DK Shivakumar DA Case; ಮೌಖಿಕ ಸೂಚನೆ ಮೂಲಕ ಶಿವಕುಮಾರ್ ಡಿಎ ಪ್ರಕರಣ ಸಿಬಿಐ ತನಿಖೆಗೆ ಒಪ್ಪಿಸಿದ್ದು ರಾಜಕೀಯ ಪ್ರೇರಿತ ಅಲ್ಲವೇ? ಜಿ ಪರಮೇಶ್ವರ್
ಹಿಂದಿನ ಸರ್ಕಾರ ಸಿಬಿಐ ತನಿಖೆಗೆ ಆದೇಶ ನೀಡುವ ಮೊದಲು ವಿಷಯವನ್ನು ವಿಧಾನಸಭಾಧ್ಯಕ್ಷರ ಗಮನಕ್ಕೆ ತಂದು ಅಥವಾ ಅವರ ಒಪ್ಪಿಗೆ ಪಡೆದು ಮುಂದುವರಿದ್ದರೆ ಪ್ರೋಸಿಜರಲ್ ಲ್ಯಾಪ್ಸ್ ಆಗುತ್ತಿರಲಿಲ್ಲ ಎನ್ನುವ ಗೃಹ ಸಚಿವ ಪರಮೇಶ್ವರ್ ತಮ್ಮ ಸರ್ಕಾರವ ಮೆರಿಟ್ ಆಫ್ ದಿ ಕೇಸ್ ಬಗ್ಗೆ ತಕಾರಾರು ಎತ್ತಿಲ್ಲ ಎನ್ನುತ್ತಾರೆ.
ಬೆಂಗಳೂರು: ಗೃಹ ಸಚಿವ ಜಿ ಪರಮೇಶ್ವರ್ (G Parameshwar) ಅವರು ಹೇಳುವ ಪ್ರಕಾರ ಡಿಕೆ ಶಿವಕುಮಾರ್ ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಸಿಬಿಐ ತನಿಖೆ ಆದೇಶವನ್ನು ಹಿಂಪಡೆಯುವ ಸರ್ಕಾರದ ನಿರ್ಧಾರ ರಾಜಕೀಯ ಪ್ರೇರಿತ (politically-motivated) ಅಲ್ಲ. ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಅವರು ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಮುಖ್ಯಮಂತ್ರಿಯಾಗಿದ್ದ ಬಿಎಸ್ ಯಡಿಯೂರಪ್ಪ (BS Yediyurappa) ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಕೇವಲ ಮೌಖಿಕ ಸೂಚನೆ ನೀಡಿ ಒಬ್ಬ ಶಾಸಕನ ವಿರುದ್ಧ ಸಿಬಿಐ ತನಿಖೆಗೆ ಆದೇಶ ನೀಡಿದ್ದು ರಾಜಕೀಯ ಪ್ರೇರಿತ ಅಲ್ಲವೇ ಅಂತ ಪ್ರಶ್ನಿಸಿದರು. ಆಗಿನ ಅಡ್ವೋಕೇಟ್ ಜನರಲ್ ಹೇಳಿದ್ದನ್ನೇ ಈಗಿನ ಅಡ್ವೋಕೇಟ್ ಜನರಲ್ ಸಹ ಹೇಳುತ್ತಿದ್ದಾರೆ. ತಮ್ಮ ಸರ್ಕಾರ ಕಾನೂನಿನ ಚೌಕಟ್ಟಿನಲ್ಲಿ ಸಾಧ್ಯವಿರುವುದನ್ನು ಮಾತ್ರ ಮಾಡಿದೆ ಎಂದು ಗೃಹ ಸಚಿವ ಹೇಳಿದರು. ಸಚಿವ ಸಂಪುಟದ ನಿರ್ಧಾರವನ್ನು ಕೋರ್ಟ್ ಗೆ ತಿಳಿಸುತ್ತೇವೆ ಮುಂದೇನಾಗಲಿದೆಯೋ ತಮಗೆ ಗೊತ್ತಿಲ್ಲ ಎಂದು ಹೇಳಿದ ಸಚಿವ, ಕಾನೂನು ಪ್ರಕ್ರಯೆಗೆ ದಕ್ಕೆಯಾಗಿದ್ದರೆ ಅದಕ್ಕೆ ಹಿಂದಿನ ಸರ್ಕಾರದ ದುಡುಕಿನ ನಿರ್ಧಾರ ಕಾರಣವೆಂದು ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ