರಿಯ ಘಟನೆ ನಿಪ್ಪಾಣಿಯಲ್ಲೂ ನಡೆದಿತ್ತು ಎಂಬ ಮಾಹಿತಿಯಿದೆ. ಸದರಿ ಘಟನೆಯ ಸಂಪೂರ್ಣ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ದೃಶ್ಯಾವಳಿ ಆಧರಿಸಿ ಆದಷ್ಟು ಬೇಗ ಆರೋಪಿ ಬಂಧಿಸಿ ಕ್ರಮ ಕೈಗೊಳ್ಳಲಿ ಎಂಬುದು ಚಿಕ್ಕೋಡಿ ರುಪಿನಾಳ ಗ್ರಾಮಸ್ಥರ ಆಗ್ರಹವಾಗಿದೆ.

Follow us
| Updated By: ಸಾಧು ಶ್ರೀನಾಥ್​

Updated on:Nov 28, 2023 | 12:03 PM

ಕರ್ನಾಟಕ ಮಹಾರಾಷ್ಟ್ರ (Maharashtra) ಗಡಿಯಲ್ಲಿ ಚೀಟಿ ತೋರಿಸಿ ಯಾಮಾರಿಸಿ ಚಿನ್ನಾಭರಣ ಕಳ್ಳತನ ಮಾಡಿದ ಪ್ರಕರಣ ವರದಿಯಾಗಿದೆ. ಕಿರಾಣಿ ಅಂಗಡಿಗೆ ಆಗಮಿಸಿದ ವ್ಯಕ್ತಿ ಒಂದು ಬಿಳಿ ಬಣ್ಣದ ಚೀಟಿ ತೋರಿಸುತ್ತಿದ್ದಂತೆ ಅಂಗಡಿ ಮಾಲಕಿ ತನ್ನ ಚಿನ್ನದ ಮಾಂಗಲ್ಯ (gold chain) ತೆಗೆದು ಆ ಚೀಟಿಯಲ್ಲಿ ಇಟ್ಟಿದ್ದಾಳೆ ಅಷ್ಟೇ. ಜಸ್ಟ್ ಎರಡೂವರೆ ನಿಮಿಷದಲ್ಲಿ ತನ್ನ ಕೈಚೆಳಕ ತೋರಿಸಿ ಚಿನ್ನದ ಸರದೊಂದಿಗೆ ಎಸ್ಕೇಪ್ ಆಗಿದ್ದಾನೆ. ಈ ಕುರಿತು ಡಿಟೇಲ್ ರಿಪೋರ್ಟ್ ಇಲ್ಲಿದೆ ನೋಡಿ. ಹೌದು ಇದು ವಿಚಿತ್ರ ಅಂದರೂ ಸತ್ಯ. ಯುವಕನೊಬ್ಬ ಗುಟ್ಕಾ ಖರೀದಿಸುವ ನೆಪದಲ್ಲಿ ಕಿರಾಣಿ ಅಂಗಡಿಗೆ ಬಂದು ಬಳಿಕ ತೆಂಗಿನಕಾಯಿ, ಊದುಬತ್ತಿ ಖರೀದಿಸಿ ಚೀಟಿ ತೋರಿಸಿ ಮಹಿಳೆಯ ಚಿನ್ನದ ಮಾಂಗಲ್ಯದ ಜೊತೆ ಎಸ್ಕೇಪ್ (chain snaching) ಆಗಿದ್ದಾನೆ. ಬೆಳಗಾವಿ ಜಿಲ್ಲೆ ಚಿಕ್ಕೋಡಿ ( chikkodi) ತಾಲೂಕಿನ ರುಪಿನಾಳ ಗ್ರಾಮದಲ್ಲಿ ಶನಿವಾರ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಶನಿವಾರ ಅಂದ್ರೆ ನವೆಂಬರ್ 26ರ ಸಂಜೆ 4 ಗಂಟೆ ಸುಮಾರಿಗೆ ರುಪಿನಾಳ ಗ್ರಾಮದ ಚಿಕ್ಕೋಡಿ ಮೀರಜ್ ರಸ್ತೆಯ ಪಕ್ಕದಲ್ಲಿರುವ ಪವಾರ್ ಕುಟುಂಬಕ್ಕೆ ಸೇರಿದ ಕಿರಾಣಿ ಅಂಗಡಿಗೆ ಬೈಕ್​ನಲ್ಲಿ ಯುವಕನೊಬ್ಬ ಎಂಟ್ರಿ ಕೊಟ್ಟಿದ್ದಾನೆ. ಕಿರಾಣಿ ಅಂಗಡಿ ಎದುರು ಗಿರಾಕಿಗಳು ಇರುವುದನ್ನು ಗಮನಿಸಿ ಮೊದಲು ಗುಟ್ಕಾ ಖರೀದಿಸಿದ್ದಾನೆ. ಅಂಗಡಿ ಬಳಿಯ ಗಿರಾಕಿಗಳು ತೆರಳುತ್ತಿದ್ದಂತೆ ಮತ್ತೆ ಅಂಗಡಿಗೆ ಬಂದ ಯುವಕ ಕಿರಾಣಿ ಅಂಗಡಿ ಒಡತಿ ಸುವರ್ಣ ಪವಾರ್ ಬಳಿ ತೆಂಗಿನಕಾಯಿ ಹಾಗೂ ಊದುಬತ್ತಿ ಖರೀದಿಸಿದ್ದಾನೆ.

ಬಳಿಕ ತನ್ನ ಜೇಬಿನಲ್ಲಿದ್ದ ಬಿಳಿ ಬಣ್ಣದ ಚೀಟಿಯೊಂದನ್ನು ತಗೆದು ಕಿರಾಣಿ ಅಂಗಡಿ ಒಡತಿ ಸುವರ್ಣಗೆ ತೋರಿಸಿದ್ದಾನೆ. ಆ ಚೀಟಿ ನೋಡುತ್ತಿದ್ದಂತೆ ಸುವರ್ಣಗೆ ತಲೆ ಸುತ್ತುವ ಅನುಭವ ಆಗಿದೆಯಂತೆ. ಬಳಿಕ ಆತ ಕೊರಳಲ್ಲಿದ್ದ ಮಾಂಗಲ್ಯ ಸರವನ್ನು ಚೀಟಿಯಲ್ಲಿ ಇಡಲು ಹೇಳಿದ್ದಾನೆ. ಆತ ಹೇಳಿದಂತೆ ಮಹಿಳೆ ತನ್ನ ಕೊರಳಲ್ಲಿದ್ದ 15 ಗ್ರಾಂ ತೂಕದ ಚಿನ್ನದ ಸರ ತಗೆದು ಆ ಚೀಟಿಯಲ್ಲಿ ಇಟ್ಟಿದ್ದಾಳೆ.

ಬಳಿಕ ಅದನ್ನು ಆ ಚೀಟಿಯಲ್ಲಿಟ್ಟು ಅಂಗಡಿಯ ಡ್ರಾವರ್​ನಲ್ಲಿ ಇಡಲು ಹೇಳಿದ್ದಾನೆ. ಬಳಿಕ ತನ್ನ ಜೇಬಿನಿಂದ ಮತ್ತೊಂದು ಚೀಟಿ ತಗೆದು ಆ ಚೀಟಿಯನ್ನೂ ಆ ಡ್ರಾವರ್​ನಲ್ಲಿಟ್ಟಿದ್ದಾನೆ. ಇದೇ ವೇಳೆ ಮಹಿಳೆಯ ಯಾಮಾರಿಸಿ ತನ್ನ ಜೇಬಿನಲ್ಲಿ ಮೊದಲೇ ಇರಿಸಿದ್ದ ಮರಳು ತುಂಬಿದ ಚೀಟಿ ಇಟ್ಟು ಚಿನ್ನದ ಮಾಂಗಲ್ಯ ಇದ್ದ ಚೀಟಿ ಪಡೆದು ಬೈಕ್​ ಏರಿ ಹೊರಟೇ ಬಿಟ್ಟಿದ್ದಾನೆ.

ಇದೆಲ್ಲವೂ ನಡೆದದ್ದು ಜಸ್ಟ್ ಎರಡೂವರೆ ನಿಮಿಷದಲ್ಲಿ. ಇದಾದ ಕೆಲ ಸಮಯದ ಬಳಿಕ ಮಹಿಳೆ ಎಚ್ಚೆತ್ತು ತನ್ನ ಕೊರಳಲ್ಲಿ ಮಾಂಗಲ್ಯ ಸರ ಇಲ್ಲದಿದ್ದಾಗ ಪತಿಗೆ ವಿಷಯ ಮುಟ್ಟಿಸಿದ್ದಾಳೆ. ಘಟನೆಯ ಸಂಪೂರ್ಣ ದೃಶ್ಯ ಕಿರಾಣಿ ಅಂಗಡಿಯಲ್ಲಿದ್ದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಘಟನೆ ಕುರಿತು ಪ್ರತಿಕ್ರಿಯಿಸಿರುವ ಕಿರಾಣಿ ಅಂಗಡಿ ಒಡತಿ ಸುವರ್ಣ ಪವಾರ್ ಆತ ಚೀಟಿ ತೋರಿಸುತ್ತಿದ್ದಂತೆ ನನಗೆ ತಲೆ ಸುತ್ತುವ ಅನುಭವ ಆಯಿತು. ಆಮೇಲೆ ಏನಾಯ್ತು ನಾನೇಕೆ ಅವನಿಗೆ ಮಾಂಗಲ್ಯ ಸರ ನೀಡಿದೆ ಅನ್ನೋದೇ ಗೊತ್ತಿಲ್ಲ ಅಂದಿದ್ದಾರೆ.

ಯಾವಾಗ ತನ್ನ ಬಳಿಯಿದ್ದ ಚಿನ್ನದ ಮಾಂಗಲ್ಯವನ್ನು ಅಂಗಡಿಗೆ ಬಂದ ಯುವಕ ಯಾಮಾರಿಸಿ ತಗೆದುಕೊಂಡು ಹೋಗಿದ್ದಾನೆ ಅಂತಾ ಗೊತ್ತಾಯ್ತೋ ತಕ್ಷಣ ಸುವರ್ಣ ತನ್ನ ಪತಿ ಸುರೇಶ್ ಪವಾರ್​ಗೆ ವಿಷಯ ಮುಟ್ಟಿಸಿದ್ದಾಳೆ. ತಕ್ಷಣ ಅಂಗಡಿ ಬಳಿ ಆಗಮಿಸಿದ ಸುರೇಶ್ ಪವಾರ್ ತನ್ನ ಬೈಕ್ ಏರಿ ಯುವಕ ಹೊರಟಿದ್ದ ದಾರಿಯಲ್ಲಿ ತೆರಳಿದ್ದಾನೆ. ಆತ ಎಲ್ಲಿಯೂ ಕಾಣದಿದ್ದಾಗ ಮರಳಿ ತನ್ನ ಅಂಗಡಿಗೆ ಬಂದು ಸಿಸಿ ಕ್ಯಾಮರಾ ಪರಿಶೀಲನೆ ನಡೆಸಿದ್ದಾನೆ.

ಸಿಸಿ ಕ್ಯಾಮರಾದಲ್ಲಿ ಚಾಲಾಕಿಯ ಕೃತ್ಯ ಸಂಪೂರ್ಣವಾಗಿ ಸೆರೆಯಾಗಿದೆ. ಬಳಿಕ ತಕ್ಷಣ ಅಂಕಲಿ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾನೆ. ದೂರು ಪಡೆದ ಪೊಲೀಸರು ಎಫ್​ಐಆರ್​ ದಾಖಲಿಸಿಲ್ಲವಂತೆ. ತನಿಖೆ ನಡೆಸಿ ಕ್ರಮ ಕೈಗೊಳ್ಳುತ್ತೀವಿ, ನೀವು ಮನೆಗೆ ಹೋಗಿ ಅಂತಾ ಹೇಳಿದ್ದಾರಂತೆ. ಇನ್ನು ಸಿಸಿ ಕ್ಯಾಮರಾದಲ್ಲಿ ಯುವಕನ ಮುಖ ಸೆರೆಯಾಗಿದೆ.

ತನ್ನ ಪತ್ನಿಯನ್ನು ಯಾಮಾರಿಸಿ ಚಿನ್ನದ ಸರ ತಗೆದುಕೊಂಡು ಹೋಗಿರುವ ಯುವಕ ಮುಂಚೆಯೂ ಒಂದೆರಡು ಬಾರಿ ಅಂಗಡಿಗೆ ಬಂದಿದ್ದನಂತೆ. ಚೀಟಿ ತೋರಿಸುತ್ತಿದ್ದಂತೆ ತನ್ನ ಪತ್ನಿ ಹೀಗೆಕೆ ಮಾಡಿದಳು ಅನ್ನುವ ಕನ್ಫ್ಯೂಷನ್​​ನಲ್ಲಿ ಪತಿಯೂ ಇದ್ದಾರೆ. ಹೀಗೆ ಘಟನೆ ನಡೆದರೆ ದೇವರಿದ್ದಾನೆ ಅಂತಾ ಹೇಗೆ ನಂಬೋದು ಸರ್. ಪೊಲೀಸರು ತಕ್ಷಣ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಸುವರ್ಣ ಪತಿ ಸುರೇಶ್ ಮನವಿ ಮಾಡಿದ್ದಾರೆ.

Published On - 12:03 pm, Tue, 28 November 23

ಜಲಾವೃತವಾದ ಸೇತುವೆ ಮೇಲೆ ಸಂಚಾರ;ನೀರು ರಭಸವಾಗಿ ಹರಿಯುತ್ತಿದ್ದರೂ ಡೋಂಟ್​ಕೇರ
ಜಲಾವೃತವಾದ ಸೇತುವೆ ಮೇಲೆ ಸಂಚಾರ;ನೀರು ರಭಸವಾಗಿ ಹರಿಯುತ್ತಿದ್ದರೂ ಡೋಂಟ್​ಕೇರ
ಗೋಕಾಕ್ ಜಲಪಾತದಲ್ಲಿ ಪ್ರವಾಸಿಗರ ಹುಚ್ಚಾಟ; ಸ್ವಲ್ಪ ಯಾಮಾರಿದ್ರು ಅಪಾಯ ಖಚಿತ
ಗೋಕಾಕ್ ಜಲಪಾತದಲ್ಲಿ ಪ್ರವಾಸಿಗರ ಹುಚ್ಚಾಟ; ಸ್ವಲ್ಪ ಯಾಮಾರಿದ್ರು ಅಪಾಯ ಖಚಿತ
ಸಂಸದ ಡಾ.ಕೆ ಸುಧಾಕರ್​ ಕಾರ್ಯಕ್ರಮದಲ್ಲಿ ಭರ್ಜರಿ ಬಾಡೂಟ ಜೊತೆ ಮದ್ಯ ಆಯೋಜನೆ
ಸಂಸದ ಡಾ.ಕೆ ಸುಧಾಕರ್​ ಕಾರ್ಯಕ್ರಮದಲ್ಲಿ ಭರ್ಜರಿ ಬಾಡೂಟ ಜೊತೆ ಮದ್ಯ ಆಯೋಜನೆ
‘ಯಜಮಾನ’ ತಂದುಕೊಟ್ಟ ಭರ್ಜರಿ ಲಾಭದ ಬಗ್ಗೆ ನಿರ್ಮಾಪಕರ ಮಾತು
‘ಯಜಮಾನ’ ತಂದುಕೊಟ್ಟ ಭರ್ಜರಿ ಲಾಭದ ಬಗ್ಗೆ ನಿರ್ಮಾಪಕರ ಮಾತು
ಕಿರಿದಾದ ಸೇತುವೆ ಮೇಲೆ ಹೆಣ ಹೊತ್ತು ಸಾಗಿದ ಗ್ರಾಮಸ್ಥರು, ವಿಡಿಯೋ ವೈರಲ್
ಕಿರಿದಾದ ಸೇತುವೆ ಮೇಲೆ ಹೆಣ ಹೊತ್ತು ಸಾಗಿದ ಗ್ರಾಮಸ್ಥರು, ವಿಡಿಯೋ ವೈರಲ್
ಧೋನಿ ಹುಟ್ದಬ್ಬ... ಬರೋಬ್ಬರಿ 100 ಅಡಿ ಕಟೌಟ್ ನಿಲ್ಲಿಸಿದ ಫ್ಯಾನ್ಸ್
ಧೋನಿ ಹುಟ್ದಬ್ಬ... ಬರೋಬ್ಬರಿ 100 ಅಡಿ ಕಟೌಟ್ ನಿಲ್ಲಿಸಿದ ಫ್ಯಾನ್ಸ್
ಅಕ್ಕಿ ಮೂಟೆ ಹೊತ್ತು ಗಂಗಾವತಿಯಿಂದ ಮಂತ್ರಾಲಯದವರೆಗೆ ಭಕ್ತನ ಪಾದಯಾತ್ರೆ
ಅಕ್ಕಿ ಮೂಟೆ ಹೊತ್ತು ಗಂಗಾವತಿಯಿಂದ ಮಂತ್ರಾಲಯದವರೆಗೆ ಭಕ್ತನ ಪಾದಯಾತ್ರೆ
ಧೋನಿಯ ಪಾದ ಮುಟ್ಟಿ ನಮಸ್ಕರಿಸಿದ ಸಾಕ್ಷಿ: ವಿಡಿಯೋ ನೋಡಿ
ಧೋನಿಯ ಪಾದ ಮುಟ್ಟಿ ನಮಸ್ಕರಿಸಿದ ಸಾಕ್ಷಿ: ವಿಡಿಯೋ ನೋಡಿ
ಎದುರಗಡೆ ಆನೆ​, ಪಕ್ಕದಲ್ಲಿ ಎರಡೆರಡು ಹುಲಿ: ಸಫಾರಿಗರ ಪಾಡು ಏನಾಯ್ತು ನೋಡಿ
ಎದುರಗಡೆ ಆನೆ​, ಪಕ್ಕದಲ್ಲಿ ಎರಡೆರಡು ಹುಲಿ: ಸಫಾರಿಗರ ಪಾಡು ಏನಾಯ್ತು ನೋಡಿ
ವಾರ ಭವಿಷ್ಯ, ಜುಲೈ 08ರಿಂದ 14ರ ತನಕದ ರಾಶಿ ಭವಿಷ್ಯ ಹೀಗಿದೆ
ವಾರ ಭವಿಷ್ಯ, ಜುಲೈ 08ರಿಂದ 14ರ ತನಕದ ರಾಶಿ ಭವಿಷ್ಯ ಹೀಗಿದೆ