ನಿಗಮ ಮಂಡಳಿ ನೇಮಕ ಪ್ರಕ್ರಿಯೆ ಪೂರ್ಣಗೊಳಿಸಿ ಪಟ್ಟಿಯನ್ನು ಹೈಕಮಾಂಡ್ ಗೆ ಕಳಿಸಲಿದ್ದೇವೆ: ಡಿಕೆ ಶಿವಕುಮಾರ್
ರಂದೀಪ್ ಸಿಂಗ್ ಸುರ್ಜೆವಾಲಾ ಇಂದು ಬೆಂಗಳೂರಿಗೆ ಆಗಮಿಸಿದ್ದಾರೆ. ನಿಗಮ ಮತ್ತು ಮಂಡಳಿ ಅಧ್ಯಕ್ಷರ ನೇಮಕ ಮಾಡುವುದು ಸಂಬಂಧಿಸಿದಂತೆ ಸುರ್ಜೆವಾಲಾ, ಸಿಎಂ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ನಡುವೆ ಮಂಗಳವಾರ ಮಧ್ಯಾಹ್ನ ಮತ್ತೊಂದು ಸಭೆ ನಡೆಯಲಿದ್ದು ಹೆಚ್ಚು ಕಡಿಮೆ ಇವತ್ತೇ ಪಟ್ಟಿ ಅಂತಿಮಗೊಳ್ಳಲಿದೆ.
ಬೆಂಗಳೂರು: ನಿಗಮ ಮಂಡಳಿಗಳಿಗೆ ಅಧ್ಯಕ್ಷರ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸಲು ಕರ್ನಾಟಕ ಸರ್ಕಾರ ವಿಳಂಬ ಮಾಡುತ್ತಿರೋದು ಸಂದೇಹಗಳಿಗೆ ಎಡೆಮಾಡಿದೆ. ನಮಗೆ ಲಭ್ಯವಿರುವ ಮಾಹಿತಿ ಪ್ರಕಾರ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah), ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಮತ್ತು ಎಐಸಿಸಿ ಕರ್ನಾಟಕ ಉಸ್ತುವಾರಿ ರಂದೀಪ್ ಸುರ್ಜೆವಾಲಾ (Randeep Surjewala) ನಡುವೆ ಕಳೆದ ವಾರದಿಂದ ಬೈಠಕ್ ಗಳು ನಡೆಯುತ್ತಿವೆ ಆದರೆ ಪಟ್ಟಿ ಮಾತ್ರ ಅಂತಿಮಗೊಳ್ಳುತ್ತಿಲ್ಲ. ಇಂದು ಸದಾಶಿವನಗರದಲ್ಲಿರುವ ತಮ್ಮ ನಿವಾಸದಿಂದ ಕೈಯಲ್ಲಿ ಪೆನ್ ಹಿಡಿದು ಅವಸರಸದಲ್ಲಿ ಹೊರಬಂದ ಶಿವಕುಮಾರ್ ಯಾವುದೋ ಕಾರ್ಯಕ್ರಮಕ್ಕೆ ತೆರಳುವ ತರಾತುರಿಯಲ್ಲಿದ್ದರು. ಮನೆ ಮುಂದೆ ನೆರೆದಿದ್ದ ಬೆಂಬಲಿಗರಿಗೆ ಕಾರ್ಯಕ್ರಮಕ್ಕೆ ಬರ್ತೀನಿ ನೀವು ಹೋಗಿ ಅಂತ ಹೇಳಿದ ಬಳಿಕ ಕಾಯುತ್ತಿದ್ದ ಮಾಧ್ಯಮ ಪ್ರತಿನಿಧಿಗಳಿಗೆ ಅವರು ಅಸ್ಪಷ್ಟ ಹೇಳಿಕೆ ನೀಡಿದರು. ಅದು ಪಕ್ಷದ ರೂಟೀನ್ ಕೆಲಸ, ಎಐಸಿಸಿ ಕಾರ್ಯದರ್ಶಿ ಅವರೊಂದಿಗೆ 2-3 ಸಭೆಗಳನ್ನು ನಡೆಸಿದ್ದೇವೆ, ಇವತ್ತು ಸಹ ಸುರ್ಜೆವಾಲಾ ಅವರೊಂದಿಗೆ ಸಭೆ ನಡೆಸಿ ಪಟ್ಟಿಯನ್ನು ದೆಹಲಿಗೆ ಕಳಿಸಲಾಗುವುದು ಎಂದು ಶಿವಕುಮಾರ್ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ