ಆಡಿಯೋ ಕ್ಲಿಪ್ನಲ್ಲಿ ನನ್ನ ವಿರುದ್ಧ ಮಾಡಿರುವ ಆರೋಪವನ್ನು ತನಿಖೆ ಮಾಡಲು ಹೇಳಿದ್ದೇನೆ: ಜಿ ಪರಮೇಶ್ವರ್
ನಿಗಮ ಮಂಡಳಿಗಳಿಗೆ ಅಧ್ಯಕ್ಷರ ನೇಮಕಾತಿಯಲ್ಲಿ ತನ್ನದೇನೂ ಪಾತ್ರವಿಲ್ಲ ಎಂದು ಗೃಹ ಸಚಿವ ಪರಮೇಶ್ವರ್ ಹೇಳುತ್ತಾರೆ. ತಮ್ಮ ಅಭಿಪ್ರಾಯ ಪರಿಗಣಿಸುವ ಅವಶ್ಯಕತೆಯಿಲ್ಲ ಎಂದ ಅವರು; ಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷ ಮತ್ತು ಕರ್ನಾಟಕದ ಎಐಸಿಸಿ ಉಸ್ತುವಾರಿ ನಡುವೆ ಕಳೆದ ವಾರ ಮಾತುಕತೆ ನಡೆದಿದೆ, ಅವರೇ ಪಟ್ಟಿಯನ್ನು ಅಂತಿಮಗೊಳಿಸುತ್ತಾರೆ ಅಂತ ಹೇಳಿದರು.
ಬೆಂಗಳೂರು: ಗೃಹಖಾತೆ ಸಚಿವ ಜಿ ಪರಮೇಶ್ವರ್ (G Parameshwar) ಸುದ್ದಿಯಲ್ಲಿದ್ದಾರೆ ಆದರೆ ಒಳ್ಳೆಯ ಕಾರಣಗಳಿಗಾಗಿ ಅಲ್ಲ ಅನ್ನೋದು ವಿಶೇಷ. ಯಾಕೆಂದರೆ, ಸಾಮಾನ್ಯವಾಗಿ ಅವರು ವಿವಾದಗಳಿಂದ ದೂರ ಇರುತ್ತಾರೆ. ಅವರ ವಿರುದ್ಧ ಕೇಳಿಬರುತ್ತಿರುವ ಆರೋಪ ಗಂಭೀರ ಸ್ವರೂಪದ್ದು. ಉಮಾಪತಿ (Umapathy) ಹೆಸರಿನ ವ್ಯಕ್ತಿ ಇವರು ಪಕ್ಷದ ಕಾರ್ಯಕರ್ತ ಕೂಡ ಹೌದು. ಇವರ ಆಡಿಯೋವೊಂದು ಬಯಲಾಗಿದ್ದು, ಅದರಲ್ಲಿ ಅವರು ಟ್ರಾನ್ಸ್ಫರ್ ಗೆ ಸಂಬಂಧಿಸಿದಂತೆ ಪರಮೇಶ್ವರ್ ಗೆ ಹಣ ನೀಡಿರುವುದಾಗಿ (bribe) ಹೇಳಿದ್ದಾರೆ. ನಗರದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳು ಆಡಿಯೋ ಕ್ಲಿಪ್ ಬಗ್ಗೆ ಕೇಳಿದಾಗ ಅವರು ವಿಚಲಿತರಾಗದೆ ತಮ್ಮ ಎಂದಿನ ಧಾಟಿಯಲ್ಲಿ ಉತ್ತರಿಸಿದರು. ಆಡಿಯೋ ಕ್ಲಿಪ್ ತಾವು ಸಹ ಕೇಳಿಸಿಕೊಂಡಿರುವುದಾಗಿ ಹೇಳಿದ ಪರಮೇಶ್ವರ್, ಮಾತಾಡಿರುವ ವ್ಯಕ್ತಿ ಗೃಹ ಸಚಿವರಿಗೆ ಹಣ ನೀಡಿರುವುದಾಗಿ ಹೇಳಿದ್ದಾರೆ, ಅದರರ್ಥ ಅವರು ತಮಗೆ ಹಣ ಮಾಡಿದ್ದಾರೆ ಅಂತಾಗುತ್ತದೆ. ಆ ವ್ಯಕ್ತಿ ಯಾರು, ಯಾವಾಗ ಹಣ ನೀಡಿದ್ದಾನೆ, ಯಾರಿಗೆ ನೀಡಿದ್ದಾನೆ, ಎಷ್ಟು ನೀಡಿದ್ದಾನೆ ಮೊದಲಾದ ಸಂಗತಿಗಳನ್ನು ತನಿಖೆ ಮಾಡುವಂತೆ ತಾವು ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಸೂಚನೆ ನೀಡಿರುವುದಾಗಿ ಪರಮೇಶ್ವರ್ ಹೇಳಿದರು. ಅಂದರೆ ಹಣ ನಿಮಗೆ ಸಂದಾಯವಾಗಿಲ್ಲ ಅಂತ ಕೇಳಿದಾಗ ಅದನ್ನೇ ತನಿಖೆ ಮಾಡಲು ಹೇಳಿದ್ದೇನೆ ಎಂದು ಅವರು ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ